ಬೆಂಗಳೂರು : ʼಕಾಂತಾರʼ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಹಿಟ್‌ ಆದ ಬೆನ್ನಲ್ಲೆ ರಿಷಬ್‌ ಶೆಟ್ಟಿಗೆ ಯಾವ ಸ್ಟಾರ್‌ಗಿರಿ ನೀಡಬೇಕು ಅಂತ ಫ್ಯಾನ್ಸ್‌ಗಳ ಮಧ್ಯ ಸೋಷಿಯಲ್‌ ಮೀಡಿಯಾದಲ್ಲಿ ವಾರ್‌ ಶುರುವಾಗಿದೆ. ನಟ, ನಿರ್ದೇಶಕರಾಗಿರುವ ರಿಷಬ್‌ ಶೆಟ್ಟಿಗೆ, ಡಿವೈನ್‌ ಸ್ಟಾರ್‌ ಪಟ್ಟ ನೀಡ್ಬೇಕು ಅಂತ ಕೆಲವರು ಹೇಳಿದ್ರೆ ಇನ್ನು ಕೆಲವರು ಕರಾವಳಿ ಸ್ಟಾರ್‌ ಇಲ್ಲವೆ ನ್ಯಾಚುರಲ್‌ ಸ್ಟಾರ್‌ ಅಂತ ಕರಿಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಹಿಟ್‌ ಫಿಲಂ ನೀಡುತ್ತಲೇ ಸಿನಿ ರಂಗದಲ್ಲಿ ಸ್ಟಾರ್‌ ಗಿರಿ ತಾನಾಗಿಯೇ ಬರುತ್ತದೆ. ಸದ್ಯ ದಿ ಡಿವೈನ್‌ ಬ್ಲಾಕ್‌ಬ್ಲಸ್ಟರ್‌ ಕಾಂತಾರ ಸಿನಿಮಾ ನೀಡಿರುವ ರಿಷಬ್‌ ಶೆಟ್ಟಿಯವರ ಸರದಿ. ಈ ತನ್ನ ಅದ್ಭುತ ನಟನೆಯಿಂದ ಥಿಯೇಟರ್‌ಗಳನ್ನೇ ದೇಗುಲವನ್ನಾಗಿಸಿರುವ ರಿಷಬ್‌ಗೆ ಡಿವೈನ್‌ ಸ್ಟಾರ್‌ ಗಿರಿ ನೀಡಿದರೆ ಉತ್ತಮ ಎಂದು ಫ್ಯಾನ್ಸ್‌ ಅಭಿಪ್ರಾಯ. ಆದ್ರೆ ಕರಾವಳಿ ಭಾಗದ ಕೆಲ ಮಂದಿ ಕರಾವಳಿ ಸ್ಟಾರ್‌ ಅಂತ ಕರಿದ್ರೆ ಸೂಪರ್‌ ಎನ್ನುತ್ತಿದ್ದಾರೆ. ಕಾರಣ ಅಲ್ಲಿನ ಸಂಪ್ರದಾಯ ಮತ್ತು ಜೀವನ ಶೈಲಿಯನ್ನು ರಿಷಬ್‌ ಕಾಂತಾರ ಮೂಲಕ ಹೊರ ತಂದಿದ್ದಾರೆ. 


ಇದನ್ನೂ ಓದಿ: ಕಿಂಗ್ ಕೊಹ್ಲಿ ಪಕ್ಕದಲ್ಲಿರುವ ಈ ಸುರ ಸುಂದರಿ ಯಾರು ಗೊತ್ತಾ?


ಇನ್ನು ಇದೆ ವಿಚಾರವಾಗಿ, ಎಲ್ಲಾ ರೀತಿಯ ನಟನೆಯಲ್ಲೂ ರಿಷಬ್‌ ಸೈ ಎನಿಸಿಕೊಂಡಿದ್ದಾರೆ. ಹೀರೋ, ಗರುಡಗಮನ ರುಷಭ ವಾಹನ, ಹರಿಕತೆಯಲ್ಲ ಗಿರಿಕಥೆ, ಬೆಲ್‌ ಬಾಟಂ ಹೀಗಿ ಹಲವಾರು ಸಿನಿಮಾಗಳಲ್ಲಿ ವಿಶಿಷ್ಠ ಪಾತ್ರಗಳ ಮೂಲಕ ಮಿಂಚಿದ್ದಾರೆ. ಹಾಸ್ಯದಲ್ಲೂ ರಿಷಬ್‌ ಬೆಸ್ಟ್‌. ಅದಕ್ಕಾಗಿ, ಅವರಿಗೆ ನ್ಯಾಚುರಲ್‌ ಸ್ಟಾರ್‌ ಪಟ್ಟ ಕೊಡ್ಬೇಕು ಅಂತ ಫ್ಯಾನ್ಸ್‌ ಪೈಪೋಟಿ ನಡೆಸಿದ್ದಾರೆ. ಆದ್ರೆ ಇನ್ನೂ ಯಾವುದು ಕೂಡ ಫಿಕ್ಸ್‌ ಆಗಿಲ್ಲ. ಸದ್ಯ ರಿಷಬ್‌ ಮುಂದಿನ ಸಿನಿಮಾ ತೆರೆಮೇಲೆ ಬಂದಾಗಲೇ ಶೆಟ್ಟರ ಸ್ಟಾರ್‌ ಗಿರಿ ಎಕ್ಸಪೋಸ್‌ ಆಗೋದು, ಅಲ್ಲಿವರೆಗೂ ನೀವು ಕಾಯಲೇಬೇಕು...https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.