Prabhas Anushka Shetty love : ಟಾಲಿವುಡ್‌ ಸ್ಟಾರ್‌ ನಟ ಪ್ರಭಾಸ್ ಮತ್ತು ಕರಾವಳಿ ಬೆಡಗಿ ನಟಿ ಅನುಷ್ಕಾ ಶೆಟ್ಟಿ ಸಂಬಂಧದ ಸುದ್ದಿಗಳು ಆಗಾಗ ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ತೆಲುಗಿನ ʼಬಿಲ್ಲಾʼ ಸಿನಿಮಾದಿಂದ ಒಂದಾದ ಜೋಡಿ ಮದುವೆ ಆಗ್ತಾರೆ ಅಂತ ಅವರ ಅಭಿಮಾನಿಗಳು ಬೆಟ್ಟದಷ್ಟು ಆಸೆಯನ್ನು ಇಟ್ಟುಕೊಂಡು ಕುಳಿತಿದ್ದಾರೆ. ಆದ್ರೆ ಇಬ್ಬರು ಜಸ್ಟ್‌ ಬೆಸ್ಟ್‌ ಫ್ರೆಂಡ್ಸ್‌ ಅಂತ ಹೇಳುವುದುನ್ನು ಬಿಟ್ರೆ ಮದುವೆ ವಿಚಾರವಾಗ್ಲಿ ಲವ್‌ ಮ್ಯಾಟರ್‌ ಆಗ್ಲಿ.. ಯಾವುದೇ ವಿಚಾರ ಕುರಿತು ಚಕಾರ ಎತ್ತುತ್ತಿಲ್ಲ.


COMMERCIAL BREAK
SCROLL TO CONTINUE READING

2009 ರಲ್ಲಿ ʼಬಿಲ್ಲಾʼಸೆಟ್‌ಗಳಲ್ಲಿ ಇಬ್ಬರೂ ಭೇಟಿಯಾದರು. ಇಬ್ಬರ ಕ್ರ್ಯಾಕ್ಲಿಂಗ್ ಕೆಮಿಸ್ಟ್ರಿ ಸಿನಿಮಾವನ್ನು ಬ್ಲಾಕ್ಬಸ್ಟರ್‌ ಮಾಡಿತ್ತು. ಬಾಕ್ಸಾಫಿಸ್‌ನಲ್ಲಿ ಈ ಸಿನಿಮಾ ಸಖತ್‌ ಸದ್ದು ಮಾಡಿತ್ತು. ಈ ಚಿತ್ರದ ಯಶಸ್ವಿನ ನಂತರ ಮಿರ್ಚಿ, ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ: ದಿ ಕನ್‌ಕ್ಲೂಷನ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇಬ್ಬರ ಜೋಡಿ ತೆರೆ ಮೇಲೆ ಮೋಡಿ ಮಾಡಿತ್ತು. ಈ ಸ್ಟಾರ್‌ ಜೋಡಿ ನೋಡಿ, ಇಬ್ರು ಮದುವೆಯಾದ್ರೆ ಸೂಪರ್‌ ಆಗಿರುತ್ತೆ.. ಅಂತ ಇವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು.


ಇದನ್ನೂ ಓದಿ: Divya agarwal : ಸ್ಟಾರ್‌ ನಟಿಗೆ ʼAre You A Virgin..?ʼ ಎಂದು ಪ್ರಶ್ನೆ ಕೇಳಿದ ಯುವಕ..! ಉತ್ತರ ಏನು..?


ಆದ್ರೆ, Siasat.com ನಲ್ಲಿನ ಇತ್ತೀಚಿನ ವರದಿಯ ಪ್ರಕಾರ, ಪ್ರಭಾಸ್ ಮತ್ತು ಅನುಷ್ಕಾ ಸಂಬಂಧ ಮುರಿದುಬಿದ್ದಿದೆ ಎಂದು ಹೇಳಲಾಗಿದೆ. ಇಬ್ಬರು ನಟರು ಯಾವಾಗಲೂ ʼಒಳ್ಳೆಯ ಸ್ನೇಹಿತರುʼ ಎಂದು ಹೇಳಿಕೊಂಡಿದ್ದರೂ ಸಹ, ಅವರ ಲವ್‌ ಮ್ಯಾಟರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಚಾಟ್ ಶೋಗಳಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ. ಈ ಮದ್ಯ ಹಿರಿಯ ನಾಯಕನೊಂದಿಗಿನ ಅನುಷ್ಕಾ ಸಂಬಂಧದ ವದಂತಿಗಳೇ ಪ್ರಭಾಸ್ ಮತ್ತು ಅನುಷ್ಕಾ ನಡುವಿನ ಭಿನ್ನಾಭಿಪ್ರಾಯಗಳಿಗೆ ಕಾರಣ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಅನುಷ್ಕಾ ಸಂಬಂಧದ ಬಗ್ಗೆ ವದಂತಿಗಳ ಪರಿಣಾಮವಾಗಿ ಪ್ರಭಾಸ್ ಅನುಷ್ಕಾ ಅವರಿಂದ ದೂರವಾದ್ರು ಅಂತ ವರದಿಯಾಗಿದೆ.


ಇತ್ತೀಚಿಗೆ ಬಾಲಿವುಡ್ ನಟಿ ಕೃತಿ ಸನೋನ್ ಜೊತೆ ಪ್ರಭಾಸ್‌ ಡೇಟಿಂಗ್‌ ಮಾಡುತ್ತಿದ್ದಾರೆ. ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ವದಂತಿಗಳು ಕೇಳಿಬಂದಿದ್ದವು. ಅಲ್ಲದೆ, ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಟ್ವೀಟ್ ಮಾಡಿ, ಕೃತಿ ಸನನ್ ಮತ್ತು ಪ್ರಭಾಸ್ ಅವರ ನಿಶ್ಚಿತಾರ್ಥವಾಗಲಿದ್ದಾರೆ ಎನ್ನುವ ವದಂತಿ ಹಬ್ಬಿಸಿದ್ದರು. ಸದ್ಯ ಆದಿಪುರುಷ ಚಿತ್ರದಲ್ಲಿ ಪ್ರಭಾಸ್ ಮತ್ತು ಕೃತಿ ನಟಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.