Divya agarwal : ಸ್ಟಾರ್‌ ನಟಿಗೆ ʼAre You A Virgin..?ʼ ಎಂದು ಪ್ರಶ್ನೆ ಕೇಳಿದ ಯುವಕ..! ಉತ್ತರ ಏನು..?

ದಿವ್ಯಾ ಅಗರ್ವಾಲ್ ಹಿಂದಿ ರಿಯಾಲಿಟಿ ಶೋಗಳ ಮೂಲಕ ಬಾಲಿವುಡ್‌ನಲ್ಲಿ ಗುರುತಿಸಿಕೊಂಡ ಚೆಲುವೆ. ಈಕೆಯನ್ನು ರಿಯಾಲಿಟಿ ಸ್ಟಾರ್ ಎಂದೂ ಕರೆಯುತ್ತಾರೆ. ಆದ್ರೆ, ಈ ಬೆಡಗಿ ಬರೀ ರಿಯಾಲಿಟಿ ಶೋಗಳಿಗೆ ಸೀಮಿತವಾಗಿಲ್ಲ.. ಹಲವು ಸಿನಿಮಾಗಳಲ್ಲಿ ಐಟಂ ಸಾಂಗ್ಸ್‌ ಹಾಗೂ ಆಲ್ಬಂ ಗೀತೆಗಳಲ್ಲಿಯೂ ಕಾಣಿಸಿಕೊಂಡು ಪ್ರೇಕ್ಷಕರನ್ನು ಹುಬ್ಬೇರಿಸುವಂತೆ ಮಾಡಿದ್ರು. ದಿವ್ಯಾ ಅಗರ್ವಾಲ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಪ್ಯಾನ್‌ ಪಾಲೋಯಿಂಗ್‌ ಇದೆ.

Written by - Krishna N K | Last Updated : Mar 2, 2023, 06:45 PM IST
  • ದಿವ್ಯಾ ಅಗರ್ವಾಲ್ ಹಿಂದಿ ರಿಯಾಲಿಟಿ ಶೋಗಳ ಮೂಲಕ ಬಾಲಿವುಡ್‌ನಲ್ಲಿ ಗುರುತಿಸಿಕೊಂಡ ಚೆಲುವೆ.
  • ಹಲವು ಸಿನಿಮಾಗಳಲ್ಲಿ ಐಟಂ ಸಾಂಗ್ಸ್‌ ಹಾಗೂ ಆಲ್ಬಂ ಗೀತೆಗಳಲ್ಲಿಯೂ ದಿವ್ಯಾ ನಟಿಸಿದ್ದಾರೆ.
  • ನೆಟ್ಟಿಗರೊಬ್ಬರು ದಿವ್ಯಾ ಅವರ ಖಾಸಗಿ ವಿಚಾರದ ಕುರಿತು ಪ್ರಶ್ನೆ ಮಾಡಿದ್ದಾರೆ.
Divya agarwal : ಸ್ಟಾರ್‌ ನಟಿಗೆ ʼAre You A Virgin..?ʼ ಎಂದು ಪ್ರಶ್ನೆ ಕೇಳಿದ ಯುವಕ..! ಉತ್ತರ ಏನು..? title=

Divya Agarwal : ದಿವ್ಯಾ ಅಗರ್ವಾಲ್ ಹಿಂದಿ ರಿಯಾಲಿಟಿ ಶೋಗಳ ಮೂಲಕ ಬಾಲಿವುಡ್‌ನಲ್ಲಿ ಗುರುತಿಸಿಕೊಂಡ ಚೆಲುವೆ. ಈಕೆಯನ್ನು ರಿಯಾಲಿಟಿ ಸ್ಟಾರ್ ಎಂದೂ ಕರೆಯುತ್ತಾರೆ. ಆದ್ರೆ, ಈ ಬೆಡಗಿ ಬರೀ ರಿಯಾಲಿಟಿ ಶೋಗಳಿಗೆ ಸೀಮಿತವಾಗಿಲ್ಲ.. ಹಲವು ಸಿನಿಮಾಗಳಲ್ಲಿ ಐಟಂ ಸಾಂಗ್ಸ್‌ ಹಾಗೂ ಆಲ್ಬಂ ಗೀತೆಗಳಲ್ಲಿಯೂ ಕಾಣಿಸಿಕೊಂಡು ಪ್ರೇಕ್ಷಕರನ್ನು ಹುಬ್ಬೇರಿಸುವಂತೆ ಮಾಡಿದ್ರು. ದಿವ್ಯಾ ಅಗರ್ವಾಲ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಪ್ಯಾನ್‌ ಪಾಲೋಯಿಂಗ್‌ ಇದೆ.

ಹಿಂದಿಯ ಸ್ಪ್ಲಿಟ್ಸ್ ವಿಲ್ಲಾ, ಏಸ್ ಆಫ್ ಸ್ಪೇಸ್, ​​ಬಿಗ್ ಬಾಸ್ ಒಟಿಟಿಯಂತಹ ರಿಯಾಲಿಟಿ ಶೋಗಳ ಮೂಲಕ ದಿವ್ಯಾ ಅಗರ್ವಾಲ್ ಭಾರಿ ಕ್ರೇಜ್ ಪಡೆದಿದ್ದಾರೆ. ಇದಲ್ಲದೇ ಮಾಜಿ ಬಾಯ್ ಫ್ರೆಂಡ್ ಗೆ ಗುಡ್ ಬೈ ಹೇಳಿ ಹೊಸ ಬಾಯ್ ಫ್ರೆಂಡ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡು ಮದುವೆಯಾಗಲು ರೆಡಿಯಾಗುತ್ತಿರುವಂತಹ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದವು.

ಇದನ್ನೂ ಓದಿ: 'ಕಾಂತಾರ' ಲೀಲಾಗೆ ನಾನು ಪೊಲೀಸ್ ಆಫೀಸರ್ ಮಗಳು ಅನ್ನೋ ಗರ್ವ ಸ್ವಲ್ಪವೂ ಇಲ್ಲ....!

ಇತ್ತೀಚೆಗಷ್ಟೇ ದಿವ್ಯಾ ಅಗರ್ವಾಲ್ ತಮ್ಮ ಅಭಿಮಾನಿಗಳ ಜೊತೆ ಇನ್‌ಸ್ಟಾಗ್ರಾಮ್‌ನಲ್ಲಿ ʼಆಸ್ಕ್ ಮಿʼ ಸಂವಾದ ನಡೆಸಿದ್ದರು. ಈ ವೇಳೆ ಹಲವರು ದಿವ್ಯಾಗೆ ಸೌಂದರ್ಯ ರಹಸ್ಯಗಳು ಮತ್ತು ಮುಂಬರುವ ಪ್ರಾಜೆಕ್ಟ್‌ಗಳ ಬಗ್ಗೆ ಕೇಳಿದರು. ಹೋಟೆಲ್ ವ್ಯವಹಾರದಲ್ಲಿ ಉದ್ಯಮಿಯಾಗಿರುವ ಅವರೂರ್ವ ಪಡ್ಗಾಮೋನ್ಕರ್ ಜೊತೆ ದಿವ್ಯಾ ನಿಶ್ಚಿತಾರ್ಥ, ಮದುವೆ ಪ್ಲಾನ್‌ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳಲಾಯಿತು. ದಿವ್ಯಾ ಸಹ ಇವುಗಳಿಗೆ ನೇರವಾಗಿಯೇ ಉತ್ತರ ನೀಡಿದರು.

ಈ ವೇಳೆ, ಇನ್‌ಸ್ಟಾಗ್ರಾಮ್‌ ಬಳಕೆದಾರೊಬ್ಬರು ದಿವ್ಯಾ ಅವರ ಖಾಸಗಿ ವಿಚಾರದ ಕುರಿತು ಪ್ರಶ್ನೆ ಮಾಡಿದ್ದರು. ʼನೀವು ವರ್ಜಿನ್ ಆಗಿದ್ದೀರಾ?ʼ ಎಂಬ ಪ್ರಶ್ನೆಯನ್ನು ಕೇಳಿದ್ರು. ಇದಕ್ಕೆ ಅವರ ಅಭಿಮಾನಿಗಳು ಇಂತಹ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಎಂದು ಹೇಳಿದ್ರು. ಕೆಲವರಂತು ದಿವ್ಯಾ ಏನ್‌ ಉತ್ತರ ಕೊಡ್ತಾರೆ ಅಂತ ಕಾತುರದಿಂದ ಕಾಯುತ್ತಿದ್ದರು. ಆದರೆ ದಿವ್ಯಾ ಹಿಂದೇಟು ಹಾಕದೇ ಒಪನ್‌ ಆಗಿ, ʼಹೌದುʼ ಅಂತ ಉತ್ತರಿಸಿದರು. ನಟಿಯ ದಿಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ ಆದ್ರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News