Tiger Nageswara Rao : ಟಾಲಿವುಡ್‌ ಮಾಸ್ ಮಹಾರಾಜ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪ್ಯಾನ್-ಇಂಡಿಯನ್ ಸಿನಿಮಾ 'ಟೈಗರ್ ನಾಗೇಶ್ವರ ರಾವ್' ಚಿತ್ರದ ಅಂತಿಮ ಹಂತದ ಚಿತ್ರೀಕರಣ ವಿಶಾಖಪಟ್ಟಣಂನಲ್ಲಿ ನಡೆಯುತ್ತಿದೆ. ಅದ್ಧೂರಿ ಸೆಟ್‌ನಲ್ಲಿ ಈ ಸಿನಿಮಾದ ಕೊನೆಯ ಹಂತದ ಶೂಟಿಂಗ್‌ ಉತ್ಸಾಹದಿಂದ ನೆಡೆಯುತ್ತಿದ್ದು, ಈ ಕುರಿತು ಚಿತ್ರತಂಡ ಮಾಹಿತಿ ನೀಡಿದೆ. ಜೊತೆಗೆ ಕೆಲವೊಂದಿಷ್ಟು ಫೋಟೋಸ್‌ ಹಾಗೂ ವಿಡಿಯೋ ಹಂಚಿಕೊಂಡಿದೆ.


COMMERCIAL BREAK
SCROLL TO CONTINUE READING

'ಟೈಗರ್ ನಾಗೇಶ್ವರ ರಾವ್' ವಂಶಿ ನಿರ್ದೇಶನದ ಹೊಸ ಪ್ಯಾನ್-ಇಂಡಿಯನ್ ಚಿತ್ರವಾಗಿದ್ದು, ಈ ಸಿನಿಮಾದಲ್ಲಿ 'ಮಾಸ್ ಮಹಾರಾಜ' ರವಿತೇಜ ಕಥೆಯ ನಾಯಕನಾಗಿ ನಟಿಸಿದ್ದಾರೆ. ಅಲ್ಲದೆ, ಬಾಲಿವುಡ್ ನಟಿಯರಾದ ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ಈ ಸಿನಿಮಾದಲ್ಲಿದ್ದಾರೆ. ಆರ್. ಮಧಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. 1970ರ ದಶಕದಲ್ಲಿ ಸ್ಟುವರ್ಟ್ ಬುರಾಮ್ ನಲ್ಲಿ ನೆಲೆಸಿದ್ದ ಖ್ಯಾತ ಕಳ್ಳನೊಬ್ಬನ ಜೀವನ ಕಥೆಯನ್ನು ಆಧರಿಸಿದ ಈ ಚಿತ್ರವನ್ನು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.co/3wPoNgr ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 


ಖ್ಯಾತ ನಟಿಯ ಮೇಲೆ ಆಕೆಯ ಗೆಳೆಯನಿಂದಲೇ ಹಲ್ಲೆ..! ಸತ್ತು ಬದುಕಿದ ಘೋರ ಘಟನೆ ಬಿಚ್ಚಿಟ್ಟ ಅನಿಖಾ


ಶ್ರೀಕಾಂತ್ ವೀಸಾ ಬರೆದಿರುವ ಈ ಚಿತ್ರಕ್ಕೆ ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಪಕರಾಗಿದ್ದಾರೆ. ಈ ವರ್ಷ ಬಿಡುಗಡೆಯಾದ ಅತಿ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಿರುವ 'ಟೈಗರ್ ನಾಗೇಶ್ವರ ರಾವ್' ಚಿತ್ರದ ಅಂತಿಮ ಹಂತಕ್ಕಾಗಿ 5 ಎಕರೆ ಜಾಗದಲ್ಲಿ ಸ್ಟೀವರ್ಟ್‌ಪುರಂ ಎಂಬ ಗ್ರಾಮವನ್ನು ನಿರ್ಮಿಸಲಾಗಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಗ್ರಾಮದಲ್ಲಿ ಚಿತ್ರದ ಅಂತಿಮ ಘಟ್ಟದ ಶೂಟಿಂಗ್‌ ನಡೆಯುತ್ತಿದೆ. 


ಸದ್ಯ ʼಟೈಗರ್ ನಾಗೇಶ್ವರ ರಾವ್ʼ ಟೈಟಲ್ ಲುಕ್ ಹಾಗೂ ಫ್ರೀ ಲುಕ್ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಂತಿಮ ಹಂತದ ಚಿತ್ರೀಕರಣ ಶುರುವಾಗಿದೆ ಎಂಬ ಸುದ್ದಿ ಅಭಿಮಾನಿಗಳನ್ನು ಖುಷಿ ತಂದಿದೆ. 1970ರ ದಶಕದಲ್ಲಿ ಸ್ಟುವರ್ಟ್‌ಪುರಂ ಗ್ರಾಮದಲ್ಲಿ ನೆಲೆಸಿದ್ದ ಖ್ಯಾತ ಕಳ್ಳನೊಬ್ಬನ ಆತ್ಮಕಥನದ ರೂಪಾಂತರವಾಗಿರುವ ಚಿತ್ರದಲ್ಲಿ ಮಾಸ್ ಮಹಾರಾಜ ರವಿತೇಜ ಅವರ ಭಾಷೆ, ಲುಕ್‌, ಮ್ಯಾನರ್ಸ್‌ ವಿಭಿನ್ನವಾಗಿರಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.