ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ(Ragini Dwivedi) ಮತ್ತು ಸಂಜನಾ ಗಲ್ರಾನಿ(Sanjana Galrani) ಡ್ರಗ್ಸ್ ಸೇವಿಸಿರುವುದು ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ದೃಢವಾಗಿದೆ. ಕನ್ನಡ ಚಿತ್ರರಂಗದಲ್ಲಿ ಸೆಲೆಬ್ರೆಟಿಗಳು ಡ್ರಗ್ಸ್ ಜಾಲದ ನಂಟು ಹೊಂದಿರುವ ಸುದ್ದಿ ಭಾರೀ ಸದ್ದು ಮಾಡಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು ನಟಿಯರನ್ನು ಬಂಧಿಸಿದ್ದರು. ತಾವು ಡ್ರಗ್ಸ್ ಸೇವಿಸಿಲ್ಲವೆಂದೇ ನಟಿಯರು ಇದುವರೆಗೂ ಹೇಳಿಕೊಂಡು ಬಂದಿದ್ದರು.


COMMERCIAL BREAK
SCROLL TO CONTINUE READING

ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ವಿರೇನ್ ಖನ್ನಾ, ರಾಹುಲ್ ತೋನ್ಸೆ, ರವಿಶಂಕರ್, ಲೂಮ್ ಪೆಪ್ಪರ್ ಡ್ರಗ್ಸ್ ಸೇವಿಸಿರುವುದು ಎಫ್​ಎಸ್​ಎಲ್ ವರದಿ(FSL Reports) ಯಲ್ಲಿ ದೃಢಪಟ್ಟಿದೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿಯರು ತಮ್ಮ ವೃತ್ತಿಪರ ಜೀವನಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಈಗ ಬಹುದೊಡ್ಡ ಇಕ್ಕಟ್ಟು ಎದುರಾಗಿದೆ.


ಇದನ್ನೂ ಓದಿ: Abracadabra: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಆಬ್ರಕಡಾಬ್ರ’ದಲ್ಲಿ ಹಿರಿಯ ನಟ ಅನಂತ್ ನಾಗ್..!


ಡ್ರಗ್ಸ್ ದಂಧೆ ಪ್ರಕರಣ(Sandalwood Drugs Case)ಕ್ಕೆ ಸಂಬಂಧಿಸಿದಂತೆ ಆಗಸ್ಟ್ 4ರಂದು ರಾಗಿಣಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಪರಿಶೀಲನೆ ಬಳಿಕ ನಟಿಯನ್ನು ಬಂಧಿಸಿದ್ದರು. ನಂತರ ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಸಂಜನಾ ಗಲ್ರಾನಿ ಸೇರಿದಂತೆ ಅನೇಕರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ನಾವು ಮಾದಕವಸ್ತು ಸೇವಿಸಿಲ್ಲವೆಂದು ನಟಿಯರು ವಾಧಿಸಿದ್ದರು. ರಾಗಿಣಿ ಮತ್ತು ಸಂಜನಾ ತಲೆ ಕೂದಲನ್ನು 2020ರ ಅಕ್ಟೋಬರ್​​ನಲ್ಲಿ ಹೈದರಾಬಾದ್​ನ ಎಫ್​ಎಸ್​ಎಲ್ ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಇದೀಗ ಸಿಸಿಬಿ ಪೊಲೀಸರ ಕೈಸೇರಿದೆ. ಇಬ್ಬರೂ ನಟಿಮಣಿಯರೂ ಕೂಡ ಡ್ರಗ್ಸ್ ಸೇವಿಸಿರುವುದು ಈ ವರದಿಯಲ್ಲಿ ದೃಢಪಟ್ಟಿದೆ. ಇವರ ಜೊತೆಗೆ ವಿರೇನ್ ಖನ್ನಾ ಸೇರಿ ಹಲವರು ಕೂಡ ಮಾದಕ ವಸ್ತು ಸೇವಿಸಿರುವುದು ಖಚಿತಪಟ್ಟಿದೆ.


ಇದನ್ನೂ ಓದಿ: ನಟಿ ಇನಯಾ ಸುಲ್ತಾನಾ ಜೊತೆ ಡ್ಯಾನ್ಸ್ ಮಾಡಿ 'ನಾನವನಲ್ಲ' ಎಂದ ರಾಮ್ ಗೋಪಾಲ್ ವರ್ಮಾ...!


ಬರೋಬ್ಬರಿ 10 ತಿಂಗಳ ಬಳಿಕ ಎಫ್ಎಸ್ಎಲ್ ವರದಿ(FSL Report) ಬಂದಿದ್ದು, ಸದ್ಯ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ರಾಗಿಣಿ, ಸಂಜನಾಗೆ ದೊಡ್ಡ ಸಂಕಷ್ಟ ಎದುರಾಗಿದೆ. ಮುಂದಿನ ದಿನಗಳಲ್ಲಿ ನಟಿಮಣಿಯರ ಜೀವನ ಏನಾಗಬಹುದು ಎಂಬುದು ಭಾರೀ ಕುತೂಹಲ ಮೂಡಿಸಿದೆ. ಮಾದಕ ದ್ರವ್ಯ ಸೇವನೆ ಆರೋಪ ಸಾಬೀತಾದರೆ 1 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಅಥವಾ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಹೀಗಾಗಿ ಸ್ಯಾಂಡಲ್ ವುಡ್ ನಟಿಯರಿಗೆ ಬಿಗ್ ಶಾಕ್ ಎದುರಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.