ಮುಂಬೈ: ಕರೋನಾವೈರಸ್ ಸಾಂಕ್ರಾಮಿಕದ ಮಧ್ಯೆಯೂ ಹಲವು ಸಿನಿಮಾ ತಾರೆಯರು ಐಶಾರಾಮಿ ಬಂಗಲೆಗಳನ್ನು ಖರೀದಿಸಿರುವ ಬಗ್ಗೆ ಆಗಾಗ್ಗೆ ವರದಿಯಾಗುತ್ತಿದೆ. ಈ ಮಧ್ಯೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ (Abhishek Bachchan) ಇತ್ತೀಚೆಗೆ ತನ್ನ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಈ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಸುಮಾರು 46 ಕೋಟಿ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಮುಂಬೈನ ಐಷಾರಾಮಿ ಅಪಾರ್ಟ್ಮೆಂಟ್ ಮಾರಿದ ಅಭಿಷೇಕ್ :
ಮನಿ ಕಂಟ್ರೋಲ್ ನ Zapkey.com ಉಲ್ಲೇಖಿಸಿದ ವರದಿಯ ಪ್ರಕಾರ, ಅಭಿಷೇಕ್ ಬಚ್ಚನ್ ಅವರು ಮುಂಬೈಯ ವರ್ಲಿ ಪ್ರದೇಶದಲ್ಲಿರುವ ಐಷಾರಾಮಿ ಒಬೆರಾಯ್ 360 ವೆಸ್ಟ್ ಟವರ್ಸ್ ನ 37 ನೇ ಮಹಡಿಯಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ (Luxurious Apartment) ಹೊಂದಿದ್ದರು. ಇದನ್ನು ಅಭಿಷೇಕ್ ಒಟ್ಟು 45.75 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಗಮನಾರ್ಹವಾಗಿ ಅಕ್ಷಯ್ ಕುಮಾರ್ ಮತ್ತು ಶಾಹಿದ್ ಕಪೂರ್ ಕೂಡ ಈ ಕಟ್ಟಡದಲ್ಲಿ ಅಪಾರ್ಟ್ಮೆಂಟ್ ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ- Sandalwood ಸುದ್ದಿ: ಯೋಗರಾಜ್ ಭಟ್ ‘ಪದವಿ ಪೂರ್ವ’ ಕಾಲೇಜಿಗೆ ಸೋನಲ್ ಮೊಂಥೆರೋ ಅತಿಥಿ..!
ಅಪಾರ್ಟ್ಮೆಂಟ್ ಅನ್ನು 2014 ರಲ್ಲಿ ಖರೀದಿಸಲಾಗಿದೆ:
ಮಾಹಿತಿಯ ಪ್ರಕಾರ, ಅಭಿಷೇಕ್ ಬಚ್ಚನ್ (Abhishek Bachchan) ಅವರ ಈ ಫ್ಲಾಟ್ 7,527 ಚದರ ಅಡಿಗಳಾಗಿದ್ದು, ಅವರು 2014 ರಲ್ಲಿ 41 ಕೋಟಿ ರೂಪಾಯಿಗಳಿಗೆ ಇದನ್ನು ಖರೀದಿಸಿದ್ದಾರೆ. ಅಪಾರ್ಟ್ಮೆಂಟ್ನ ಮಾರಾಟ ಪತ್ರವನ್ನು ಆಗಸ್ಟ್ 10, 2021 ರಂದು ನೋಂದಾಯಿಸಲಾಗಿದೆ. ನಾಲ್ಕು ಕಾರ್ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿರುವ ಈ ಅಪಾರ್ಟ್ಮೆಂಟ್ ಅನ್ನು ಮೊದಲಿಗೆ ಅನುರಾಗ್ ಗೋಯಲ್ ಎಂಬ ವ್ಯಕ್ತಿ ಖರೀದಿಸಿದ್ದರು. ನಂತರ, ಅಭಿಷೇಕ್ ಬಚ್ಚನ್ ಅವರು 2014 ರಲ್ಲಿ ತಮ್ಮ ಹೆಸರಿನಲ್ಲಿ ಈ ಅಪಾರ್ಟ್ಮೆಂಟ್ ಅನ್ನು ತೆಗೆದುಕೊಂಡರು.
ಅಮಿತಾಬ್ ಈ ವರ್ಷ ಆಸ್ತಿ ಖರೀದಿಸಿದ್ದಾರೆ:
ಮತ್ತೊಂದೆಡೆ, Zapkey.com ನ ವರದಿಯ ಪ್ರಕಾರ, ಅಮಿತಾಬ್ ಬಚ್ಚನ್ (Amitabh Bachchan) ಈ ವರ್ಷ ಮೇ ತಿಂಗಳಲ್ಲಿ ಬಿಲ್ಡರ್ ಕ್ರಿಸ್ಟಲ್ ಗ್ರೂಪ್ ಅವರಿಂದ ಮುಂಬೈನಲ್ಲಿ 5,184 ಚದರ ಅಡಿ ಆಸ್ತಿಯನ್ನು 31 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ಅವರು ಡಿಸೆಂಬರ್ 2020 ರಲ್ಲಿ ಆಸ್ತಿಯನ್ನು ಖರೀದಿಸಿದ್ದರು. ಆದರೆ ಅದನ್ನು ಏಪ್ರಿಲ್ 2021 ರಲ್ಲಿ ಮಾತ್ರ ನೋಂದಾಯಿಸಲಾಗಿದೆ. ಅವರು ಮಾರ್ಚ್ 31 ರವರೆಗೆ ಮಹಾರಾಷ್ಟ್ರ ಸರ್ಕಾರದ 2 ಪ್ರತಿಶತ ಸ್ಟ್ಯಾಂಪ್ ಡ್ಯೂಟಿ ವಿನಾಯಿತಿಯ ಲಾಭವನ್ನು ಪಡೆಯುವ ಮೂಲಕ ರೂ. 31 ಕೋಟಿಯ 2% ಅಂದರೆ 62 ಲಕ್ಷ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದರು.
ಇದನ್ನೂ ಓದಿ- Viral Photos : ಬಾಲಿವುಡ್ ನಟಿ ಶ್ರೀದೇವಿ ಮಕ್ಕಳ ವರ್ಕೌಟ್ ಹೇಗಿದೆ ನೋಡಿ..!
ಅಭಿಷೇಕ್ ಅವರ ಕಾರ್ಯಕ್ಷೇತ್ರ:
ಅಭಿಷೇಕ್ ಬಚ್ಚನ್ ಕೊನೆಯದಾಗಿ 'ದಿ ಬಿಗ್ ಬುಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಭಿಷೇಕ್ ಶೀಘ್ರದಲ್ಲೇ ನಿಮ್ರತ್ ಕೌರ್ ಜೊತೆ 'ದುಸ್ವಿ' ಮತ್ತು ಚಿತ್ರಾಂಗದಾ ಸೇನ್ ಜೊತೆ 'ಬಾಬ್ ಬಿಸ್ವಾಸ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ