Salman Khan Aishwarya Rai Break Up : ಒಂದು ಕಾಲದಲ್ಲಿ ಈ ಜೋಡಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದ ಜೋಡಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ. ಮಾಧ್ಯಮ ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದ ಶೂಟಿಂಗ್ ಸಮಯದಲ್ಲಿ ಪರಸ್ಪರ ಹತ್ತಿರವಾಗಿದ್ದರು. ಇವರಿಬ್ಬರ ನಡುವಿನ ಪ್ರೇಮ ಕತೆಗಳು ಕೂಡಾ ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಕೆಲವೇ ಸಮಯಗಳಲ್ಲಿ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕೂಡಾ ಹರಿಯಲಾರಂಭಿಸಿತು. ಇವರಿಬ್ಬರ ನಡುವಿನ ಸಂಬಂಧ ಬಹಳ ದಿನಗಳವರೆಗೆ ಮುಂದುವರೆಯಲಿಲ್ಲ. ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವಿನ ಸಂಬಂಧದಲ್ಲಿ ಒತ್ತಡ ಉಂಟಾಗಲು ಕಾರಣವೇನು?  ಎನ್ನುವ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಸಲ್ಮಾನ್ ಮುಂದೆ ಕೆಲವು ಷರತ್ತುಗಳನ್ನು ಇಟ್ಟಿದ್ದ ಐಶ್ವರ್ಯಾ ರೈ :
ಮಾಧ್ಯಮ ವರದಿಗಳ ಪ್ರಕಾರ, ಸಲ್ಮಾನ್ ಖಾನ್, ಐಶ್ವರ್ಯ ಬಗ್ಗೆ ಅತಿಯಾದ ಪೊಸೆಸಿವ್ ಭಾವ ಹೊಂದಿದ್ದರಂತೆ. ಇವರಿಬ್ಬರು ಬೇರ್ಪಡಲು ಇದೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ, ಕೆಲವು ಮಾಧ್ಯಮ ವರದಿಗಳ ಪ್ರಕಾರ, ಐಶ್ವರ್ಯಾ ರೈ  ಸಲ್ಮಾನ್ ಮುಂದೆ ಇಟ್ಟಿದ್ದ ಕೆಲವು ಷರತ್ತುಗಳಿಂದಾಗಿ, ಇಬ್ಬರ ನಡುವೆ ಬ್ರೇಕ್ ಅಪ್ ಉಂಟಾಗಿತ್ತು. 


ಇದನ್ನೂ ಓದಿ : ಈ ನಟಿಯ ಜೀವನ ವಿವಾದಗಳಿಂದಲೇ ತುಂಬಿತ್ತು, 3 ಮಕ್ಕಳ ತಂದೆಗೆ ಮದುವೆಯಾಗಿ ಪಟ್ಟ ಪಾಡಿದು!


ಷರತ್ತುಗಳ ಬಗ್ಗೆ ತಲೆಕೆಡಿಸಿಕೊಂಡಿದ್ದ ಸಲ್ಮಾನ್ : 
ಸಲ್ಮಾನ್ ಸಹೋದರರಾದ ಸೊಹೈಲ್ ಮತ್ತು ಅರ್ಬಾಜ್ ಅವರ ಯಾವುದೇ ಪ್ರಾಜೆಕ್ಟ್ ಗಳಲ್ಲಿ ಸಹಾಯ ಮಾಡಬಾರದು ಎನ್ನುವುದೇ ಐಶ್ವರ್ಯ ಸಲ್ಮಾನ್ ಮುಂದಿಟ್ಟಿದ್ದ ಮೊದಲ ಷರತ್ತು ಆಗಿತ್ತಂತೆ. ಅವರುಗಳ ಚಲನಚಿತ್ರಗಳಲ್ಲಿ ಯಾವುದೇ ರೀತಿಯಲ್ಲಿಯೂ ಹಣವನ್ನು ಹೂಡಿಕೆ ಮಾಡಬಾರದು ಎಂದು ತಾಕೀತು ಮಾಡಿದ್ದರಂತೆ. ಅಷ್ಟೇ ಅಲ್ಲ, ಸಲ್ಮಾನ್ ಖಾನ್ ತನ್ನ ಕುಟುಂಬದೊಂದಿಗೆ ಇರುವುದು ಕೂಡಾ ಐಶ್ವರ್ಯಾಗೆ ಇಷ್ಟವಿರಲಿಲ್ಲ ಎನ್ನಲಾಗುತ್ತಿದೆ. ಇದೆಲ್ಲವೂ ಸಲ್ಮಾನ್  ಒಳಗಿನಿಂದಲೇ ಕೊರಗುವಂತೆ ಮಾಡಿತ್ತು ಎಂದು ಹೇಳಲಾಗುತ್ತದೆ.  ಇದೇ  ಗೊಂದಲ ಮುಂದುವರೆದು ಕೊನೆಗೆ ಇಬ್ಬರೂ ಬೇರೆಯಾಗುವಲ್ಲಿಗೆ ಬಂದು ತಲುಪಿತು ಎನ್ನಲಾಗಿದೆ. 


ಇಬ್ಬರ ನಡುವೆ ಸದಾ ನಡೆಯುತ್ತಿತ್ತು ಜಗಳ :
ಮಾಧ್ಯಮ ವರದಿಗಳ ಪ್ರಕಾರ, ಬ್ರೇಕಪ್ ಸಮಯದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ತೀವ್ರವಾಗಿ ಜಗಳವಾಡುತ್ತಿದ್ದರು ಎನ್ನಲಾಗಿದೆ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ, ಒಮ್ಮೆ ಸಲ್ಮಾನ್ ಚಲ್ತೇ ಚಲ್ತೆ ಚಿತ್ರದ ಸೆಟ್‌ನಲ್ಲಿ ನಟಿಯೊಂದಿಗೆ ಜಗಳವಾಡಲು ಬಂದಿದ್ದರು. ಇಬ್ಬರ ನಡುವೆ ತೀವ್ರ ಜಗಳ ನಡೆಡಿದ್ದು, ನಂತರ ಐಶ್ವರ್ಯಾ ಅವರನ್ನು ಈ ಚಿತ್ರದಿಂದಲೇ ಕೈ ಬಿಡಲಾಯಿತು. ಸಿನಿಮಾ ಸೆಟ್ ಗಳಿಗೆ ಬಂದು ಸಲ್ಮಾನ್ ನಡೆದುಕೊಳ್ಳುತ್ತಿದ್ದ ವರ್ತನೆಯಿಂದ ಬೇಸತ್ತ ಅನೇಕ ನಿರ್ಮಾಪಕರು ಐಶ್ವರ್ಯ ಅವರನ್ನು ತಮ್ಮ ಪ್ರಾಜೆಕ್ಟ್ ಗಳಿಂದ ಹೊರ ಗಿಟ್ಟಿದ್ದರು.  


ಇದನ್ನೂ ಓದಿ : ಸೀರೆಯಲ್ಲಿ ʼಕೆಜೆಎಫ್‌ ನಿಧಿʼ ಶ್ರೀನಿಧಿ ಶೈನ್‌..! ಫೋಟೋಸ್‌ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.