Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಪಾಲಾಗಿ 3 ತಿಂಗಳು ಕಳೆದಿದೆ. ಈ ಪ್ರಕರಣದ ತನಿಖೆ ಕೊನೆಯ ಹಂತ ತಲುಪಿದ್ದು, ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಮಧ್ಯೆ ನಟ ದರ್ಶನ್ ಜೈಲಿನಿಂದ ಯಾವಾಗ ಬಿಡುಗಡೆಯಾಗುತ್ತಾರೆಂದು ಅವರ ಲಕ್ಷಾಂತರ ಅಭಿಮಾನಿಗಳು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಶೀಘ್ರವೇ ʼಡಿ-ಬಾಸ್‌ʼ ಜೈಲಿನಿಂದ ಬಿಡುಗಡೆಯಾಗಲಿ, ಮತ್ತೆ ಸಿನಿಮಾಗಳಲ್ಲಿ ನಟಿಸಲು ಅಂತಾ ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ. ಸದ್ಯ ಅಭಿಮಾನಿಯೊಬ್ಬ ನಟ ದರ್ಶನ್ ಹೊರಬರುವುದು ಯಾವಾಗ? ಅನ್ನೋದರ ಬಗ್ಗೆ ಜೋಕುಮಾರಸ್ವಾಮಿ ಬಳಿ ಭವಿಷ್ಯ ಕೇಳಿದ್ದಾರೆ.


ಇದನ್ನೂ ಓದಿ: ʼಈಗಲೂ ನನಗೆ ಭಯವಾಗುತ್ತಿದೆ'.. ಕೆಜಿಎಫ್ ನಟಿ ಸೆನ್ಸೇಷನಲ್‌ ಕಾಮೆಂಟ್!!‌


ನಟ ದರ್ಶನ ಸಿನಿಮಾ ಹಿಟ್ ಆಗುವ ಬಗ್ಗೆ, ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಬಗ್ಗೆ ಮತ್ತು ನಟನ ಮುಂದಿನ ಜೀವನದ ಬಗ್ಗೆ ಅಭಿಮಾನಿಯೊಬ್ಬ ಜೋಕುಮಾರಸ್ವಾಮಿ ಬಳಿ ಕೇಳಿದ್ದಾರೆ. ಜೋಕುಮಾರಸ್ವಾಮಿಯ ಬುಟ್ಟಿ ಎತ್ತಿ ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದೆ. 


ನಟ ದರ್ಶನ್‌ 3 ತಿಂಗಳಲ್ಲಿ ಜೈಲಿನಿಂದ ಹೊರಗೆ ಬರುತ್ತಾರೆ ಅಂದರೆ ಜೈಲಿನಿಂದ ಬಿಡುಗಡೆಯಾಗುತ್ತಾರಂತೆ. ಬಳಿಕ ʼಡೆವಿಲ್ʼ ಸಿನಿಮಾ ಹಿಟ್ ಆಗುವ ಬಗ್ಗೆಯೂ ಪಾಸಿಟಿವ್ ಉತ್ತರ ಬಂದಿದೆ. ನಟ ದರ್ಶನ ಹೊರಬಂದ ಮೇಲೆ ಹೇಗೆ ಅನ್ನೋ ಪ್ರಶ್ನೆಯನ್ನೂ ಕೇಳಲಾಗಿದೆ.


ಇದನ್ನೂ ಓದಿ:  ಕ್ಯಾಮರಾ ನೋಡಿದ ತಕ್ಷಣ ಜಯಾ ಬಚ್ಚನ್ ಯಾಕೆ ಕೋಪಗೊಳ್ಳುತ್ತಾರೆ? ಬಹು ವರ್ಷಗಳ ನಂತರ ಬಯಲಾಯ್ತು ದೊಡ್ಡ ಸತ್ಯ!!


ವಿಘ್ನ ನಿವಾರಕ ಗಣೇಶನ ಬಳಿಕ ಭೂಮಿಗೆ ಜೋಕುಮಾರಸ್ವಾಮಿ ಬರುತ್ತಾನೆಂಬ ನಂಬಿಕೆ ಇದೆ. ಗಣೇಶ ಹಬ್ಬದ ಬಳಿಕ ಬುಟ್ಟಿಯಲ್ಲಿ ಜೋಕುಮಾರಸ್ವಾಮಿಯನ್ನು ಇಟ್ಟುಕೊಂಡು ಮನೆ ಮನೆಗೆ ಮಹಿಳೆಯರು ಬರುತ್ತಾರೆ. ಈ ವೇಳೆ ಕೆಲವರು ತಮ್ಮ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ಇದಕ್ಕೆ ಜೋಕುಮಾರಸ್ವಾಮಿ ಉತ್ತರ ನೀಡುತ್ತಾರೆಂದು ಹೇಳಲಾಗಿದೆ. ಹಿಂದಿನ ಕಾಲದಿಂದಲೂ ಈ ವಾಡಿಕೆ ಇದ್ದು, ಇದನ್ನು ಅಪಾರ ಮಂದಿಯೂ ನಂಬಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.