ದುನಿಯಾ ವಿಜಯ್ ಮುಂದಿನ ಪ್ರಾಜೆಕ್ಟ್ ಗೇ ಹೀರೋಯಿನ್ ಫಿಕ್ಸ್..!

ದುನಿಯಾ ವಿಜಯ್ ಈಗ ಫುಲ್ ಬ್ಯುಸಿ ಆಗಿದ್ದಾರೆ.ಇತ್ತೀಚಿಗಷ್ಟೇ ಅಭಿಮಾನಿಗಳ ಜೊತೆ ಸಖತ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಪ್ರೇಮಿಗಳ ದಿನದ ವಿಶೇಷವಾಗಿ ಭೀಮ ಸಿನಿಮಾದ ಹೀರೋಯಿನ್ ಯಾರು ಅನ್ನೋ ಮ್ಯಾಟರ್ ನ ಇದೀಗ ರಿವಿಲ್ ಮಾಡಿದ್ದಾರೆ ಸಲಗ.

Written by - YASHODHA POOJARI | Last Updated : Feb 14, 2023, 02:50 PM IST
  • ಪ್ರೇಮಿಗಳ ದಿನದ ವಿಶೇಷವಾಗಿ ಭೀಮ ಸಿನಿಮಾದ ಹೀರೋಯಿನ್ ಯಾರು ಅನ್ನೋ ಮ್ಯಾಟರ್ ನ ಇದೀಗ ರಿವಿಲ್ ಮಾಡಿದ್ದಾರೆ ಸಲಗ.
  • ಬಿಡುಗಡೆ ಆಗಿರುವ ಫಸ್ಟ್ ಲುಕ್ ನಾನಾ ಸುದ್ದಿಗಳನ್ನು ನೀಡುತ್ತಿದೆ.
  • ಭೀಮ ಸಿನಿಮಾದಲ್ಲೂ ಹೊಸ ಟ್ಯಾಲೆಂಟ್ ಗಳಿಗೆ ಅವಕಾಶ ಕೊಟ್ಟು ಇಂಡಸ್ಟ್ರಿ ಬೆಳೆಸುವಲ್ಲಿ ಕೆಲಸ ಮಾಡುತ್ತಿದ್ದಾರೆ ದುನಿಯಾ ವಿಜಯ್.ಸೋ ನಮ್ಮ ಕಡೆಯಿಂದಲೂ ಸಲಗನಿಗೆ ಆಲ್ ದಿ ಬೆಸ್ಟ್.
ದುನಿಯಾ ವಿಜಯ್ ಮುಂದಿನ ಪ್ರಾಜೆಕ್ಟ್ ಗೇ ಹೀರೋಯಿನ್ ಫಿಕ್ಸ್..!  title=

ದುನಿಯಾ ವಿಜಯ್ ಈಗ ಫುಲ್ ಬ್ಯುಸಿ ಆಗಿದ್ದಾರೆ.ಇತ್ತೀಚಿಗಷ್ಟೇ ಅಭಿಮಾನಿಗಳ ಜೊತೆ ಸಖತ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಪ್ರೇಮಿಗಳ ದಿನದ ವಿಶೇಷವಾಗಿ ಭೀಮ ಸಿನಿಮಾದ ಹೀರೋಯಿನ್ ಯಾರು ಅನ್ನೋ ಮ್ಯಾಟರ್ ನ ಇದೀಗ ರಿವಿಲ್ ಮಾಡಿದ್ದಾರೆ ಸಲಗ.ಇವರ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿ ಬರುತ್ತಿರುವ ಭೀಮಾ ಸಿನಿಮಾದ ನಾಯಕಿಯನ್ನು ಪರಿಚಯಿಸಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ. ನಾಯಕಿಯ ಫಸ್ಟ್ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದವರು ಅಶ್ವಿನಿ. ರಂಗಭೂಮಿ ಹಿನ್ನೆಲೆಯ ಈ ನಟಿ ಈಗಾಗಲೇ ಸಾಕಷ್ಟು ನಾಟಕಗಳಲ್ಲೂ ಅಭಿನಯಿಸಿದ್ದಾರೆ.

ರಂಗಭೂಮಿಯ ಪ್ರತಿಭೆಯನ್ನು ಈ ಬಾರಿ ತಮ್ಮ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ ದುನಿಯಾ ವಿಜಯ್. ಈ ಸಿನಿಮಾದಲ್ಲಿ ಅಶ್ವಿನಿ ಯಾವ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ಬಿಡುಗಡೆ ಆಗಿರುವ ಫಸ್ಟ್ ಲುಕ್ ನಾನಾ ಸುದ್ದಿಗಳನ್ನು ನೀಡುತ್ತಿದೆ.
ಸಲಗ ಸಿನಿಮಾದ ಕಂಪ್ಲೀಟ್ ಜವಾಬ್ದಾರಿ ಹೊತ್ತು  ಹಿಟ್ ಲಿಸ್ಟ್ ಸೇರುವಂತೆ ಮಾಡಿದ ದುನಿಯಾ ವಿಜಯ್ ಈಗ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೇ ಇಳಿದಿದ್ದಾರೆ.

ಇದನ್ನೂ ಓದಿ-ನನ್ನ ಮೂಗಿನ ಹಾಗೇ ಮಗಳ ಮೂಗು ಕೂಡ ಇದೆ ಅಂದ್ರು ಧ್ರುವ ಸರ್ಜಾ...!

ಭೀಮ ಸಿನಿಮಾ ಮೂಲಕ ಮತ್ತೇ ದೊಡ್ಡ ಹೊಣೆಗಾರಿಕೆಯನ್ನ ಹೆಗಲ ಮೇಲೆ ಹಾಕೊಂಡು ಸಿನಿಪ್ರಿಯರಿಗೆ ಸಖತ್ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ತೆಲುಗು ಸಿನಿಮಾದಲ್ಲಿ ಮಿಂಚು ಹರಿಸಿರೋ ದುನಿಯಾ ವಿಜಯ್ ಈಗ ಫುಲ್ ಬ್ಯುಸಿ ನಟ.ಭೀಮ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗೋ ಲಕ್ಷಣ ಕಾಣಿಸುತ್ತಿದೆ.ಭೀಮ ಸಿನಿಮಾದ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ನೋಡೋಣ ಮುಂದಿನ ದಿನಗಳಲ್ಲಿ ಯಾವ ರೀತಿಯ ಅಪ್ಡೇಟ್ ಕೊಡ್ತಾರೆ ಅಂತ.

 ಸಲಗ ಸಿನಿಮಾದಲ್ಲಿ ಹೊಸ ಪ್ರತಿಭೆಗಳಿಗೆ ದುನಿಯಾ ವಿಜಯ್ ಅವಕಾಶ ಕೊಟ್ಟು ಅವರ ಬದುಕಿಗೆ ದಾರಿದೀಪವಾಗಿದ್ದರು. ಭೀಮ ಸಿನಿಮಾದಲ್ಲೂ ಹೊಸ ಟ್ಯಾಲೆಂಟ್ ಗಳಿಗೆ ಅವಕಾಶ ಕೊಟ್ಟು ಇಂಡಸ್ಟ್ರಿ ಬೆಳೆಸುವಲ್ಲಿ ಕೆಲಸ ಮಾಡುತ್ತಿದ್ದಾರೆ ದುನಿಯಾ ವಿಜಯ್.ಸೋ ನಮ್ಮ ಕಡೆಯಿಂದಲೂ ಸಲಗನಿಗೆ ಆಲ್ ದಿ ಬೆಸ್ಟ್.

ಇದನ್ನೂ ಓದಿ-ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿದೆ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಅವರ 'ಮಾರ್ಟಿನ್'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News