Renukaswamy murder case: ಇವರೇ ನೋಡಿ ನಟ ದರ್ಶನ್ ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ!
Renukaswamy murder case: ಈ ಹೈಪ್ರೋಫೈಲ್ ಕೇಸ್‌ನಲ್ಲಿ ಡಿಸಿಪಿ ಗಿರೀಶ್ ಹಾಗೂ ಸಹಾಯಕ ಪೊಲೀಸ್ ಕಮಿಷನರ್ ಚಂದನ್‌ಕುಮಾರ್ ಅವರೇ ರಿಯಲ್ ಹೀರೋಗಳು. ರೇಣುಕಾಸ್ವಾಮಿ ಕೊಲೆಯಾದ ದಿನ ಗಿರೀಶ್ ಅವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇಲ್ಲದಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ.
Renukaswamy murder case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶಶ್, ಆತನ ಗೆಳತಿ ಪವಿತ್ರಾ ಗೌಡ ಸೇರಿದಂತೆ ಇದುವರೆಗೆ ೧೮ ಜನರನ್ನು ಬಂಧಿಸಲಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಯನ್ನು ಬಂಧಿಸುವುದು ಸುಲಭದ ಕೆಲಸವಲ್ಲ. ಸಾಮಾನ್ಯವಾಗಿ ಸಾಕಷ್ಟು ರಾಜಕಾರಣಿಗಳ ಒತ್ತಡ ಇದ್ದೇ ಇರುತ್ತದೆ. ಹೀಗಾಗಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟನನ್ನು ಅರೆಸ್ಟ್ ಮಾಡಿದ ಆ ಪೊಲೀಸ್ ಅಧಿಕಾರಿ ಯಾರು? ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿಯೂ ಮೂಡಿರುತ್ತದೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ದೊಡ್ಡ ದೊಡ್ಡ ಆಮಿಷ, ಪ್ರಭಾವಿಗಳ ನೆರಳು ಸೋಕಿದರೂ ಸಹ ದರ್ಶನ್‌ರಂತಹ ಸ್ಟಾರ್ ನಟನನ್ನು ಈ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಬೇಟೆಯಾಡಿದ್ದು ಉಪ ಪೊಲೀಸ್ ಆಯುಕ್ತ ಎಸ್.ಗಿರೀಶ್. ಹೌದು, ಡೈನಾಮಿಕ್ ಅಧಿಕಾರಿ ಗಿರೀಶ್ ಇಲ್ಲದ್ದಿದ್ದರೆ ಈ ಪ್ರಕರಣವು ಗಾಳಿಯಲ್ಲಿ ತೇಲಿ ಹೋಗುತ್ತಿತ್ತು ಅನ್ನೋದರಲ್ಲಿ ಅನುಮಾನವೇ ಇಲ್ಲ. ಸ್ವಲ್ಪವೇ ಸ್ವಲ್ಪ ಯಾಮಾರಿದ್ದರೂ ಈ ಕೇಸ್ ಜಗತ್ತಿಗೆ ತಿಳಿಯದೆ ಕ್ಲೋಸ್ ಆಗುತ್ತಿತ್ತು. ಮುಚ್ಚಿಹೋಗಬೇಕಿದ್ದ ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರುವಲ್ಲಿ ಗಿರೀಶ್ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಈ ರೀತಿ ಕೊಲೆ ಮಾಡ್ತಾರೆ ಅಂತ ಗೊತ್ತಾಗಿದ್ದಿದ್ರೆ ನಾನೇ ಕಂಪ್ಲೆಂಟ್ ಕೊಡ್ತಿದ್ದೆ..! ಖಾಕಿ ಮುಂದೆ ಪವಿತ್ರಾ ಅಳಲು
ಈ ಹೈಪ್ರೋಫೈಲ್ ಕೇಸ್‌ನಲ್ಲಿ ಡಿಸಿಪಿ ಗಿರೀಶ್ ಹಾಗೂ ಸಹಾಯಕ ಪೊಲೀಸ್ ಕಮಿಷನರ್ ಚಂದನ್‌ಕುಮಾರ್ ಅವರೇ ರಿಯಲ್ ಹೀರೋಗಳು. ರೇಣುಕಾಸ್ವಾಮಿ ಕೊಲೆಯಾದ ದಿನ ಗಿರೀಶ್ ಅವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇಲ್ಲದಿದ್ದರೆ ಈ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ. ಕೊಲೆಯಾದ ರೇಣುಕಾಸ್ವಾಮಿಯ ಶವವನ್ನು ಮೊದಲು ಸ್ವಿಗ್ಗಿ ಡೆಲಿವರಿ ಬಾಯ್ ನೋಡಿದ್ದ. ಅದನ್ನು ಹತ್ತಿರದ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಗಮನಕ್ಕೆ ತಂದಿದ್ದ. ಅವರು ಕೂಡಲೇ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದರು. ರೇಣುಕಾಸ್ವಾಮಿ ಶವ ಸಿಗುತ್ತಲೇ ನಾಲ್ಕು ಮಂದಿ ನಾವೇ ಕೊಲೆ ಮಾಡಿದ್ದು ಅಂತಾ ಪೊಲೀಸ್ ಠಾಣೆಗೆ ಆಗಮಿಸಿದ್ದರು.
ಶರಣಾದ ನಾಲ್ವರು ಆರೋಪಿಗಳನ್ನು ವಿಚಾರಿಸಿದಾಗ ಗಿರೀಶ್ ಅವರಿಗೆ ಅನುಮಾನ ಬಂದಿತ್ತು. ನಾಲ್ವರ ಹೇಳಿಕೆಗಳು ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಆಗ ಗಿರೀಶ್ ಮತ್ತು ಚಂದನ್ ಕುಮಾರ್ ಇಬ್ಬರು ಸೇರಿ ಆರೋಪಿಗಳಿಗೆ ಸರಿಯಾಗಿ ಬೆಂಡೆತ್ತಿದ್ದರು. ಆಗ ರೇಣುಕಾಸ್ವಾಮಿಯ ಕೊಲೆಯ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಶರಣಾಗತಿಯಾದ ಆರೋಪಿಗಳಿಗೂ ರೇಣುಕಾಸ್ವಾಮಿಗೂ ಸಂಬಂಧವೇ ಇಲ್ಲ. ಕೇವಲ ಜೈಲಿಗೆ ಹೋಗಲು ಅವರಿಗೆ ಹಣದ ಆಮಿಷ ಒಡ್ಡಲಾಗಿತ್ತು ಅನ್ನೋ ಅಂಶ ಬೆಳಕಿಗೆ ಬಂದಿದೆ. ಯಾವುದಕ್ಕೂ ಮಣಿಯದೆ ಅತ್ಯಂತ ಧೈರ್ಯದಿಂದ ಈ ಹೈಪ್ರೋಫೈಲ್ ಪ್ರಕರಣವನ್ನು ಹ್ಯಾಂಡಲ್ ಮಾಡಿದ ಗಿರೀಶ್ ಮತ್ತು ಚಂದನ್ ಕುಮಾರ್ ಸ್ಯಾಂಡಲ್‌ವುಡ್ ಸ್ಟಾರ್ ನಟನಿಗೆ ಜೈಲುಕಂಬಿ ಎಣಿಸುವಂತೆ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.