ನವದೆಹಲಿ: ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(RGV) ಗರಡಿಯಲ್ಲಿ ಪಳಗಿದ ನಿರ್ದೇಶಕ ಕಿಶೋರ್ ಭಾರ್ಗವ್(Kishore Bhargav) ಆಕ್ಷನ್ ಕಟ್ ಹೇಳಿರುವ ‘ಸ್ಟಾಕರ್’ ಸಿನಿಮಾ(Stalker Movie) ಮಾರ್ಚ್ 31ಕ್ಕೆ ಬಿಡುಗಡೆಯಾಗಲಿದೆ. ಐದಾರು ವರ್ಷಗಳಿಂದ ಆರ್‌ಜಿವಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ಕಿಶೋರ್ ಭಾರ್ಗವ್ ‘ಸೈಕೋ’ ಎಂಬ ತೆಲುಗು ಸಿನಿಮಾ ನಿರ್ದೇಶನ ಮಾಡಿರುವ ಅನುಭವ ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

ಮಾರ್ಚ್ 31ಕ್ಕೆ ರಾಜ್ಯಾದ್ಯಂತ ಸುಮಾರು 30ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ‘ಸ್ಟಾಕರ್’ ಸಿನಿಮಾ ಬಿಡುಗಡೆ(Stalker Movie Release)ಯಾಗಲಿದೆ. ಆರ್‌ಜಿವಿ ಗರಡಿಯಲ್ಲಿ ಪಳಗಿದ ನಿರ್ದೇಶಕರ ಸಿನಿಮಾ ಕುತೂಹಲ ಹುಟ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ರೀತಿ ಆರ್‌ಜಿವಿ ಶಿಷ್ಯರ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಇರುತ್ತದೆ. ಇತ್ತೀಚೆಗಷ್ಟೇ ಈ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ.   


ಇದನ್ನೂ ಓದಿ: ತೆಲುಗು ಗಾಯಕ ಸಿದ್ದ್ ಶ್ರೀರಾಮ್ ಮ್ಯಾಜಿಕಲ್ ವಾಯ್ಸ್‌ನಲ್ಲಿ ಮೂಡಿಬಂದ ಕನ್ನಡ ಹಾಡು!


ಸಸ್ಪೆನ್ಸ್ ಥ್ರಿಲ್ಲರ್ ‘ಸ್ಟಾಕರ್’ ಟ್ರೈಲರ್ ರಿಲೀಸ್


‘ಸ್ಟಾಕರ್’ ಸಿನಿಮಾ ಫಸ್ಟ್ ಲುಕ್(Stalker First Look) ಮೂಲಕ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಈಗ ರಿಲೀಸ್ ಆಗಿರುವ ಟ್ರೈಲರ್ ಸಿನಿಮಾ ಮೇಲಿನ ಈ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಗಂಡ-ಹೆಂಡತಿ ಮತ್ತು ಮಗಳನ್ನೊಳಗೊಂಡ ಸುಂದರ ಕುಟುಂಬ.. ಎಲ್ಲವೂ ಚೆನ್ನಾಗಿದ್ದ ಆ ಮಗಳ ಲೈಫ್ ನಲ್ಲಿ ಕಾಟ ಕೊಡುವ ವಿಲನ್.. ಆ ವಿಲನ್ ನನ್ನು ಪತ್ತೆ ಹಚ್ಚಲು ಬರುವ ಉಗ್ರ ನಿಗ್ರಹ ಪಡೆ...ಇದು ‘ಸ್ಟಾಕರ್’ ಟ್ರೈಲರ್ ನ ಹೈಲೆಟ್ಸ್.. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದ ಟ್ರೈಲರ್ ರಿಲೀಸ್ ಮಾಡಿರುವ ಚಿತ್ರತಂಡ ಪ್ರಮೋಷನ್ ಕಹಳೆ ಮೊಳಗಿಸಿದೆ.


Stalker Movie, RGV, Stalker, Suman Nagarkar, Kishore Bhargav, RGV Assistant, Stalker Release Date, Sandalwood, Entertainment


‘ಸ್ಟಾಕರ್’ ಸಿನಿಮಾದಲ್ಲಿ ‘ಬೆಳದಿಂಗಳ ಬಾಲೆ’ ಖ್ಯಾತಿಯ ನಟಿ ಸುಮನ್ ನಗರ್ಕರ್(Suman Nagarkar) ಅವರು ಉಗ್ರ ನಿಗ್ರಹ ದಳ ಅಧಿಕಾರಿಯಾಗಿ ಮಿಂಚಲಿದ್ದಾರೆ. ರಾಮ್, ಐಶ್ವರ್ಯ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿ ಶಂಕರ್ ದೇಸಾಯಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ: Upendra: ರಿಯಲ್ ಸ್ಟಾರ್ ಉಪ್ಪಿ ಕಂಠಸಿರಿಯಲ್ಲಿ ‘ಹುಷಾರ್’ ಹಾಡು


ಸ್ಕ್ರಿಪ್ಟ್ ಟೀಸ್ ಮತ್ತು SML ಪ್ರೊಡಕ್ಷನ್ಸ್ ಸಂಸ್ಥೆಗಳಡಿ MNV ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಸೋಮಶೇಖರ್ ಎನ್.ಕೆ, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಚಿತ್ರಕಥೆ ಬರೆದಿದ್ದು, ಚಿತ್ರಕ್ಕೆ ವಿನೋದ್ ರಾಜ್ ಕ್ಯಾಮೆರಾ ಕೈಚಳಕವಿದೆ. ಸ್ಕಂದ ಕಶ್ಯಪ್ ಸಂಗೀತ ನೀಡಿದ್ದರೆ, ಸುಧೀರ್ ಪಿ.ಆರ್ ಅವರ ಕಲಾ ನಿರ್ದೇಶನವಿದೆ. ಜೊತೆಗೆ ವಂದನಾ ಭಂಡಾರೆ ವಸ್ತ್ರ ವಿನ್ಯಾಸ ಸಿನಿಮಾದಲ್ಲಿರಲಿದೆ. ಟ್ರೈಲರ್ ರಿಲೀಸ್ ಆಗಿ ಭಾರೀ ಕುತೂಹಲ ಮೂಡಿಸಿರುವ ‘ಸ್ಟಾಕರ್’ ಸಿನಿಮಾ(Stalker Movie) ಮಾರ್ಚ್ 31ಕ್ಕೆ ತೆರೆಗಪ್ಪಳಿಸಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.