Rashmika Mandanna Valentine Day wish : ದಕ್ಷಿಣ ಭಾರತದ ಪ್ರಮುಖ ನಟಿ ರಶ್ಮಿಕಾ ಮಂದಣ್ಣ, ಸೋಷಿಯಲ್ ಮೀಡಿಯಾದಲ್ಲಿ ತನ್ನ ಪೋಸ್ಟ್‌ಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ನ್ಯಾಷನಲ್‌ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಆಗಾಗ್ಗೆ ಟ್ರೋಲ್‌ಗೆ ಒಳಗಾಗುತ್ತಿದ್ದರೂ, ರಶ್ಮಿಕಾ ಡಿಮ್ಯಾಂಡ್‌ ಮಾತ್ರ ಕಡಿಮೆಯಾಗಿಲ್ಲ. ಅವರ ಪಾಸಿಟಿವಿಟಿ ಕೆಲವರಿಗೆ ಪ್ರೇರಣೆಯಾಗಿದೆ. ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವ್ಯಾಲೆಂಟೈನ್‌ ಯಾರು ಎಂದು ಊಹಿಸುವ ಟಾಸ್ಕ್‌ನ್ನು ನೀಡಿದ್ದರು. ವ್ಯಾಲೆಂಟೈನ್ಸ್‌ ಡೇಗೂ ಕೆಲ ದಿನಗಳ ಮುನ್ನ ರಶ್ಮಿಕಾ ಇಂತಹದೊಂದು ಪೋಸ್ಟ್‌ ಹಾಕಿದ್ದರು. ಇದೀಗ ನಿನ್ನೆ ಪ್ರೇಮಿಗಳ ದಿನದಂದು ತಮ್ಮ ವ್ಯಾಲೆಂಟೈನ್‌ ಯಾರು ಎಂದು ರಿವೀಲ್‌ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಬಗ್ಗೆ ಹಲವು ದಿನಗಳಿಂದ ಡೇಟಿಂಗ್‌ ಗಾಸಿಪ್‌ ಹರಿದಾಡುತ್ತಿದೆ. ಆದರೆ ಇದನ್ನು ಇಬ್ಬರೂ ಒಪ್ಪಿಕೊಂಡಿಲ್ಲ. ಈ ನಡುವೆ ಇಂತಹದೊಂದು ವಿಡಿಯೋವನ್ನು ರಶ್ಮಿಕಾ ಮಂದಣ್ಣ ಪೋಸ್ಟ್‌ ಮಾಡಿದ್ದು, ಎಲ್ಲರಿಗೂ ಶಾಕ್‌ ಆಗಿದೆ. ಸ್ವೀಟೆಸ್ಟ್‌ ವಿಡಿಯೋ ಒಂದನ್ನು ರಶ್ಮಿಕಾ ಶೇರ್‌ ಮಾಡಿದ್ದು, ಅದರಲ್ಲಿ ಅವರು ತಮ್ಮ ವ್ಯಾಲೆಂಟೈನ್‌ಗೆ ಕಿಸ್‌ ಕೊಟ್ಟಿದ್ದಾರೆ. ಈ ವಿಡಿಯೋ ನೆಟ್ಟಿಗರ ಗಮನಸೆಳೆದಿದ್ದು, ಸಖತ್‌ ವೈರಲ್‌ ಆಗುತ್ತಿದೆ. 


ಇದನ್ನೂ ಓದಿ : ದುನಿಯಾ ವಿಜಯ್ ಮುಂದಿನ ಪ್ರಾಜೆಕ್ಟ್ ಗೇ ಹೀರೋಯಿನ್ ಫಿಕ್ಸ್..!


 



 


ತನ್ನ ಮುದ್ದಾದ ಶ್ವಾನದ ಜೊತೆ ಕ್ಯೂಟ್‌ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ತನ್ನ ಹಾಸಿಗೆಯ ಮೇಲೆ ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು, ಔರಾ (ರಶ್ಮಿಕಾ ಅವರ ಶ್ವಾನ) ಅವರ ಮೇಲೆ ಹಾರಿ ಖುಷಿಯಿಂದ ಕುಣಿಯುವುದನ್ನು ಕಾಣಬಹುದು. ಈ ವಿಡಿಯೋವನ್ನು ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿದ್ದು, "Happy Valentine’s Day from us to you my loves" ಎಂದು ಬರೆದಿದ್ದಾರೆ. ವಿಶೇಷ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ಎಂದಿನಂತೆ, ಅಭಿಮಾನಿಗಳು ಮತ್ತು ಅನುಯಾಯಿಗಳು ಈಗ ರಶ್ಮಿಕಾ ಮಂದಣ್ಣ ಮತ್ತು ಔರಾ ಅವರ ಮುದ್ದಾದ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. 


 



 


ಅಲ್ಲದೇ ಇದರ ಜೊತೆಗೆ, ಕೋಲ್ಡ್‌ ಡ್ರಿಂಕ್ಸ್ ಕಂಪನಿ 7ಅಪ್ ಜತೆ ರಶ್ಮಿಕಾ ಒಪ್ಪಂದ ಮಾಡಿಕೊಂಡಿದ್ದಾರೆ. ರಶ್ಮಿಕಾ 7Up ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದಾರೆ. ವ್ಯಾಲೆಂಟೈನ್ ಡೇ ದಿನವೇ ಈ ವಿಚಾರವನ್ನು ಸಹ ರಿವೀಲ್ ಮಾಡಿದ್ದಾರೆ. 7Up ಲೋಗೋಗೆ ಫ್ಲೈಯಿಂಗ್ ಕಿಸ್ ಕೊಡುತ್ತಿರುವ ಅವರ ವಿಡಿಯೋ ಕೂಡ ಸಾಕಷ್ಟು ಹರಿದಾಡುತ್ತಿದೆ.


ಇದನ್ನೂ ಓದಿ : ನನ್ನ ಮೂಗಿನ ಹಾಗೇ ಮಗಳ ಮೂಗು ಕೂಡ ಇದೆ ಅಂದ್ರು ಧ್ರುವ ಸರ್ಜಾ...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.