ಅಕ್ಷಯ್ ಕುಮಾರ್ ಪತ್ನಿಯಾಗಬೇಕಿತ್ತು ರವೀನಾ ಟಂಡನ್... ನಿಶ್ಚಿತಾರ್ಥ ಕೂಡ ನಡೆದಿತ್ತು! ಆದರೆ ಮದುವೆ ಮುರಿದು ಬಿದ್ದಿದ್ದೇಕೆ?
Raveena Tandon Engagement with Akshay Kumar: ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಅಕ್ಷಯ್ ಕುಮಾರ್‌ಗಾಗಿ ತಮ್ಮ ವೃತ್ತಿ ಜೀವನವನ್ನೇ ತೊರೆಯಲು ರವೀನಾ ಟಂಡನ್ ನಿರ್ಧರಿಸಿದ್ದರು.
Raveena Tandon engaged to Akshay Kumar: ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ನಡುವಿನ ಪ್ರೀತಿಯ ಬಗ್ಗೆ ಚರ್ಚೆಗಳು 90 ರ ದಶಕದಲ್ಲಿ ಸಾಕಷ್ಟು ಸಾಮಾನ್ಯವಾಗಿದ್ದವು. ಇವರಿಬ್ಬರ ಎಂಗೇಜ್‌ಮೆಂಟ್ ಸಹ ನಡೆದಿತ್ತು ಎನ್ನಲಾಗುತ್ತದೆ. ಆದರೆ ಮದುವೆಯ ಸುದ್ದಿಯ ನಡುವೆ ಇದ್ದಕ್ಕಿದ್ದಂತೆ ಅವರ ಬ್ರೇಕಪ್ ಸುದ್ದಿ ಬರಲು ಪ್ರಾರಂಭಿಸಿತು. ಈ ಬಗ್ಗೆ ಇತ್ತೀಚೆಗೆ ರವೀನಾ ಟಂಡನ್ ಮಾತನಾಡಿದ್ದರು...
ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಿದ್ದರು ಮತ್ತು ಇಬ್ಬರೂ ಮದುವೆಯಾಗಲು ಬಯಸಿದ್ದರು. ಇಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಆದರೆ ಏಕಾಏಕಿ ಇಬ್ಬರೂ ನಿಶ್ಚಿತಾರ್ಥ ಮುರಿದುಕೊಂಡು ಬೇರೆಯಾದರು ಎಂಬ ಸುದ್ದಿ ಬರಲಾರಂಭಿಸಿತು. ಇವರಿಬ್ಬರ ಪ್ರೇಮಕಥೆ ಶುರುವಾಗಿದ್ದು ‘ಮೊಹ್ರಾ’ ಚಿತ್ರದ ಸೆಟ್‌ನಿಂದ.
ಇದೆಲ್ಲಾ ಆದ ಸುಮಾರು 20 ವರ್ಷಗಳ ನಂತರ ರವೀನಾ ಟಂಡನ್ ಅಕ್ಷಯ್ ಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಮುರಿದ ನಿಶ್ಚಿತಾರ್ಥದ ಬಗ್ಗೆ ಕೇಳಿದಾಗ, ಜನರು ಏಕೆ ಮುಂದೆ ಸಾಗುವುದಿಲ್ಲ ಎಂದು ತನಗೆ ಅರ್ಥವಾಗುತ್ತಿಲ್ಲ ಎಂದು ರವೀನಾ ಹೇಳಿದ್ದಾರೆ. ಅಕ್ಷಯ್ ಕುಮಾರ್ ಅವರ ಹೆಸರು ಅನೇಕ ನಟಿಯರೊಂದಿಗೆ ಸೇರಿಕೊಂಡಿರುವ ಬಗ್ಗೆ ಮಾತನಾಡಿದ್ದಾರೆ.
ರವೀನಾ ಮತ್ತು ಅಕ್ಷಯ್ ಕುಮಾರ್ 1995 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಮೊಹ್ರಾ ಸಿನಿಮಾದಲ್ಲಿ ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಸೆಟ್‌ನಲ್ಲೇ ಇಬ್ಬರ ನಡುವೆ ಪ್ರೀತಿ ಆರಂಭವಾಯಿತು ಎನ್ನಲಾಗುತ್ತದೆ. ಈ ಚಿತ್ರ 1994ರಲ್ಲಿ ರಿಲೀಸ್ ಆಗಿದ್ದು, ಸೂಪರ್ ಹಿಟ್ ಆಯಿತು.
ಇದನ್ನೂ ಓದಿ: ದಿಶಾ ಅಂದ ನೋಡಿದ್ರೆ ಎಣ್ಣೆ ಹೊಡೆಯದೇ ನಶೆ ಏರುತ್ತೆ..! ಕ್ಯೂಟ್ ಫೋಟೋಸ್ ಇಲ್ಲಿವೆ
ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಮದುವೆ ಆಗಲು ಬಯಸಿದ್ದರು. ಇದಕ್ಕೆಂದೇ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಅಕ್ಷಯ್ ಕುಮಾರ್‌ಗಾಗಿ ತಮ್ಮ ವೃತ್ತಿ ಜೀವನವನ್ನೇ ತೊರೆಯಲು ರವೀನಾ ಟಂಡನ್ ನಿರ್ಧರಿಸಿದ್ದರು. ಆದರೆ ಈ ಸಂಬಂಧ ಹಸೆಮಣೆ ಏರಲಿಲ್ಲ. ನಿಶ್ಚಿತಾರ್ಥ ನಡೆದ ಕೆಲವೇ ದಿನಗಳಲ್ಲಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಮದುವೆ ಮುರಿದು ಬಿತ್ತು.
ಇದಕ್ಕೆ ಕಾರಣ ಆ ಖ್ಯಾತ ನಟಿ ಎಂಬ ವದಂತಿ ಇಂದಿಗೂ ಒದೆ. ಅಕ್ಷಯ್ ಕುಮಾರ್ ಹಾಗೂ ನಟಿ ರೇಖಾ ಮಧ್ಯೆ ಅಫೇರ್ ಇದೆ ಎಂಬ ವದಂತಿಯೇ ರವೀನಾ ಹಾರ್ಟ್ ಬ್ರೇಕ್ ಮಾಡಿತು. 1996ರಲ್ಲಿ ರಿಲೀಸ್ ಆದ ‘ಖಿಲಾಡಿಯೋ ಕಾ ಖಿಲಾಡಿ’ ಸಿನಿಮಾದ ಶೂಟಿಂಗ್ ವೇಳೆ ಅಕ್ಷಯ್ ಕುಮಾರ್ ಮತ್ತು ರೇಖಾ ನಡುವೆ ಪ್ರೀತಿ ಮೂಡಿತ್ತು ಎಂಬ ವದಂತಿ ಇತ್ತು. ಅಕ್ಷಯ್ ಕುಮಾರ್‌ಗೆ ನಟಿ ರೇಖಾ ಬಂಗಲೆ ಗಿಫ್ಟ್ ನೀಡಿದ್ದರು ಎಂದು ಕೂಡ ಹೇಳಲಾಗುತ್ತದೆ. ಆದರೆ ಇದನ್ನು ಇಬ್ಬರೂ ನಿರಾಕರಿಸಿದ್ದಾರೆ. ಇದನ್ನು ತಡೆದುಕೊಳ್ಳೋಕೆ ರವೀನಾಗೆ ಆಗದೇ ಮದುವೆಗೆ ನಿರಾಕರಿಸಿದರು.
ರವೀನಾ ಜೊತೆಗಿನ ಬ್ರೇಕಪ್ ನಂತರ, ಅಕ್ಷಯ್ ಕುಮಾರ್ ನಟಿ ಟ್ವಿಂಕಲ್ ಖನ್ನಾ ಜೊತೆ ಡೇಟಿಂಗ್ ಪ್ರಾರಂಭಿಸಿದರು. 2001 ರಲ್ಲಿ ವಿವಾಹವಾದರು. ಈಗ ಆರವ್ ಮತ್ತು ನಿತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ. ರವೀನಾ ಟಂಡನ್ ಉದ್ಯಮಿ ಅನಿಲ್ ಥಡಾನಿ ಅವರನ್ನು ವಿವಾಹವಾದರು. ಇವರಿಗೂ ರಾಶಾ ಥಡಾನಿ ಮತ್ತು ಮಗ ರಣಬೀರವರ್ಧನ್ ಥಡಾನಿ ಎಂಬ ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ 'ವೆಂಕ್ಯಾ' ಸಿನಿಮಾ ಪ್ರದರ್ಶನ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.