KGF Actress Birthday Plan: ರವೀನಾ ಟಂಡನ್‌ 90ರ ದಶಕದಲ್ಲಿ ದೊಡ್ಡ ಅಭಿಮಾನಿಗಳ ಬಳಗ ಹೊಂದಿದ್ದ ಬಾಲಿವುಡ್ ನಟಿ, ಈಕೆ ಸದ್ಯ ತಮ್ಮ 49ನೇಯ ಹುಟ್ಟು ಹಬ್ಬದ ಆಚರಣೆಯ ತಯಾರಿಯಲ್ಲಿ ಬಿಸಿಯಾಗಿದ್ದಾರೆ. ರವಿನಾಗೆ ತಮ್ಮ ಕುಟುಂಬದವರ ಜೊತೆಗೆ ಊರ ಆಚೆಯಲ್ಲಿ ತಮ್ಮ ಬರ್ತ್‌ಡೇ ಸೆಲೆಬ್ರೆಟ್‌ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ನಟಿ ರವೀನಾ, ತಮ್ಮ ಬರ್ತ್‌ಡೇ ಪ್ಲಾನ್‌ ಬಗ್ಗೆ ರಿವಿಲ್‌ ಮಾಡಿದ್ದಾರೆ. ಈ ಬಾರಿ ಜನ್ಮದಿನವನ್ನು ತಮ್ಮ ಮಗಳ ಜೊತೆ ಕಾಡಿನ ಮಧ್ಯೆ ತುಂಬಾ ಸ್ಪೇಷಲ್ ಆಗಿ ಆಚರಿಸಿಕೊಳ್ಳಲು ಇಚ್ಚಿಸುತ್ತಾರಂತೆ ನಟಿ ರವೀನಾ ಟಂಡನ್. 


COMMERCIAL BREAK
SCROLL TO CONTINUE READING

ಪಿಂಕ್‌ವಿಲ್ಲಾದ ಸಂದರ್ಶನದಲ್ಲಿ ಮಾತನಾಡಿದ ನಟಿ ರವಿನಾ ಟಂಡನ್, "ನನ್ನ ಬರ್ತ್‌ಡೇ ಸೆಲೆಬ್ರೇಷನ್ ಯಾವಾಗಲು ನಮ್ಮ ಕುಟುಂಬ ಹಾಗು ನಮಗೆ ಹತ್ತಿರದವರ ಜೊತೆ ನಡೆಯುತ್ತದೆ. ನನ್ನ ಹುಟ್ಟುಹಬ್ಬಕ್ಕೆ ನನ್ನ ಮಕ್ಕಳು ಯಾವಾಗಲು ರಾತ್ರಿ 12 ಗಂಟೆಗೆ  ಏನಾದರೂ ಸಪ್ರೈಸ್‌ ಪ್ಲಾನ್‌ ಮಾಡಿರುತ್ತಾರೆ. ಆದರೆ ಈ ಬಾರಿ ನನ್ನ ಮಗಳು, ನಾನು ನಿನಗೆ ಈ ಬಾರಿ ನಿನಗೋಸ್ಕರ ಏನು ಮಾಡಲಿ ಎಂದು ಕೇಳಿದಳು. ಅದಕ್ಕೆ ನಾನು ಬಾ ನಾವಿಬ್ಬರು ಕಾಡಿನೊಳಗೆ ಓಡಿ ಹೋಗೋಣ, ಅಲ್ಲಿ ನನ್ನ ಹುಟ್ಟು ಹಬ್ಬ ಸೆಲೆಬ್ರೇಟ್‌ ಮಾಡೋಣ ಅಂತ ಹೇಳಿದೆ. ಯಾವಾಗಲೂ ನಾವು ಅವಳ ಹುಟ್ಟುಹಬ್ಬಕ್ಕೆ ಈ ರೀತಿ ಏನಾದರೂ ಪ್ಲಾನ್ ಮಾಡುತ್ತಿರುತ್ತೇವೆ. ಆದರೆ, ಈ ವರ್ಷ ನನ್ನ ಹುಟ್ಟು ಹಬ್ಬಕ್ಕೆ ಈ ರೀತಿಯಾಗಿ ಪ್ಲಾನ್ ಮಾಡುತ್ತಿದ್ದೇವೆ. ಇದು ರಾಶಾಗೆ ಹಾಗೂ ನನಗೆ ಬೆಸ್ಟ್‌ ಸ್ಥಳ" ಎಂದು ಹೇಳಿದ್ದಾರೆ.


ಇದನ್ನೂ ಓದಿ- ದೀಪಿಕಾ ತಾಯಿಗೆ ರಣವೀರ್ ಸಿಂಗ್ ಇಷ್ಟವಿರಲಿಲ್ಲ, ಕೊನೆಗೆ ಒಪ್ಪಿಸಿದ್ದು ಹೇಗೆ?


ಇತ್ತೀಚೆಗೆ ರವಿನಾ ಪುತ್ರಿ ರಾಶಾ ದುರ್ಗಾ ಪೂಜೆ ಆಚರಣೆಯ ಒಂದು ವಿಡಿಯೋವನ್ನು  ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳಿಗೆ ಸಂತಸ ನೀಡಿದ್ದರು. ಆ ವೀಡಿಯೊದಲ್ಲಿ, ರಾಶಾ ತಮ್ಮ ತಾಯಿ ರವೀನ್ ಟಂಡನ್ ಹಾಗೂ ಇವರ ಜೊತೆಗೆ ನಟಿ ಸಾರಾ ಅಲಿ ಖಾನ್ ಮತ್ತು ಮನೀಶ್ ಮಲ್ಹೋತ್ರಾ, ಎಲ್ಲಾರೂ ನವರಾತ್ರಿಯಂದು ದುರ್ಗಾದೇವಿಗೆ ಆರತಿಯನ್ನು ಮಾಡುವ ದೃಶ್ಯವನ್ನು ಸೆರೆಹಿಡಿಯಲಾಗಿತ್ತು. ಈ ವಿಡಿಯೋದಲ್ಲಿ ರವೀನಾ ಹಾಗೂ ಅವರ ಪುತ್ರಿ ಇಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ರವೀನಾ  ಗೋಟಾ ಪಟ್ಟಿಯ ಡಿಸೈನ್‌ ಹೊಂದಿರುವ ಕೆಂಪು ಸೂಟ್‌ ಧರಿಸಿದ್ದರು. ಅವರ ಮಗಳು ರಾಶಾ ತನ್ನ ಕೂದಲನ್ನು ಪೋನಿಟೇಲ್‌ನಲ್ಲಿ ಸ್ಟೈಲ್‌ನಲ್ಲಿ ಹಾಕಿಕೊಂಡು ಹಳದಿ ಸೂಟ್‌ನಲ್ಲಿ ಮಿಂಚಿದ್ದಾರೆ.  


ಸದ್ಯ ರವೀನಾ ಟಂಡನ್‌  ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಬಿಸಿಯಾಗಿದ್ದಾರೆ. ಈ ನಟಿಯು ಟಿವಿ ಸೀರೀಸ್‌ ಲೆಗಸಿಯಲ್ಲಿ ಅಕ್ಷಯ್ ಖನ್ನಾ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಡೈರೆಕ್ಟರ್‌ ಸೌಜನ್ ಜೋಸೆಫ್ ನೆಕ್ಸ್ಟ್‌ ಪ್ರಾಗ್ಜೆಟ್‌ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಎಮರ್ಜಸ್ಸಿ 24' ನಲ್ಲಿ ಸಹ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್, ಕಬೀರ್ ಬೇಡಿ, ಅನುಪಮ್ ಖೇರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಬಿನೋಯ್ ಗಾಂಧಿ ನಿರ್ದೇಶನದ ಫ್ಯಾಮಿಲಿ ಡ್ರಾಮಾ ಚಿತ್ರ ಘುಡ್ಚಾಡಿಯಲ್ಲಿ ಸಹ ಅಭಿನಯಿಸಲಿದ್ದಾರೆ.


ಇದನ್ನೂ ಓದಿ- ನಟ ದರ್ಶನ್ ಮನೆಯಲ್ಲಿ 8 ಹುಲಿ ಉಗುರಿನ ಪೆಂಡೆಂಟ್ ಪತ್ತೆ..! ಅಸಲಿ ಅಥವಾ ನಕಲಿ..?


ಒಂದು ಕಡೆ ತಾಯಿ ರವೀನಾ ಸಿನಿಮಾಗಳಲ್ಲಿ ಬಿಸಿಯಾದರೆ, ಇತ್ತ ಮಗಳು ರಾಶಾ ಸಹ ಸಿನಿರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ರಾಶಾ ಥಡಾನಿ  ಅಭಿಷೇಕ್ ಕಪೂರ್  ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಈ ಚಿತ್ರವು ಅಜಯ್ ದೇವಗನ್  ಸೋದರಳಿಯ ಅಮನ್ ದೇವಗನ್  ಅವರ ಮೊದಲ ಸಿನಿಮಾ ಆಗಿದೆ. ಮೂಲಗಳ  ಪ್ರಕಾರ, ಈ ಸಿನಿಮಾ ಅಡ್ವೆಂಚರ್‌  ಚಿತ್ರ ಎಂದು ನಿರೀಕ್ಷಿಸಲಾಗಿದೆ. ಹಾಗೆ ಫೆಬ್ರವರಿ 9, 2024 ರಂದು ಈ ಚಿತ್ರವು ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.