Anicka Vikhraman : ಖ್ಯಾತ ನಟಿಯ ಮೇಲೆ ಆಕೆಯ ಗೆಳೆಯನಿಂದಲೇ ಹಲ್ಲೆ..! ಸತ್ತು ಬದುಕಿದ ಘೋರ ಘಟನೆ ಬಿಚ್ಚಿಟ್ಟ ಅನಿಖಾ

Anicka Vikhraman assault by her boyfriend : ಮಲಯಾಳಂ ನಟಿ ಅನಿಖಾ ವಿಕ್ರಮನ್ ತಮ್ಮ ಗೆಳೆಯನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನಗೆ ಕ್ರೂರವಾಗಿ ಥಳಿಸಿ ತನ್ನ ಫೋನ್ ನಾಶಪಡಿಸಿದ್ದಾಗಿ ಅನಿಖಾ ಸೋಷಿಯಲ್‌ ಮೀಡಿಯಾದಲ್ಲಿ ನೋವು ತೋಡಿಕೊಂಡಿದ್ದಾರೆ. ಅಲ್ಲದೆ, ಗೆಳೆಯನಿಂದ ಹಲ್ಲೆಗೊಳಗಾದ ನಟಿ ಗಾಯಗೊಂಡಿರುವ ತಮ್ಮ ಫೋಟೋಗಳನ್ನು ಸಹ ನಟಿ ಹಂಚಿಕೊಂಡಿದ್ದಾರೆ. ಇದೀಗ ಅನಿಖಾ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Mar 6, 2023, 04:42 PM IST
  • ನಟಿ ಅನಿಖಾ ವಿಕ್ರಮನ್ ತಮ್ಮ ಗೆಳೆಯನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
  • ತನಗೆ ಕ್ರೂರವಾಗಿ ಥಳಿಸಿ ತನ್ನ ಫೋನ್ ನಾಶಪಡಿಸಿದ್ದಾಗಿ ಅನಿಖಾ ದೂರಿದ್ದಾರೆ.
  • ಹಲ್ಲೆಗೊಳಗಾದ ನಟಿ ಗಾಯಗೊಂಡಿರುವ ತಮ್ಮ ಫೋಟೋಗಳನ್ನು ಸಹ ನಟಿ ಹಂಚಿಕೊಂಡಿದ್ದಾರೆ.
Anicka Vikhraman : ಖ್ಯಾತ ನಟಿಯ ಮೇಲೆ ಆಕೆಯ ಗೆಳೆಯನಿಂದಲೇ ಹಲ್ಲೆ..! ಸತ್ತು ಬದುಕಿದ ಘೋರ ಘಟನೆ ಬಿಚ್ಚಿಟ್ಟ ಅನಿಖಾ title=

Anicka Vikhraman : ಮಲಯಾಳಂ ನಟಿ ಅನಿಖಾ ವಿಕ್ರಮನ್ ತಮ್ಮ ಗೆಳೆಯನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನಗೆ ಕ್ರೂರವಾಗಿ ಥಳಿಸಿ ತನ್ನ ಫೋನ್ ನಾಶಪಡಿಸಿದ್ದಾಗಿ ಅನಿಖಾ ಸೋಷಿಯಲ್‌ ಮೀಡಿಯಾದಲ್ಲಿ ನೋವು ತೋಡಿಕೊಂಡಿದ್ದಾರೆ. ಅಲ್ಲದೆ, ಗೆಳೆಯನಿಂದ ಹಲ್ಲೆಗೊಳಗಾದ ನಟಿ ಗಾಯಗೊಂಡಿರುವ ತಮ್ಮ ಫೋಟೋಗಳನ್ನು ಸಹ ನಟಿ ಹಂಚಿಕೊಂಡಿದ್ದಾರೆ. ಇದೀಗ ಅನಿಖಾ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.

'ನಾನು ಅನೂಪ್ ಪಿಳ್ಳೈ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೆ. ಕಳೆದ ಕೆಲವು ವರ್ಷಗಳಿಂದ ಆತ ನನಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ಇಷ್ಟೆಲ್ಲಾ ಮಾಡಿದ ನಂತರ ನನಗೆ ಜೀವ ಬೆದರಿಕೆ ಹಾಕಿದ. ಈ ಹಿಂದೆ ಚೆನ್ನೈನಲ್ಲಿ ಮೊದಲ ಬಾರಿಗೆ ನನ್ನ ಮೇಲೆ ಹಲ್ಲೆ ಮಾಡಿದ್ದ. ಆಗ ಅವನು ನನ್ನ ಕಾಲಿಗೆ ಬಿದ್ದು ಅಳುತ್ತಿದ್ದ. ನಾನು ಅವನನ್ನು ನಂಬಿ ಘಟನೆಯನ್ನು ಅಲ್ಲಿಗೆ ಬಿಟ್ಟಿದ್ದೆ. ಆದರೆ ಮತ್ತೆ ನನ್ನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ.

ಇದನ್ನೂ ಓದಿ: Kabzaa Making : 30 ಲಾರಿ, 300 ಬೈಕ್‌, 70 ಜೀಪುಗಳು.. ʼಕಬ್ಜʼ ಅಂತಿಂತ ಸಿನಿಮಾ ಅಲ್ಲ ಗುರು..!

ಆಗ ನಾನು ಪೊಲೀಸರಿಗೆ ದೂರು ನೀಡಿದೆ ಆದ್ರೆ, ಪೊಲೀಸ್‌ ಬೆಂಬಲದಿಂದ ಅವನು ಮತ್ತೆ ಕಿರುಕುಳ ನೀಡಲು ಪ್ರಾರಂಭಿಸಿದ. ಕಳೆದ ಕೆಲವು ವರ್ಷಗಳಿಂದ ನಾನು ಅನೇಕ ಬಾರಿ ಕಿರುಕುಳಕ್ಕೆ ಒಳಗಾಗಿದ್ದೇನೆ. ಇದರೊಂದಿಗೆ ನಾನು ಅವನನ್ನು ಬಿಡಲು ನಿರ್ಧರಿಸಿದೆ. ಆದರೆ ಅವನು ನನ್ನನ್ನು ಬಿಡಲು ಸಿದ್ಧನಾಗಿರಲಿಲ್ಲ. ಅಲ್ಲದೆ, ನಾನು ಶೂಟಿಂಗ್‌ಗೆ ಹೋಗದಂತೆ ನನ್ನ ಫೋನ್ ಎಸೆದು ಒಡೆದಿದ್ದಾನೆ. ನಾವು ಬೇರ್ಪಟ್ಟ ನಂತರವೂ ನನ್ನ ವಾಟ್ಸಾಪ್ ಚಾಟ್‌ಗಳನ್ನು ಕದ್ದು ನೋಡುತ್ತಿದ್ದಾನೆ. 

 

ಹೈದರಾಬಾದ್‌ಗೆ ತೆರಳುವ ದಿನಗಳ ಮೊದಲು ನನ್ನ ಫೋನ್ ಅನ್ನು ಲಾಕ್ ಮಾಡಿದ್ದ. ನಂತರ ನನ್ನನ್ನು ಅಮಾನುಷವಾಗಿ ಥಳಿಸಿದ. ಅಲ್ಲದೆ, ನನ್ನ ಬಾಯಿ ಮತ್ತು ಮೂಗನ್ನು ಮುಚ್ಚಿ ನನ್ನನ್ನು ಉಸಿರುಗಟ್ಟಿಸಿದ್ದ. ಗಂಟಲಿನಿಂದ ಸದ್ದು ಬರುತ್ತಿರಲಿಲ್ಲ. ನಾನು ಪ್ರಜ್ಞೆ ಕಳೆದುಕೊಳ್ಳಲಿದ್ದೇನೆ ಎಂದು ಖಚಿತವಾದಾಗ ಕೈ ಬಿಟ್ಟ. ಅದು ನನ್ನ ಜೀವನದ ಕೊನೆಯ ರಾತ್ರಿ ಎಂದು ನಾನು ಭಾವಿಸಿದೆ. ನಾನು ಅಲ್ಲಿಂದ ಎದ್ದು ಮುಂದಿನ ಕೋಣೆಗೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಅವರೂ ಅಲ್ಲಿಗೆ ಬಂದ. ಹೊರಗೆ ಹೋಗಿ ಫ್ಲಾಟ್‌ನ ಭದ್ರತಾ ಸಿಬ್ಬಂದಿಗೆ ದೂರು ನೀಡಿದರೂ ಅವರು ಅಸಹಾಯಕರಾಗಿದ್ದರು. ಅದರೊಂದಿಗೆ ಬಚ್ಚಲುಮನೆಗೆ ಹೋಗಿ ಬಾಗಿಲು ಮುಚ್ಚಿ ಬೆಳಗಿನವರೆಗೂ ಅಲ್ಲೇ ಇದ್ದೆ.

ಇದನ್ನೂ ಓದಿ:Janhvi Kapoor- Sridevi: ಅಮ್ಮನ ಸಾವಿನ ಬಗ್ಗೆ ರಹಸ್ಯ ಬಿಚ್ಚಿಟ್ಟ ʼಜಾನ್ವಿ ಕಪೂರ್ʼ

ಅಲ್ಲದೆ, ಮುಖವನ್ನು ಊದಿಕೊಳ್ಳುವಂತೆ ಹೊಡೆದು, ನೀನು ಹೇಗೆ ನಟಿಸುತ್ತೀಯಾ ನಾನು ನೋಡುತ್ತೇನೆ ಎಂದು ನನ್ನನ್ನು ಹೊಡೆಯುತ್ತಿದ್ದ. ನನಗೆ ಅಮಾನುಷವಾಗಿ ಕಿರುಕುಳ ನೀಡಿದ ನಂತರ, ಅವನು ತನ್ನ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದನು. ಕ್ರೌರ್ಯಕ್ಕೆ ಮುಖವಿದ್ದರೆ ಅದು ಅವನದ್ದಾಗಿರುತ್ತದೆ. ಇಷ್ಟೆಲ್ಲಾ ಮಾಡಿದ ಮೇಲೂ ನಾನು ನನ್ನ ಮನೆಯವರಿಗೆ ಮತ್ತು ಪೊಲೀಸರಿಗೆ ದೂರು ನೀಡುತ್ತೇನೆಯೇ ಎಂಬುದೇ ಅವನ ಸಮಸ್ಯೆಯಾಗಿತ್ತು. ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಆದರೆ ಈ ಬಾರಿ ನಾನು ಹಾಗೆ ಬಿಡಲು ಸಿದ್ಧನಿರಲಿಲ್ಲ. ನನ್ನ ಕುಟುಂಬಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ನಾನು ಸ್ನೇಹಿತರೆಂದು ಭಾವಿಸಿದ ಕೆಲವರು ಮೋಸ ಹೋಗಿದ್ದಾರೆ. ಮನುಷ್ಯತ್ವಕ್ಕಿಂತ ಹಣ ದೊಡ್ಡದು ಎಂದು ಅವರು ನನಗೆ ಪಾಠ ಕಲಿಸಿದರು.

ಈ ಘಟನೆಗಳ ಬಗ್ಗೆ ನಾನು ಪೊಲೀಸ್ ದೂರು ದಾಖಲಿಸಿದ್ದೇನೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಈಗ ಅವನು ಅಮೇರಿಕಾದಲ್ಲಿದ್ದಾನೆ. ನನ್ನ ವಿರುದ್ಧ ನಿರಂತರವಾಗಿ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಇದನ್ನೆಲ್ಲ ಬಹಿರಂಗವಾಗಿ ಬರೆಯುತ್ತಿದ್ದೇನೆ. ಈಗ ಇದೆಲ್ಲದರಿಂದ ಸಂಪೂರ್ಣ ಮುಕ್ತಿ ಹೊಂದಿ ಶೂಟಿಂಗ್‌ನಲ್ಲಿ ಸಕ್ರಿಯವಾಗಿದ್ದೇನೆ' ಎಂದು ಸುದೀಘವಾದ ಬರಹದ ಮೂಲಕ ಅನಿಖಾ ವಿಕ್ರಮನ್‌ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News