ಮುಂಬೈ: ಬಾಲಿವುಡ್ ಖ್ಯಾತ ಹಿರಿಯ ನಟ ಅನಿಲ್ ಕಪೂರ್(Anil Kapoor)ಹಾಗೂ ಸುನೀತಾ ಕಪೂರ್ ಪುತ್ರಿ, ನಿರ್ಮಾಪಕಿ ರಿಯಾ ಕಪೂರ್ ಇಂದು(ಆಗಸ್ಟ್ 14) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬಹುಕಾಲದ ಗೆಳೆಯ ಕರಣ್ ಬೂಲಾನಿ ಜೊತೆಗೆ ಅವರು ಸಪ್ತಪದಿ ತುಳಿಯಲಿದ್ದಾರೆ.  


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ ರಿಯಾ ಕಪೂರ್(Rhea Kapoor) ಮತ್ತು ಕರಣ್ ಬೂಲಾನಿ ಮದುವೆ ಮುಂಬೈನಲ್ಲಿರುವ ಅನಿಲ್ ಕಪೂರ್ ಅವರ ಜುಹು ಬಂಗಲೆಯಲ್ಲಿ ನಡೆಯಲಿದೆ. ಸರಳವಾಗಿ ನಡೆಯಲಿರುವ ಮದುವೆ ಸಮಾರಂಭಕ್ಕೆ ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಪ್ರವೇಶವಿರುತ್ತದೆ. ಆದಾಗ್ಯೂ, ಅನಿಲ್ ಕಪೂರ್ ಕುಟುಂಬವು ಈ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ.


ಇದನ್ನೂ ಓದಿ: Abhishek Bachchan: ತನ್ನ ಐಷಾರಾಮಿ ಅಪಾರ್ಟ್ಮೆಂಟ್ ಮಾರಾಟ ಮಾಡಿದ ಅಭಿಷೇಕ್ ಬಚ್ಚನ್!


ಮದುವೆ ಸಮಾರಂಭಕ್ಕೂ ಮುನ್ನ ಅನಿಲ್ ಕಪೂರ್ ಅವರ ಜುಹು ಬಂಗಲೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮನೆಯಲ್ಲಿ ಮದುವೆ ಸಂಭ್ರಮ ಕಳಗಟ್ಟಿದೆ. ವಿದ್ಯುತ್ ದೀಪಾಲಂಕಾರದಿಂದ ಮದುವೆ ಮನೆ ಜಗಮಗಿಸುತ್ತಿದೆ. ಕಲರ್ ಕಲರ್ ಲೈಟಿಂಗ್ಸ್, ವಿಧವಿಧವಾದ ಹೂಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ಶುಕ್ರವಾರ ಸಂಜೆ ಅನಿಲ್ ಕಪೂರ್ ಅವರ ಅಳಿಯ ಕರಣ್ ಬೂಲಾನಿ(Karan Boolani)ಕೂಡ ಜುಹು ಬಂಗಲೆಯ ಹೊರಗೆ ಕಾಣಿಸಿಕೊಂಡಿದ್ದರು.


Sandalwood ಸುದ್ದಿ: ಯೋಗರಾಜ್ ಭಟ್ ‘ಪದವಿ ಪೂರ್ವ’ ಕಾಲೇಜಿಗೆ ಸೋನಲ್ ಮೊಂಥೆರೋ ಅತಿಥಿ..!


ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಕಳೆದ 13 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಕರಣ್ ಬೂಲಾನಿ(Karan Boolani) ನಿರ್ಮಾಪಕರಾಗಿದ್ದು, ಹಲವಾರು ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ. 2010ರಲ್ಲಿ ತೆರೆಕಂಡ ‘ಐಶಾ’ ಸಿನಿಮಾದಲ್ಲಿ ರಿಯಾ ಕಪೂರ್‌ಗೆ ಕರಣ್ ಸಹಾಯ ಮಾಡಿದ್ದರು. ಈ ಚಿತ್ರದಲ್ಲಿ ಸೋನಮ್ ಕಪೂರ್, ಅಮೃತಾ ಪುರಿ, ಇರಾ ದುಬೆ ಮತ್ತು ಅಭಯ್ ಡಿಯೋಲ್ ನಟಿಸಿದ್ದರು. ‘ವೇಕ್ ಅಪ್ ಸಿದ್’ ಸಿನಿಮಾಗಾಗಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ