Rashmika Mandana ಅವರ ನೆಚ್ಚಿನ ಐಪಿಎಲ್ ತಂಡ ಯಾವುದು ಗೊತ್ತೇ?

ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರನ್ನು 2020 ರಲ್ಲಿ ನ್ಯಾಷನಲ್ ಕ್ರಷ್ ಆಫ್ ಇಂಡಿಯಾ 2020 ಸ್ತ್ರೀ (National Crush Of India 2020 Female)  ಎಂದು ಗೂಗಲ್ ಘೋಷಿಸಿತು. 25 ವರ್ಷದ ನಟಿ ತನ್ನ ನೆಚ್ಚಿನ ಐಪಿಎಲ್ ತಂಡ ಯಾವುದು ಎಂದು ಹೇಳಿದರು.

Written by - Yashaswini V | Last Updated : May 1, 2021, 12:25 PM IST
  • ದಕ್ಷಿಣ ಭಾರತದ ಪ್ರಸಿದ್ಧ ನಟಿ ರಶ್ಮಿಕಾ ಮಂದಣ್ಣ
  • ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ರಶ್ಮಿಕಾ
  • ಇನ್ಸ್ಟಾಗ್ರಾಮ್ ಲೈವ್ನಲ್ಲಿ ತಮ್ಮ ನೆಚ್ಚಿನ ಐಪಿಎಲ್ ತಂಡದ ಬಗ್ಗೆ ಬಾಯ್ಬಿಟ್ಟ ರಶ್ಮಿಕಾ
Rashmika Mandana ಅವರ ನೆಚ್ಚಿನ ಐಪಿಎಲ್ ತಂಡ ಯಾವುದು ಗೊತ್ತೇ? title=
Rashmika Mandanna Favourite IPL Team

ನವದೆಹಲಿ: ಐಪಿಎಲ್ 2021 ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಆದಾಗ್ಯೂ, ಚಲನಚಿತ್ರ ತಾರೆಯರು ಸಹ ಸಾಮಾನ್ಯ ಪ್ರೇಕ್ಷಕರಂತೆ ಪಂದ್ಯಾವಳಿಯ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಕಿರಿಕ್ ಬೆಡಗಿ, ರಶ್ಮಿಕಾ ಮಂದಣ್ಣ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತಂಡದ ಅಭಿಮಾನಿ ಎಂದು ನಿಮಗೆ ತಿಳಿದಿದೆಯೇ?

ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೂ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ :
25 ವರ್ಷದ ರಶ್ಮಿಕಾ ಮಂದಣ್ಣ  (Rashmika Mandanna) ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲಿಯೂ ಬಹಳ ಜನಪ್ರಿಯವಾಗಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಶ್ಮಿಕಾ 2018 ರಲ್ಲಿ ಚಲೋ ಚಿತ್ರದ ಮೂಲಕ ತೆಲುಗಿಗೆ ಪದಾರ್ಪಣೆ ಮಾಡಿದರು. ಸುಲ್ತಾನ್ ಅವರ ಮೊದಲ ತಮಿಳು ಚಿತ್ರ. ಈವರೆಗೆ ರಶ್ಮಿಕಾ ಅವರ 10 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಚಿತ್ರಗಳ ಯಶಸ್ಸು ಮತ್ತು ಪ್ರತಿಭೆಯಿಂದಾಗಿ ರಶ್ಮಿಕಾ ಜನರ ಹೃದಯದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.

ಇದನ್ನೂ ಓದಿ - IPL 2021: ಪಾಯಿಂಟ್ ಟೇಬಲ್‌ನಲ್ಲಿ ಈ ತಂಡಕ್ಕೆ ಲಾಭ, ಯಾರಿಗೆ ಸಿಕ್ಕಿದೆ ಆರೆಂಜ್, ಪರ್ಪಲ್ ಕ್ಯಾಪ್?

ರಶ್ಮಿಕಾ ಅವರ ನೆಚ್ಚಿನ ಐಪಿಎಲ್ ತಂಡ:
ಇನ್‌ಸ್ಟಾಗ್ರಾಮ್ ಲೈವ್ ಸೆಷನ್ (Instagram Live Session) ವೇಳೆ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಲ್ಲಿ ಒಬ್ಬರು ತಮ್ಮ ನೆಚ್ಚಿನ ಐಪಿಎಲ್ (IPL) ತಂಡ ಯಾವುದು ಎಂದು ಕೇಳಿದರು. ನಟಿ ಕನ್ನಡ ಭಾಷೆಯಲ್ಲಿ ಪ್ರತಿಕ್ರಿಯಿಸಿ, 'ಈ ಸಲಾ ಕಪ್ ನಮ್ದೆ' ಎಂದು ಹೇಳಿದರು. ಅಂದರೆ ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಅವರ ನೆಚ್ಚಿನ ತಂಡ ಆರ್‌ಸಿಬಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ - Rashmika Mandanna: 'RC 15' ಚಿತ್ರದಲ್ಲಿ ಪತ್ರಕರ್ತೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?

ಆರ್‌ಸಿಬಿ ಅಭಿಮಾನಿಗಳ ಸಂಭ್ರಮ:
ರಶ್ಮಿಕಾ ಮಂದಣ್ಣ ಅವರ ಈ ಉತ್ತರ ಆರ್‌ಸಿಬಿ ಅಭಿಮಾನಿಗಳಿಗೆ ಒಂದು ರೀತಿಯ ರೋಮಾಂಚನ ಹುಟ್ಟಿಸಿದೆ. ವಿರಾಟ್ ಕೊಹ್ಲಿ ತಂಡದ ಅಭಿಮಾನಿಗಳು ಈಗ ಈ ನಟಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಟ್ವಿಟರ್‌ನಲ್ಲಿ ಮೈಮ್‌ಗಳ ಪ್ರವಾಹವೇ ಉಂಟಾಗಿದ್ದು ಆರ್‌ಸಿಬಿ ಜರ್ಸಿಯಲ್ಲಿ ಹೊರಬರುವಂತೆ ಅನೇಕ ಅಭಿಮಾನಿಗಳು ರಶ್ಮಿಕಾಗೆ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News