Shah Rukh Khan: ಮೊಬೈಲ್ ನಂಬರ್ ಹಂಚಿಕೊಂಡ ಶಾರುಖ್, ನೀವೂ ಮಾತಾಡಬೇಕೇ? ಈ ಟೈಮ್‌ಗೆ ಕಾಲ್‌ ಮಾಡಿ..

Shah Rukh Khan: ಶಾರುಖ್ ಖಾನ್ ತಮ್ಮ ಮೊಬೈಲ್‌ ನಂಬರ್‌ ಅನ್ನು ಬಹಿರಂಗಪಡಿಸಿದ್ದಾರೆ. ಅವರ ಜೊತೆ ಮಾತನಾಡಲು ಬಯಸುವ ಅಭಿಮಾನಿಗಳು ಈ ಸಮಯದಲ್ಲಿ ಕರೆ ಮಾಡಬಹುದಾಗಿದೆ.   

Written by - Chetana Devarmani | Last Updated : Sep 9, 2023, 05:21 PM IST
  • ಶಾರುಖ್ ಖಾನ್ ತಮ್ಮ ಮೊಬೈಲ್‌ ನಂಬರ್‌ ಬಹಿರಂಗ
  • ಮೊಬೈಲ್ ನಂಬರ್ ಶೇರ್‌ ಮಾಡಿದ ಶಾರುಖ್
  • ಯಾವ ಸಮಯದಲ್ಲಿ ಕರೆ ಮಾಡಬೇಕು ಎಂದು ಹೇಳಿದ ಕಿಂಗ್‌ ಖಾನ್‌
Shah Rukh Khan: ಮೊಬೈಲ್ ನಂಬರ್ ಹಂಚಿಕೊಂಡ ಶಾರುಖ್, ನೀವೂ ಮಾತಾಡಬೇಕೇ? ಈ ಟೈಮ್‌ಗೆ ಕಾಲ್‌ ಮಾಡಿ.. title=
Shah Rukh Khan

Shah Rukh Khan phone number : ಶಾರುಖ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಜವಾನ್ ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದಾರೆ. ಜವಾನ್‌ 100 ಕೋಟಿ ಕ್ಲಬ್‌ ಸೇರಿದೆ. ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಬೇಟೆಯಾಡುತ್ತಿದೆ. ಈ ಬೆನ್ನಲ್ಲೇ ನಟ ಶಾರುಖ್‌ ಖಾನ್‌ ತನ್ನ ಫೋನ್ ನಂಬರ್‌ನ್ನು ಬಹಿರಂಗಪಡಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Jawan Collection: 100 ಕೋಟಿ ಕ್ಲಬ್‌ ಸೇರಿದ ಜವಾನ್‌.. 2 ನೇ ದಿನ ಕುಸಿತ ಕಂಡ ಕಲೆಕ್ಷನ್‌

ವರ್ಷಗಳ ಹಿಂದೆ, ಸಂದರ್ಶನವೊಂದರಲ್ಲಿ ಶಾರುಖ್ ಅವರು ಗೂಗಲ್‌ನಲ್ಲಿ ಹೆಚ್ಚು ಹುಡುಕಲಾದ ಪ್ರಶ್ನೆಗಳ ಬಂಡಲ್‌ಗೆ ಉತ್ತರಿಸಿದ್ದರು. ಅದರಲ್ಲಿ ಒಂದು, ‘ಶಾರುಖ್ ಖಾನ್ ಅವರ ಮೊಬೈಲ್ ನಂಬರ್ ಏನು’. ಇದಕ್ಕೆ ಉತ್ತರಿಸಿದ ಶಾರುಖ್‌ ಖಾನ್ '5559960321' -‌ ಇದು ತಮ್ಮ ಮೊಬೈಲ್‌ ನಂಬರ್‌ ಎಂದು ಬಹಿರಂಗಪಡಿಸಿದರು. ಯಾವುದೇ ಸಮಯದಲ್ಲಿ ಕರೆ ಮಾಡಿ. ನಾನು ಅದನ್ನು ಉತ್ತರಿಸುತ್ತೇನೆ. ಇಲ್ಲದಿದ್ದರೆ, ಸಂದೇಶವನ್ನು ಕಳುಹಿಸಿ ಮತ್ತು ನಾನು ನಿಮಗೆ ಎಮೋಜಿಯೊಂದಿಗೆ ಉತ್ತರಿಸುತ್ತೇನೆ ಎಂದು ಹೇಳಿದರು.

 

 

ಜವಾನ್‌ನ ಯಶಸ್ಸಿಗೆ ಕಿಂಗ್ ಖಾನ್ ಪ್ರತಿಕ್ರಿಯಿಸಿದ್ದು, ಕೃತಜ್ಞತೆ ಸಲ್ಲಿಸಿದ್ದಾರೆ. ಅಟ್ಲೀ ಬರೆದು ನಿರ್ದೇಶಿಸಿರುವ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಜವಾನ್ ಸಾರ್ವಕಾಲಿಕ ಬಾಲಿವುಡ್ ಓಪನರ್ ಆಗಿದೆ. 

ಇದನ್ನೂ ಓದಿ: ಪ್ರವೀಣ್ ತೇಜ್ 'ಜಿಗರ್‌'ಗೆ ಧ್ವನಿಯಾದ ಸಂಚಿತ್ ಹೆಗ್ಡೆ: ರೊಮ್ಯಾಂಟಿಂಕ್ ಹಾಡು ರಿಲೀಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News