ನೀವು ತೆರೆಯ ಮೇಲೆ ನೋಡುವ ಗ್ಲಾಮರ್ ಹಿಂದೆ ಹೇಳಲಾಗದ ಕಥೆ ಇರುತ್ತದೆ : ರವೀನಾ ಟಂಡನ್
Tip Tip Barsa Paani song : ಹಲವು ಸೂಪರ್ ಹಿಟ್ ಹಿಂದಿ ಸಾಂಗ್‌ಗಳಲ್ಲಿ ʼಟಿಪ್ ಟಿಪ್ ಬರ್ಸಾ ಪಾನಿʼ ಸಾಂಗ್ ಕೂಡ ಒಂದು. ಇಂದಿಗೂ ಈ ಹಾಡು ಹೊಸ ರೂಪದಲ್ಲಿ ಅಂದ್ರೆ ಡಿಜೆ ಇಲ್ಲವೆ ಟ್ರಾನ್ಸ್ ರೂಪದಲ್ಲಿ ಎಲ್ಲಿಯಾದರೂ ಕೇಳಿಬರುತ್ತಲೇ ಇರುತ್ತದೆ. ಇನ್ನು ಈ ಹಾಡಿನ ಶೂಟಿಂಗ್ ವೇಳೆ ರವೀನಾ ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ.
Raveena Tandon : ಈ ವಾರದ ಡ್ಯಾನ್ಸ್ ರಿಯಾಲಿಟಿ ಶೋ ʼಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ 3ʼ ನಟಿ ರವೀನಾ ಟಂಡನ್ ಎಂಟ್ರಿಯಿಂದಾಗಿ ಕಲರ್‌ಪುಲ್ ಆಗಿತ್ತು. ಈ ವೇಳೆ ರವೀನಾ ʼಮೊಹ್ರಾʼ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಹೆಜ್ಜೆ ಹಾಕಿದ ʼಟಿಪ್ ಟಿಪ್ ಬರ್ಸಾ ಪಾನಿʼ ಸಾಂಗ್ ಶೂಟಿಂಗ್ ವೇಳೆ ನಡೆದ ಕಹಿ ಘಟನೆ ಕುರಿತು ಒಪನ್ ಆಗಿ ಮಾತನಾಡಿದರು. ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಯಸ್.. ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ 3 ಸಂಚಿಕೆಯಲ್ಲಿ, ಸ್ಪರ್ಧಿ ಶಿವಾಂಶು ಸೋನಿ ಮತ್ತು ನೃತ್ಯ ಸಂಯೋಜಕ ವಿವೇಕ್ ಚಾಚೆರೆ ಟಿಪ್ ಟಿಪ್ ಬರ್ಸಾ ಪಾನಿಸ ಸಾಂಗ್‌ಗೆ ನೃತ್ಯ ಮಾಡಿದರು. ರವೀನಾ ಟಂಡನ್ ಶಿವಾಂಶು ವಿಶಿಷ್ಟ ಶೈಲಿ ಡಾನ್ಸ್‌ನ್ನು ಮೆಚ್ಚುಕೊಂಡು ಶ್ಲಾಘಿಸಿದರು. ಇದೇ ವೇಳೆ ಟಿಪ್ ಟಿಪ್ ಬರ್ಸಾ ಪಾನಿ ಶೂಟಿಂಗ್ ವೇಳೆ ನಡೆದ ಘಟನೆ ಬಿಚ್ಚಿಟ್ಟರು.
ಇದನ್ನೂ ಓದಿ: ʼದಿ ಕಾಶ್ಮೀರಿ ಫೈಲ್ಸ್ʼ ನಿರ್ದೇಶಕನ ʼದಿ ವ್ಯಾಕ್ಸಿನ್ ವಾರ್ʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್
ಬಾಲಿವುಡ್‌ನಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಹಲವಾರು ಹಿಟ್ ಸಾಂಗ್‌ಗಳಲ್ಲಿ ʼಟಿಪ್ ಟಿಪ್ ಬರ್ಸಾ ಪಾನಿʼ ಸಾಂಗ್ ಕೂಡ ಒಂದು. ಇಂದಿಗೂ ಈ ಹಾಡು ಹೊಸ ರೂಪದಲ್ಲಿ ಅಂದ್ರೆ ಡಿಜೆ ಇಲ್ಲವೆ ಟ್ರಾನ್ಸ್ ರೂಪದಲ್ಲಿ ಎಲ್ಲಿಯಾದರೂ ಕೇಳಿಬರುತ್ತಲೇ ಇರುತ್ತದೆ. ಇನ್ನು ಈ ಹಾಡಿನ ಶೂಟಿಂಗ್ ವೇಳೆ ರವೀನಾ ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ.
ಇಂಡಿಯಾಸ್ ಬೆಸ್ಟ್ ಡ್ಯಾನ್ಸ್‌ರ್ 3 ಶೋಗೆ ಗೆಸ್ಟ್ ಆಗಿ ಬಂದಿದ್ದ ರವೀನ ಹಾಡಿನ ಬಗ್ಗೆ ಮಾತನಾಡುತ್ತಾ, "ನಾವು ಈ ಹಾಡನ್ನು ನಿರ್ಮಾಣ ಹಂತದ ಕಟ್ಟಡದ ಸ್ಥಳದಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಆಗ ನಾನು ಬರಿಗಾಲಿನಲ್ಲಿದ್ದೆ, ಸೀರೆಯನ್ನು ಧರಿಸಿದ್ದೆ. ರೇಖಾ ಜೀ ಮತ್ತು ಚಿನ್ನಿ ಜಿ ಅವರ ಸ್ಟೆಪ್ಸ್ ಕಠಿಣವಾಗಿದ್ದವು. ಜೊತೆಗೆ ಮೊಣಕಾಲು ಪ್ಯಾಡ್‌ಗಳನ್ನು ಧರಿಸಿದೆ. ಮನೆಗೆ ಹಿಂದಿರುಗಿ ಮೊಣಕಾಲು ನೋಡಿಕೊಂಡಾಗ ಕಡಿತಕ್ಕೆ ಒಳಗಾಗಿ ಗಾಯಗಳಾಗಿದ್ದವು. ಆಗ ನಾನು ಟೆಟನಸ್ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗಿತ್ತು. ಎರಡು ದಿನಗಳ ನಂತರ ನಾನು ಅನಾರೋಗ್ಯಕ್ಕೆ ಒಳಗಾದೆ.
ಇದನ್ನೂ ಓದಿ: ಮೊಬೈಲ್ ನಂಬರ್ ಹಂಚಿಕೊಂಡ ಶಾರುಖ್, ನೀವೂ ಮಾತಾಡಬೇಕೇ? ಈ ಟೈಮ್‌ಗೆ ಕಾಲ್ ಮಾಡಿ..
ಅಲ್ಲದೆ, "ನೀವು ತೆರೆಯ ಮೇಲೆ ಕಾಣುವ ಗ್ಲಾಮರ್ ತೆರೆಮರೆಯಲ್ಲಿ ಹೇಳಲಾಗದ ಕಥೆಗಳನ್ನು ಮರೆಮಾಡುತ್ತದೆ. ಅಭ್ಯಾಸದ ಸಮಯದಲ್ಲಿ ಗಾಯಗಳು ಸಾಮಾನ್ಯ, ಆದರೂ ನಾವೆಲ್ಲರೂ ಅವುಗಳನ್ನು ಸಹಿಸಿಕೊಳ್ಳುತ್ತೇವೆ. ಇದೆಲ್ಲವೂ ಪ್ರೇಕ್ಷಕನ ಸಂತೋಷಕ್ಕಾಗಿ, ಅವನ ನಗುವಿಗಾಗಿ. ಅನುಭವಿಸಿದ ನೋವನ್ನು ಎಂದಿಗೂ ಲೆಕ್ಕಿಸಬೇಡಿ.. ಇದು ಎಲ್ಲಾ ಕಲಾವಿದರು ಮತ್ತು ನೃತ್ಯ ಸಂಯೋಜಕರು ತೆರೆಮರೆಯಲ್ಲಿ ಸಹಿಸಿಕೊಳ್ಳುವ ಹೋರಾಟಗಳನ್ನ ಮಾಡುತ್ತಾರೆ ಅಂತ ತೆರೆ ಹಿಂದಿನ ಕಥೆ ಬಿಚ್ಚಿಟ್ಟರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.