ಕನ್ನಡ ಕಿರುತೆರೆಯ ನಗುವಿನ ಹೊಸ ಅಡ್ಡ - ಸ್ಟಾರ್ ಸುವರ್ಣ ವಾಹಿನಿಯ `ಕಾಮಿಡಿ ಗ್ಯಾಂಗ್ಸ್`
ಇಷ್ಟು ದಿನ ಮಾಸ್ಕ್ ಹಿಂದೆ ಅಡಗಿದ್ದ ನಗು ಇನ್ಮುಂದೆ ಅನ್ ಲಿಮಿಟಿಡ್ ಆಗಿ ಹೊರಬರಲಿದೆ ಯಾಕಂದ್ರೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ಹೊಸ ಕಾಮಿಡಿ ಶೋ `ಕಾಮಿಡಿ ಗ್ಯಾಂಗ್ಸ್`.
ಬೆಂಗಳೂರು: ಇಷ್ಟು ದಿನ ಮಾಸ್ಕ್ ಹಿಂದೆ ಅಡಗಿದ್ದ ನಗು ಇನ್ಮುಂದೆ ಅನ್ ಲಿಮಿಟಿಡ್ ಆಗಿ ಹೊರಬರಲಿದೆ ಯಾಕಂದ್ರೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ಹೊಸ ಕಾಮಿಡಿ ಶೋ 'ಕಾಮಿಡಿ ಗ್ಯಾಂಗ್ಸ್'.
ಕಾಮಿಡಿ ಕಾಮಿಡಿ ಕಾಮಿಡಿ, ಸ್ಟೇಜ್ ನಲ್ಲೂ ಕಾಮಿಡಿ, ಸೆಟ್ನಲ್ಲೂ ಕಾಮಿಡಿ, ಜಡ್ಜಸ್ ಟಾಕ್ ಅಲ್ಲೂ ಕಾಮಿಡಿ, ಆಂಕರ್ ಮಾತೂ ಫುಲ್ ಕಾಮಿಡಿ…ಕರುನಾಡಿನಾದ್ಯಂತ ಆಯ್ಕೆಯಾಗಿ ಬಂದಿರುವ ಕಂಟೆಸ್ಟೆಂಟ್ಸ್... ಅವರಿಗೆ ಸ್ಕಿಟ್ ಕೊಡುವ ರೈಟರ್ಸ್, ಅವರ ಕಾಮಿಡಿಯ ಕಾಗುಣಿತ ತಿದ್ದುತಿರುವ ಮೆಂಟರ್ಸ್...ಇವರೆಲ್ಲರ ಪರಿಪೂರ್ಣ ಪ್ರದರ್ಶನದ ಹೊಣೆ ಹೊತ್ತಿರುವ ಕ್ಯಾಪ್ಟನ್ಸ್...ಇವರಿಂದಾಗಿ ಕಾಮಿಡಿ ಗ್ಯಾಂಗ್ಸ್ ನಲ್ಲಿ ಪ್ರತಿದಿನ ಹಾಸ್ಯದ ಹಬ್ಬ.
ಇದನ್ನೂ ಓದಿ: 'ಎಲ್ಲಾ ಸರ್ಕಾರದಲ್ಲೂ ಪರ್ಸೆಂಟ್ ವಿಚಾರ ನಡೆಯುತ್ತಿದೆ, ಯಾವ ಸರಕಾರದಲ್ಲಿ ನಡೆಯುವುದಿಲ್ಲ ಹೇಳಿ?'
ಹಾಗಾದ್ರೆ ಈ ಶೋ ಪ್ರಕ್ರಿಯೆ ಏನು ಗೊತ್ತೇ?
6 ತಂಡಗಳು ಪ್ರತಿ ಶನಿವಾರ ಮತ್ತು ಭಾನುವಾರ ಒಂದಿಕ್ಕಿಂತ ಒಂದು ವಿಭಿನ್ನ ಮತ್ತು ವಿಶೇಷವಾದ ವಿಡಂಬನೆಗಳ ಮೂಲಕ, ನಗು ಹಂಚಲಿದ್ದಾರೆ. 'ಕಾಮಿಡಿ ಗ್ಯಾಂಗ್ಸ್' ನಲ್ಲಿ ಎಲಿಮಿನೇಷನ್ ಇರುವುದಿಲ್ಲ. ಈ ಸ್ಕಿಟ್ ಗಳಿಗೆ ಸ್ಕೋರ್ ನೀಡಲಾಗುವುದು, ಅಂತಿಮವಾಗಿ ಅಧಿಕ ಅಂಕಗಳನ್ನು ಪಡೆವ ಗ್ಯಾಂಗ್ ಗಿ ಗೆ ಪ್ರಶಸ್ತಿ ಲಭಿಸಲಿದೆ.
ತೀರ್ಪುಗಾರರು ಮತ್ತು ನಿರೂಪಕರ ಮಾತು.
ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಯ ಹಿರಿಯ ಕಲಾವಿದ ಡಾ. ಮುಖ್ಯಮಂತ್ರಿ ಚಂದ್ರು 'ಕಾಮಿಡಿ ಗ್ಯಾಂಗ್ಸ್' ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರು.
"ನಗುವು ಸಹಜದ ಧರ್ಮ ; ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವ, ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ; ಎಂದು ಡಿವಿಜಿಯವರು ಹೇಳಿದ ಹಾಗೆ ನಗು ಹಂಚುವ ಕೆಲಸ ಸ್ಟಾರ್ ಸುವರ್ಣ ಮಾಡ್ತಿದೆ, ನಾನು ಈ ಕಾರ್ಯಕ್ರಮ ಭಾಗಾವಾಗಿರೋದು ತುಂಬಾ ಖುಷಿಯ ವಿಚಾರ, 'ಕಾಮಿಡಿ ಗ್ಯಾಂಗ್ಸ್' ಮೇಲೆ ನನಗೆ ಬಹಳ ಭರವಸೆಯಿದ್ದು, ಜನರಿಗೆ ಖಂಡಿತ ಇಷ್ಟವಾಗುತ್ತೆ" ಅಂತಾರೆ ಮುಖ್ಯಮಂತ್ರಿ ಚಂದ್ರು .
ಕಾರ್ಯಕ್ರಮದ ಮತ್ತೊಬ್ಬ ಜಡ್ಜ್ ಆಗಿರುವ ಶೃತಿ ಹರಿಹರನ್, ಇದೇ ಮೊದಲ ಬಾರಿಗೆ ಕಾಮಿಡಿ ಕಾರ್ಯಕ್ರಮವೊಂದರ ತೀರ್ಪುಗಾರರಾಗಿದ್ದಾರೆ." 'ಕಾಮಿಡಿ ಗ್ಯಾಂಗ್ಸ್' ಅಂದ್ರೆ ಬರಿ ಮನರಂಜನೆ ಮಾತ್ರವಲ್ಲ, ಪ್ರಸ್ತುತವಿರುವ ಗಂಭೀರ ವಿಷಯಗಳನ್ನೂ ಹಾಸ್ಯದ ಮೂಲಕ ವೀಕ್ಷಕರಿಗೆ ತಲುಪಿಸುವ ಕಾರ್ಯಕ್ರಮವಿದು" ಅನ್ನೋದು ಶ್ರುತಿ ಹರಿಹರನ್ ಅವರ ಅಭಿಪ್ರಾಯ.
Rahu Gochar 2022: ಜಾತಕದಲ್ಲಿ ರಾಹು ದೋಷದ ಲಕ್ಷಣಗಳೇನು? ದುಃಖಗಳಿಂದ ಕೂಡಿರುತ್ತದೆ ಜೀವನ
ಇಷ್ಟು ದಿನ ತಮ್ಮ ಕಾಮಿಡಿಯಿಂದ, ವೀಕ್ಷಕರ ಹೃದಯಕ್ಕೆ ಕಚಗುಳಿಯಿಟ್ಟಿದ್ದ ಕುರಿ ಪ್ರತಾಪ್ ಮೊದಲ ಬಾರಿಗೆ ತೀರ್ಪುಗಾರರಾಗಿದ್ದಾರೆ, "ಜಡ್ಜ್ ಅನ್ನೋಕ್ಕಿಂತ, ನಾನು ಶೋ ಎಂಜಾಯ್ ಮಾಡೋಕೆ ಬಂದಿದ್ದೀನಿ. ಮೊದಲ ಎಪಿಸೋಡ್ ಅದ್ಭುತವಾಗಿ ಮೂಡಿಬಂದಿದೆ. ಸ್ಟೇಜ್ ಮೇಲೆ ಸ್ಪರ್ಧಿಯಾಗಿದ್ರೂ , ಸ್ಟೇಜ್ ಎದುರಿಗೆ ಕೂತ ತೀರ್ಪುಗಾರನಾಗಿದ್ರೂ ಜನರನ್ನ ನಗಿಸಬೇಕು, ನಗಿಸೋರನ್ನ ಗೌರವಿಸಬೇಕು ಅನ್ನೋದಷ್ಟೆ ನನ್ನ ನಂಬಿಕೆ" ಎಂದು ಹೇಳಿದ್ದಾರೆ ಕುರಿ ಪ್ರತಾಪ್.
ಇನ್ನು ಕಾರ್ಯಕ್ರಮದ ನಿರೂಪಕರಾಗಿರುವ ಶಿವರಾಜ್ ಕೆ. ಆರ್. ಪೇಟೆ, ಇದೇ ಮೊದಲ ಬಾರಿಗೆ ಕಿರುತೆರೆಯ ಹೋಸ್ಟ್ ಆಗಿದ್ದಾರೆ."ನಗುವೆ ನನ್ನ ಜೀವನ, ನಗಿಸೋದೆ ನನ್ನ ಕಾಯಕ, ಇಷ್ಟು ದಿನ ಕಂಟೆಸ್ಟೆಂಟಾಗಿ ವೀಕ್ಷಕರನ್ನು ನಗಿಸುತ್ತಿದ್ದೆ, ಈಗ ಬದಲಾವಣೆಯ ಹಂತ. ಸ್ಟಾರ್ ಸುವರ್ಣ ವಾಹಿನಿಯ 'ಕಾಮಿಡಿ ಗ್ಯಾಂಗ್ಸ್' ಮೂಲಕ ನಿರೂಪಣೆಯ ಅವಕಾಶ ಸಿಕ್ಕಿದೆ, ಈ ಅನುಭವ ನನಗೆ ಬಹಳ ಖುಷಿ ಕೊಟ್ಟಿದೆ, ಅದ್ಭುತವಾಗಿ ಮೂಡಿಬಂದಿರುವ ಲಾಂಚ್ ಎಪಿಸೋಡ್ ನೋಡೋಕೆ ನಾನು ಕಾಯ್ತಾಯಿದ್ದೀನಿ" ಅಂತಾರೆ ಶಿವರಾಜ್ ಕೆ. ಆರ್. ಪೇಟೆ.
ಏಪ್ರಿಲ್ 16 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಗುವಿನ ಹೊಸ ಮನೆಯ ಗೃಹಪ್ರವೇಶವಾಗಲಿದೆ. ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು, ಮನಸ್ಸು ತುಂಬಿ ನಗೋದಕ್ಕೆ ನೀವೆಲ್ಲಾ ರೆಡಿಯಾಗಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.