'National crush' Rashmika Mandanna: ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜಗತ್ತಿಗೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿನ ದಿನಗಳಲ್ಲಿ ನ್ಯಾಷನಲ್ ಕ್ರಶ್ ಎಂದರೆ ತಪ್ಪಾಗಲಾರದು. 


COMMERCIAL BREAK
SCROLL TO CONTINUE READING

ಸ್ಯಾಂಡಲ್ ವುಡ್ (Sandalwood) ನಿಂದ ಟಾಲಿವುಡ್ ಗೆ ಹಾರಿ ತೆಲುಗಿನಲ್ಲೂ ಫೇಮಸ್ ಆಗಿರುವ ಕಿರಿಕ್ ಬೆಡಗಿ ಇದೀಗ ಬಾಲಿವುಡ್ ಮತ್ತು ಕಾಲಿವುಡ್ ಗೂ ಕಾಲಿಟ್ಟಿದ್ದಾರೆ. ದೇಶದ ಅತ್ಯುತ್ತಮ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಶ್ಮಿಕಾ ಮಂದಣ್ಣ (Rashmika Mandanna) ಸೌಂದರ್ಯದ ವಿಷಯದಲ್ಲಿ ಯಾವುದೇ ಬಾಲಿವುಡ್ ನಟಿಯರಿಗಿಂತ ಕಡಿಮೆ ಇಲ್ಲ. ಇಂದು ರಶ್ಮಿಕಾ ಮಂದಣ್ಣ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿ.


ಇದನ್ನೂ ಓದಿ - Rocking Star Yash: ಕನ್ನಡ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ನೆರವು ಘೋಷಿಸಿದ ಯಶ್


ರಶ್ಮಿಕಾ ಮಂದಣ್ಣ (Rashmika Mandanna) ಇನ್ಸ್ಟಾಗ್ರಾಮ್ನಲ್ಲಿ ಕೂಡ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ಅವರ ಸುಂದರವಾದ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಬ್ಲಾಕ್ ಅಂಡ್ ವೈಟ್ ಚಿತ್ರಗಳನ್ನು ಶೇರ್ ಮಾಡಿದ್ದು ಅವು ತುಂಬಾ ವೈರಲ್ ಆಗುತ್ತಿವೆ.


ಕನ್ನಡದ ಪಲ್ಲವಿ ಅನುಪಲ್ಲವಿ ಮೂಲಕ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟಿದ್ದ ಮಣಿರತ್ನಂ


ನಟಿ ರಶ್ಮಿಕಾ ಮಂದಣ್ಣ ಅವರು 2014 ರಲ್ಲಿ  'ಟೈಮ್ಸ್ ಫ್ರೆಶ್ ಫೇಸ್ ಅವಾರ್ಡ್' (Times Fresh Face Award) ಅನ್ನು ಪಡೆದರು ಮತ್ತು 2021 ರಲ್ಲಿ 'ಬೆಂಗಳೂರು ಟೈಮ್ಸ್ ಮೋಸ್ಟ್ ಡಿಜೈರೆಬಲ್ ವುಮೆನ್ 2020' ('Bangalore Times Most Desirable Women 2020) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.