Rashmika mandanna viral video : ಕಿರಿಕ್‌ ಪಾರ್ಟಿ ಸಿನಿಮಾದಿಂದ ಚಿತ್ರರಂದಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ, ಸೌತ್‌ ಸಿನಿರಂಗದ ಬಹುಬೇಡಿಕೆಯ ನಟಿಯಾಗಿದ್ದಾರೆ. ಕಳೆದ ವರ್ಷದಿಂದ ಈಕೆ ಸೌತ್‌ ಸಿನಿಮಾಗಳ ಜೊತೆ, ಬಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ಬೇರೆ ನಟಿಯರಿಗೆ ಹೋಲಿಸಿದರೆ, ರಶ್ಮಿಕಾ ಅತಿ ಹೆಚ್ಚು ಟ್ರೋಲ್‌ ಹಾಗು ಕಾಂಟ್ರವರ್ಸಿಗೆ ಒಳಗಾಗಿರುವ ನಟಿ. ಸದ್ಯ ಈ ನಟಿ ಸಿನಿಮಾಗಳ ಜೊತೆ ಜಾಹಿರಾತು ಶೂಟ್‌ಗಳಲ್ಲಿಯೂ ಬಿಸಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ನ್ಯಾಷುನಲ್‌ ಕ್ರಶ್‌ ರಶ್ಮಿಕಾ ಸಿನಿಮಾದಲ್ಲಿ ಮಿಂಚುವುದರ ಜೊತೆ ಹಲವಾರು ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ರಶ್ಮಿಕಾ ಆಭರಣದ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನ ಚಿತ್ರೀಕರಣದ ಸಂದರ್ಭದ ಕೆಲವು ಫೋಟೋಗಳು ಹಾಗು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್‌ ಸದ್ದು ಮಾಡುತ್ತಿವೆ.


ಇದನ್ನೂ ಓದಿ: ಹಳ್ಳಿ ಸೊಡಗಿನ ಸಿನಿಮಾ ಮೂಲಕ ಮತ್ತೆ ಬರ್ತಿದ್ದಾರೆ 'ರಾಜಹಂಸ' ಹೀರೋ ಗೌರಿ ಶಂಕರ್


ರಶ್ಮಿಕಾ ತುಂಬ ಬಿಸಿಯಾಗಿರುವ ನಟಿ ಎಂದು ಎಲ್ಲರಿಗೂ ತಿಳಿದೆಯಿದೆ. ವಿಶ್ರಾಂತಿ ಇಲ್ಲದೆ ಸದಾ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಸರಿಯಾಗಿ ನಿದ್ರೆ ಮಾಡಲು ಸಹ ಸಮಯವಿಲ್ಲದಂತಾಗಿದೆ ಎಂದು ಅನಿಸುತ್ತದೆ. ಏಕೆಂದರೆ ರಶ್ಮಿಕಾ ಆಡ್‌ ಶೂಟ್‌ ವೇಳೆ ನಿದ್ರೆಗೆ ಜಾರಿರುವ ಫೋಟೋ ಹಾಗು ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. ಆಭರಣ ತೊಟ್ಟು ಶೂಟಿಂಗ್‌ನ ಬ್ರೇಕ್‌ ವೇಳೆ ನಿದ್ರೆ ಮಾಡಿದ್ದಾರೆ. 


ಜಾಹೀರಾತು ಚಿತ್ರೀಕರಣದ ವೇಳೆ ರಶ್ಮಿಕಾ ಮೊದಲಿಗೆ ವಿಭಿನ್ನವಾದ ಡಿಸೈನ್‌ಗಳ ಆಭರಣ ತೊಟ್ಟು ಪೋಸ್ ಕೊಟ್ಟಿದ್ದಾರೆ. ಅದರ ಮಧ್ಯೆದಲ್ಲಿ ಕೊಂಚ ನಿದ್ದೆ ಎಳೆದಿದೆ ಅನಿಸುತ್ತೆ. ಅಲ್ಲಿವರೆಗೂ ಮಸ್ತ್ ಪೋಸ್ ಕೊಟ್ಟ ರಶ್ಮಿಕಾ ಜಾಹಿರಾತು ಶೂಟ್‌ ಮಾಡುತ್ತಿದ್ದ ಕಾರಿನಲ್ಲಿಯೇ ಮಲಗಿಕೊಂಡಿದ್ದಾರೆ. 


ಇದನ್ನೂ ಓದಿ:ರಜನಿಕಾಂತ್ ವೈರಲ್‌ ಫೋಟೋ ಹಿಂದಿನ ರಹಸ್ಯ ಬಯಲು..! ಅಸಲಿಗೆ ಸತ್ಯ ಏನ್‌ ಗೊತ್ತಾ..?


ಸದ್ಯ ರಶ್ಮಿಕಾ ಅಭಿನಯದ ʼಅನಿಮಲ್‌ʼ ಚಿತ್ರ ಐದು ಭಾಷೆಗಳಲ್ಲಿ ಇದೇ ಡಿಸೆಂಬರ್‌ನಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. ಹಾಗೆ ಪುಷ್ಪ-2 ಸಿನಿಮಾ ಸಹ ಮುಂದಿನ ವರ್ಷ ತೆರೆ ಕಾಣಲು ರೆಡಿಯಾಗುತ್ತಿದೆ. ಇದರಲ್ಲಿ ರಶ್ಮಿಕಾ ಹೇಗೆ ಕಾಣಬುಹುದು ಎಂಬ ಕುತೂಹಲವೂ ಸಹ ಪ್ರೇಕ್ಷಕರಲ್ಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.