Darling Krishna RCB Team : ಈಗಾಗಲೇ ದೇಶದಲ್ಲಿ WPL ಆಬ್ಬರ ಶುರುವಾಗಿದೆ. ಸಧ್ಯದಲ್ಲೇ IPL ಪಂದ್ಯಾವಳಿಗಳು ಪ್ರಾರಂಭವಾಗಲಿವೆ. ಈ ಬಾರಿಯಾದರೂ ಆರ್‌ಸಿಬಿ ಟೀಂ ಕಪ್ಪು ಗೆಲ್ಲುತ್ತಾ ಎನ್ನುವ ಕುತೂಹಲ ಎಲ್ಲರಲ್ಲಿದ್ದು, ಈ ಸಲ ಕಪ್‌ ನಮ್ಮದೆ ಎನ್ನು ಘೋಷ ಎಲ್ಲೇಡೆ ಮೊಳಗುತ್ತಿದೆ.. ಇದರ ಬೆನ್ನಲ್ಲೆ ಇದೀಗ ಹೊಸ ವಿಚಾರವೊಂದು ಕೇಳಿ ಬರುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಈ ಬಾರಿ RCB ತಂಡದಲ್ಲಿ ಆಡಬೇಕು ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಅದಕ್ಕೆ ಕಾರಣ ಸಿಸಿಎಲ್‌. ಸಿನಿಮಾ ಸ್ಟಾರ್‌ ಐಪಿಎಲ್‌ನಲ್ಲಿ ಆಟ.. ಏನಪ್ಪಾ ಇದು..? ಅಂತ ತಲೆಕೆಡಿಸಿಕೊಳ್ಳಬೇಡಿ.. ಈ ಕುರಿತ ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ ನೋಡಿ..


ಸಧ್ಯ ಐಪಿಎಲ್‌ ಸೀಸನ್‌ 17 ಶುರುವಾಗೋಕೆ ಬೆರಳಣಿಕೆಯಷ್ಟು ದಿನಗಳಷ್ಟೇ ಬಾಕಿ ಇವೆ. ಇದರ ನಡುವೆ RCB ಅಭಿಮಾನಿಗಳ ಕಣ್ಣು ಸಿಸಿಎಲ್‌ ಆಟಗಾರನ ಮೇಲೆ ಬಿದ್ದಿದೆ. ಆ ಆಟಗಾರ ಬೇರೆ ಯಾರು ಅಲ್ಲ ಸ್ಯಾಂಡಲ್‌ವುಡ್‌ ಸ್ಟಾರ್‌ ಡಾರ್ಲಿಂಗ್‌ ಕೃಷ್ಣ..


ಇದನ್ನೂ ಓದಿ:ನಯನತಾರಾ ಡಿವೋರ್ಸ್‌ ಫಿಕ್ಸ್‌ ! ವಿಚ್ಛೇದನ ವದಂತಿಗೆ ಪುಷ್ಠಿಕೊಡ್ತಿದೆ ಲೇಡಿ ಸೂಪರ್‌ ಸ್ಟಾರ್‌ ಮಾಡಿದ ಪೋಸ್ಟ್ ?


ಯಸ್‌.. ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ನಲ್ಲಿ ಕಿಚ್ಚ ಸುದೀಪ್‌ ತಂಡದಲ್ಲಿ ಆಟವಾಡುತ್ತಿರುವ ಕೃಷ್ಣ ಅದ್ಭುತ ಬ್ಯಾಟಿಂಗ್‌ ಶೈಲಿಗೆ ಕ್ರಿಕೆಟ್‌ ಅಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕ ಬುಲ್ಡೋಜರ್‌ ತಂಡ ಸೋಲಿಲ್ಲದ ಸರದಾರನಂತೆ ನುಗ್ಗುತ್ತಿರುವುದಕ್ಕೆ ಕೃಷ್ಣನ ಆಟದ ಶೈಲಿಯೂ ಒಂದು ಕಾರಣ ಅಂದ್ರೆ ತಪ್ಪಾಗಲ್ಲ. 


ಇದನ್ನು ಗಮನಿಸಿದ ಕನ್ನಡ ಕ್ರಿಕೆಟ್‌ ಅಭಿಮಾನಿಗಳು ಡಾರ್ಲಿಂಗ್‌ ಕೃಷ್ಣ ಈ ಬಾರಿ ಐಪಿಎಲ್‌ ಆರ್‌ಸಿಬಿ ಟೀಂ ಪರವಾಗಿ ಆಡಬೇಕು ಅಂತ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿದ್ದಾರೆ. ಆರ್‌ಸಿಬಿ ಟೀಮ್‌ಗೆ ಕೃಷ್ಣ ಬೇಕೇ ಬೇಕು ಅಂತ ಕಾಮೆಂಟ್‌ ಮೂಲಕ ಒತ್ತಾಯಿಸುತ್ತಿದ್ದಾರೆ. ಆದ್ರೆ ಏನ್‌ ಮಾಡೋದು ಈಗಾಗಲೇ ಟೀಂ ರೆಡಿಯಾಗಿದ್ದು, ಆಟವಾಡೋಕೆ ತಂಡ ರೆಡಿಯಾಗಿದೆ.. 


ಇದನ್ನೂ ಓದಿ:ಸೀತಾರಾಮ ಧಾರಾವಾಹಿಯ ರಾಮನ ರಿಯಲ್ ಲೈಫ್ ಸೀತೆ ಇವರು ! ಅದ್ಭುತವಾಗಿದೆ ಇವರ ಲವ್ ಸ್ಟೋರಿ !


ಇನ್ನು ಮೊನ್ನೆ ದುಬೈನಲ್ಲಿ ನಡೆದ ಸಿಸಿಎಲ್‌ ಪಂದ್ಯದಲ್ಲಿ ಕೃಷ್ಣ ತೋರಿದ ಅದ್ಭುತ ಪ್ರದರ್ಶನವೇ ಇಂತಹ ಮಾತು ಬರಲು ಕಾರಣ.. ಆದ್ರೆ ಇದು ಆಗುವ ಕೆಲಸ ಅಲ್ಲ ಬಿಡಿ.. ಇದ್ದವರಾದ್ರೂ ಈ ಬಾರಿ ಸರಿಯಾಗಿ ಆಡಿದ್ರೆ ಕಪ್‌ ನಮ್ದೆ ಅಂತೀದಾರೆ ಆರ್‌ಸಿಬಿಯನ್ಸ್‌...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.