Rashmika Mandanna : ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಸಧ್ಯ ಬಾಲಿವುಡ್‌ನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪಾ ಸಿನಿಮಾದಿಂದ ಕ್ರೇಜ್‌ ಗಿಟ್ಟಿಸಿಕೊಂಡ ಸುಂದರಿ ನಟಿಸಿರುವ ಎಲ್ಲಾ ಚಿತ್ರಗಳು ಸೂಪರ್‌ ಹಿಟ್‌ ಆಗುತ್ತಿವೆ. ಇದರ ನಡುವೆ ಸಧ್ಯ ನಾಷುನಲ್‌ ಕ್ರಶ್‌ ವಿಶಿಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಇತ್ತೀಚಿಗೆ ರಶ್ಮಿಕಾ ಮಂದಣ್ಣ ʼಕ್ರಾಂಚಿರಾ ರೋಲ್ ಅನಿಮೆ ಅವಾರ್ಡ್ಸ್ʼ (Crunchy Roll Anime Awards) ಅಂಗವಾಗಿ ಭಾರತದ ಪರವಾಗಿ ಜಪಾನ್‌ನ ಟೋಕಿಯೊಗೆ ಹೋಗಿದ್ದರು. ಜಾಗತಿಕ ಕಾರ್ಯಕ್ರಮವಾಗಿ ನಡೆಯುತ್ತಿರುವ ಈ ಪ್ರಶಸ್ತಿ ಸಮಾರಂಭದಲ್ಲಿ ರಶ್ಮಿಕಾ ಭಾರತವನ್ನು ಪ್ರತಿನಿಧಿಸಿದ್ದರು. 


ಇದನ್ನೂ ಓದಿ:ಇವರೇ ನಟ ಧನುಷ್‌ ನಿಜವಾದ ತಂದೆ-ತಾಯಿ..! ಕೋರ್ಟ್‌ ತೀರ್ಪು ಬಹಿರಂಗ 


ಈ ಗೌರವಕ್ಕೆ ಪಾತ್ರರಾದ ಏಕೈಕ ನಟಿಯಾಗಿ ರಶ್ಮಿಕಾ ಹೊರಹೊಮ್ಮಿದ್ದಾರೆ. ರಶ್ಮಿಕಾ ಮಂದಣ್ಣ ಬ್ರಾಂಡ್ ಅಂಬಾಸಿಡರ್ ಆಗಿರುವ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್, ಮಿಲನ್ ಫ್ಯಾಶನ್ ವೀಕ್‌ನಲ್ಲಿ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದುಕೊಂಡಿದೆ. 


ಮಾಧ್ಯಮದ ಪ್ರಕಾರ, ಒನಿಟ್ಸುಕಾ ಟೈಗರ್ ಫ್ಯಾಷನ್ ಬ್ರ್ಯಾಂಡ್ 75 ಲಕ್ಷ ಡಾಲರ್ ಮೌಲ್ಯವನ್ನು ಹೊಂದಿದೆ. ಕಳೆದ ತಿಂಗಳು 20ರಿಂದ 26ರವರೆಗೆ ಇಟಲಿಯ ಮಿಲಾನ್ ನಲ್ಲಿ ನಡೆದ ಫ್ಯಾಷನ್ ವೀಕ್ ನಲ್ಲಿ ರಶ್ಮಿಕಾ ಮಂದಣ್ಣ ರ್ಯಾಂಪ್ ವಾಕ್ ಮಾಡಿದ್ದರು. ರಶ್ಮಿಕಾ ಈ ಫ್ಯಾಷನ್ ಶೋನಲ್ಲಿ ಭಾಗವಹಿಸುವ ಮೂಲಕ ಒನಿಟ್ಸುಕಾ ಟೈಗರ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಿದರು. 


ಇದನ್ನೂ ಓದಿ:ಅಮಿತಾಬ್‌ ಜೀ ಆರೋಗ್ಯಕ್ಕೆ ಏನಾಗಿದೆ..! 81 ವರ್ಷದ ಬಿಗ್‌ ಬಿಗೆ ಶಸ್ತ್ರಚಿಕಿತ್ಸೆ ಏಕೆ..? 


ಸದ್ಯ ರಶ್ಮಿಕಾ ಮಂದಣ್ಣ ಪುಷ್ಪಾ 2, ದಿ ಗರ್ಲ್ ಫ್ರೆಂಡ್ ಸಿನಿಮಾಗಳ ಜೊತೆಗೆ ಹಿಂದಿ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಇನ್‌ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಮಂದಣ್ಣ 40 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.