Kabzaa: ಲಕ್ಷ್ಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಜಿ ಸಚಿವ ಎಚ್​.ಎಂ. ರೇವಣ್ಣ ಅವರ ಮಗ ಅನೂಪ್​, ನಂತರ 2017ರಲ್ಲಿ ಬಿಡುಗಡೆಯಾದ 'ಪಂಟ' ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು. ಈಗ ಸುಮಾರು ಏಳು ವರ್ಷಗಳ ಗ್ಯಾಪ್​ನ ಬಳಿಕ ಪುನಃ ಆರ್​. ಚಂದ್ರು ನಿರ್ದೇಶನದ  ಕಬ್ಜಚಿತ್ರದ ಮೂಲಕ ಅನೂಪ್​ ರೀಎಂಟ್ರಿ ಕೊಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಕಬ್ಜ ಚಿತ್ರದಲ್ಲಿ ಅನೂಪ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಉಪೇಂದ್ರ ಅವರ ಸ್ನೇಹಿತನ ಪಾತ್ರದಲ್ಲಿ ಅನೂಪ್​ ನಟಿಸಿದ್ದು, ಇಡೀ ಚಿತ್ರದಲ್ಲಿ ಅವರ ಪಾತ್ರ ಸಾಗುತ್ತದಂತೆ.ಕಬ್ಜ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಚಿತ್ರದಲ್ಲಿ ನಟಿಸಿದ ಅನುಭವ ಕುರಿತು ಮಾತನಾಡುವ ಅವರು, 'ಉಪ್ಪಿ ಸಾರ್​ ಬಲಗೈಬಂಟನಾಗಿ ನಟಿಸಿದ್ದೇನೆ. ಅವರ ಜತೆಗೆ ನಾನು ಸಹ ಭೂಗತಲೋಕದಲ್ಲಿ ಬೆಳೆಯುತ್ತೇನೆ. ಉಪ್ಪಿ ಸಾರ್​ ನಿರ್ದೇಶಕರಾಗಿ, ನಟರಾಗಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು. ಅವರ ಜೊತೆಗೆ ನಾಲ್ಕು ವರ್ಷ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರಿಂದ ತುಂಬಾ ಕಲಿತಿದ್ದೇನೆ. ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆ. ನಾಲ್ಕು ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ.


ಇದನ್ನೂಓದಿ: Puneeth Rajkumar : ಮಾರ್ಚ್‌ 17ರಂದು ಅಪ್ಪು ಫ್ಯಾನ್ಸ್‌ ಗೆ ಕಾದಿದೆ ಬಿಗ್ ಸರ್ಪೈಸ್ .!


ಏಕೆಂದರೆ, ಚಿತ್ರದ ಕೆಲಸ ಅಷ್ಟಿತ್ತು. ಬರೀ ನಟನಾಗಿಯಷ್ಟೇ ಅಲ್ಲ, ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಚಿತ್ರದಿಂದ ತುಂಬಾ ಕಲಿತಿದ್ದೇನೆ. ಇಡೀ ತಂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಎಲ್ಲರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇದೆ' ಎನ್ನುತ್ತಾರೆ.
'ಕಬ್ಜ' ಅಲ್ಲದೆ, 'ಹೈಡ್​ ಅಂಡ್​ ಸೀಕ್​' ಎಂಬ ಇನ್ನೊಂದು ಚಿತ್ರದಲ್ಲೂ ಅನೂಪ್​ ನಟಿಸಿದ್ದು, ಅದು ಸಹ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆಯಂತೆ. ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವಾಗಿದೆ.


ಇದನ್ನೂಓದಿ: Deepika Padukone: ಹಾಲಿವುಡ್ ಮಾಧ್ಯಮದ ಮೇಲೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಗರಂ ಆಗಿದ್ದೇಕೆ ?


ನೆಗೆಟಿವ್​ ಶೇಡ್​ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. 'ಒಬ್ಬ ನಟನಾಗಿ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಿರಬೇಕು, ಪ್ರಯೋಗಗಳನ್ನು ಮಾಡುತ್ತಿರಬೇಕು ಎಂದು ನಂಬಿದವನು ನಾನು. ಅದಕ್ಕೆ ಸರಿಯಾಗಿ 'ಹೈಡ್​ ಅಂಡ್​ ಸೀಕ್​' ಚಿತ್ರದಲ್ಲೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಇದರಲ್ಲಿ ಕಿಡ್ನಾಪರ್​ ಆಗಿ ಕಾಣಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಬೇರೆಬೇರೆ ತರಹದ ಪ್ರಯೋಗಗಳನ್ನು ಮಾಡುವ ಆಸೆ ಇದೆ' ಎನ್ನುತ್ತಾರೆ.ಈ ಎರಡು ಚಿತ್ರಗಳಲ್ಲದೆ ಒಂದಿಷ್ಟು ಕಥೆಗಳನ್ನು ಕೇಳಿದ್ದಾರಂತೆ ಅನೂಪ್​. ಆದರೆ, ತಂದೆ ಎಚ್​.ಎಂ. ರೇವಣ್ಣ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಮತ್ತು ಅವರ ಪರ ಪ್ರಚಾರ ಮಾಡಬೇಕಿರುವುದರಿಂದ, ಈ ಎರಡೂ ಚಿತ್ರಗಳ ಬಿಡುಗಡೆಯ ನಂತರ ಒಂದು ಸಣ್ಣ ಗ್ಯಾಪ್​ ಪಡೆಯಲಿದ್ದಾರಂತೆ. ಆಮೇಲೆ ಪುನಃ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಇನ್ನಷ್ಟು ಸಕ್ರಿಯವಾಗುವುದಾಗಿ ಹೇಳುತ್ತಾರೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.