Kodimatha Swamiji on Challenging Star Darshan: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳು ಕಳೆದಿವೆ. ಈ ಪ್ರಕರಣದ ಚಾರ್ಜ್​ಶೀಟ್ ಸಲ್ಲಿಕೆ ಬಳಿಕ ʼದಾಸʼ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಕಳೆದ ಕೆಲ ತಿಂಗಳುಗಳಿಂದ ಅವರು ಜಾಮೀನಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ದಚ್ಚುಗೆ ಮಾತ್ರ ಜಾಮೀನು ಸಿಗುತ್ತಿಲ್ಲ. 


COMMERCIAL BREAK
SCROLL TO CONTINUE READING

ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ CCH ಕೋರ್ಟ್​ ಜಾಮೀನು ನೀಡಲು ನಿರಾಕರಿಸಿದೆ. ಇದರ ಬೆನ್ನಲ್ಲೇ ಕೋಡಿಮಠದ ಶ್ರೀಗಳು ಸಿಎಂ ಸಿದ್ದರಾಮಯ್ಯ ಮತ್ತು ನಟ ದರ್ಶನ್‌ ಬಗ್ಗೆ ಮಾರ್ಮಿಕ ಭವಿಷ್ಯ ನುಡಿದಿದ್ದಾರೆ. ʼಮಾಡಿದ ಪಾಪವನ್ನು ಅನುಭವಿಸಲೇಬೇಕುʼ ಅಂತಾ ಹೇಳಿದ್ದಾರೆ.  


ಇದನ್ನೂ ಓದಿ: ಬಿಗ್‌ ಬಾಸ್‌ನಲ್ಲಿ ಹೊಡೆದಾಡಿ ಹೊರಬಿದ್ದಿದ್ದಾರೆ ಎನ್ನಲಾದ ಲಾಯರ್‌ ಜಗದೀಶ್‌ ಪತ್ನಿ ಹೇಗಿದ್ದಾರೆ ಗೊತ್ತಾ? ʼಸೌಮ್ಯʼ ಸ್ವಭಾವದ ಈಕೆ ಪತಿಯಂತೆ ಫೇಮಸ್‌ ವ್ಯಕ್ತಿ


ಈ ಹಿಂದೆ ಅತಿವೃಷ್ಟಿ ಇನ್ನೂ ನಿಂತಿಲ್ಲ, ಅದರ ಅಬ್ಬರ ಇನ್ನಷ್ಟು ಜೋರಾಗಲಿದೆ, ಗುಡ್ಡಗಳು ಕುಸಿಯಲಿವೆ ಅಂತಾ ಶ್ರೀಗಳು ಹೇಳಿದ್ದರು. ಅದರಂತೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮತ್ತು ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಕೇರಳದ ವಯನಾಡ್‌ನಲ್ಲಿ ಗುಡ್ಡ ಕುಸಿತದಿಂದ ಸಾಕಷ್ಟು ಸಾವುನೋವು ಆಗಿತ್ತು.


ಸಿದ್ದರಾಮಯ್ಯಗೆ ದೈವಬಲವಿಲ್ಲ!


ಮುಡಾ ಕೇಸಿನಲ್ಲಿ ಸಿಎಂ ಸಿದ್ದರಾಮಯ್ಯರ ವಿರುದ್ದ ಎಫ್‌ಐಆರ್ ದಾಖಲಾದ ನಂತರ ರಾಜ್ಯ ರಾಜಕೀಯದಲ್ಲಿ ಹಲವಾರು ಬದಲಾವಣೆಯಾಗುತ್ತಿದೆ. ಮುಖ್ಯಮಂತ್ರಿಗಳ ಬದಲಾವಣೆ ಎನ್ನುವ ಚರ್ಚೆ ತಕ್ಕಮಟ್ಟಿಗೆ ಕಮ್ಮಿಯಾಗುತ್ತಿದೆ. ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿಯವರು ಮುಡಾ ನಿವೇಶನಗಳನ್ನು ಹಿಂದಿರುಗಿಸಿದ್ದರ ಬಗ್ಗೆ ಮಾರ್ಮಿಕವಾಗಿ ಕೋಡಿಶ್ರೀಗಳು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯರಿಗೆ ದೈವಬಲವಿಲ್ಲ ಎನ್ನುವ ಮೂಲಕ ಅವರ ಕುರ್ಚಿ ಅಲುಗಾಡುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗುವಂತೆ ಮಾಡಿದ್ದಾರೆ.


ಇದನ್ನೂ ಓದಿ: ನಟಿ ಊರ್ವಶಿ ಮಗಳು ಯಾರ್‌ ಗೊತ್ತೆ..? ಈಕೆಯನ್ನ ನೋಡಿದ್ರೆ ರವಿಮಾಮ.. ʼನಾನು ನನ್ನ ಹೆಂಡತಿʼ ಸಿನಿಮಾ ನೆನಪಾಗುತ್ತೆ..


ʼದುರ್ಯೋಧನ ಗೆಲ್ಲುತ್ತಾನೆ, ಮುಖ್ಯಮಂತ್ರಿಗಳಿಗೆ ನೋವು ಕೊಟ್ಟಾಗಿದೆ. ಅವರ ಪತ್ನಿ ರಂಗ ಪ್ರವೇಶ ಮಾಡಿಯಾಗಿದೆ. ಈ ಮಹಾಭಾರತದಲ್ಲಿ ಮಹಾರಾಜ ಗೆಲ್ಲುತ್ತಾನೆ. ಆದರೆ ದೈವಬಲ ಈಗ ಇಲ್ಲ. ಇನ್ನೂ ಸ್ವಲ್ಪದಿನ ರಾಜಕೀಯದಲ್ಲಿ ಏರುಪೇರು ನಡೆಯುತ್ತದೆʼ ಅಂತಾ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.


ನಟ ದರ್ಶನ್ ವಿಚಾರವಾಗಿಯೂ ಪರೋಕ್ಷವಾಗಿ ಮಾತನಾಡಿರುವ ಕೋಡಿಶ್ರೀಗಳು, ʼಪುಣ್ಯದ ಕೆಲಸ ಮಾಡಲು ಭಯ ಪಡಬಾರದು. ಆದರೆ ಜನರು ಅದಕ್ಕೆ ಭಯ ಪಡುತ್ತಿದ್ದಾರೆ. ಪಾಪದ ಪಾಷಣ ಕಳೆಯಬೇಕಿದೆ, ಮಾಡಿದ ಕರ್ಮ ಫಲವತ್ತಾದರೆ ಯಾರೇನು ಮಾಡುವರು. ಪಾಪದ ಕೆಲಸ ಮಾಡುವುದಕ್ಕೆ ಹೆದರಬೇಕಿತ್ತುʼ ಅಂತಾ ಶ್ರೀಗಳು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.