ಬೆಂಗಳೂರು: ಎಲ್ಲಾ ಸರ್ಕಾರದಲ್ಲೂ ಪರ್ಸೆಂಟ್ ವಿಚಾರ ನಡೆಯುತ್ತಿದೆ ಯಾವ ಸರಕಾರದಲ್ಲಿ ನಡೆಯುವುದಿಲ್ಲ ಹೇಳಿ ಎಂದು ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿದ್ದಾರೆ.
40% ಕಮಿಷನ್ ಕುರಿತು ಹೊಸಕೋಟೆಯಲ್ಲಿ ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್ 'ಕಮಿಷನ್ ದಂದೆ ಎಲ್ಲಾ ಸರ್ಕಾರದಲ್ಲೂ ನಡೆದುಕೊಂಡು ಬಂದಿದೆ.ಇದರಲ್ಲಿ ಯಾರು ಸತ್ಯಹರಿಶ್ಚಂದ್ರ ಅಲ್ಲ, ಯಾರು ನಳ ಮಹಾರಾಜರಲ್ಲ.40 ಪರ್ಸೆಂಟ್ ಕಮಿಷನ್ ಪಡೆದರೆ ಗುತ್ತಿಗೆದಾರ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: KGF Chapter 2: ‘ಕೆಜಿಎಫ್ – 2’ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ..?
ಇದೇ ವೇಳೆ ಈಶ್ವರಪ್ಪ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಈಗಾಗಲೇ ಎಫ್.ಐ.ಆರ್. ದಾಖಲಾಗಿದೆ, ತನಿಖೆ ತಂಡದಿಂದ ತನಿಖೆ ನಡೆಯುತ್ತಿದೆ.ತನಿಖೆ ನಂತರ ಬಂದಿಸುವುದು ಬಿಡುವುದರ ಬಗ್ಗೆ ತೀರ್ಮಾನ ತನಿಖೆ ತಂಡ ತೆಗೆದುಕೊಳ್ಳುತ್ತೆ. ಪಕ್ಷದ ಮಾತಿಗೆ ಒಳಪಟ್ಟು ಈಶ್ವರಪ್ಪ ಅವರೇ ಖುದ್ದು ರಾಜೀನಾಮೆ ನೀಡಿದ್ದಾರೆ.ತನಿಖೆ ನಡೆಯುತ್ತಿದ್ದು ಸತ್ಯಾಸತ್ಯತೆ ಹೊರ ಬಂದ ನಂತರ ಪುನಃ ಸಚಿವ ಸಂಪುಟಕ್ಕೆ ಬರುತ್ತಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Kantara Teaser: ಕಾಂತಾರ ಟೀಸರ್ ರಿಲೀಸ್! ದೆವ್ವದ ಕಥೆ ಹೇಳಲು ಬರುತ್ತಿದ್ದರಾ ರಿಷಬ್ ಶೆಟ್ಟಿ?
ಎಲ್ಲಾ ಸರ್ಕಾರದಲ್ಲೂ ಪರ್ಸೆಂಟ್ ವಿಚಾರ ನಡೆಯುತ್ತಿದೆ ಯಾವ ಸರಕಾರದಲ್ಲಿ ನಡೆಯುವುದಿಲ್ಲ ಹೇಳಿ? 40% ಯಾರಾದ್ರೂ ಒಬ್ಬ ಮಂತ್ರಿ ತೆಗೆದುಕೊಳ್ಳಕ್ಕೆ ಆಗುತ್ತಾ..? ಒಬ್ಬ ಮಂತ್ರಿ ಇಷ್ಟು ಪಡೆದರೆ ಗುತ್ತಿಗೆದಾರರು ಕೆಲಸ ಮಾಡಲು ಆಗುತ್ತದೆಯಾ.?ಎಲ್ಲರ ಕಾಲದಲ್ಲೂ ಎಲ್ಲಾ ನಡೆದುಕೊಂಡು ಬಂದಿದೆ, ಯಾರು ಏನು ಸತ್ಯಹರಿಶ್ಚಂದ್ರರು ಅಲ್ಲಾ, ನಳಮಹಾರಾಜರು ಅಲ್ಲಾ ಆದರೆ ಶೇ 40% ಅನ್ನೋದು ಮಾತ್ರ ಶುದ್ಧ ಸುಳ್ಳು ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.