Rishab Shetty: ಕಾಂತಾರ ಚಿತ್ರದ ಅಬ್ಬರದ ಬಳಿಕ ರಿಷಬ್‌ ಶೆಟ್ಟಿ ರಾಜಕೀಯ ಪ್ರವೇಶ ಮಾಡ್ತಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ. ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಿನಿತಾರೆಯರು ರಾಜಕೀಯಕ್ಕೆ ಬರುವ ಸುದ್ದಿಗಳ ಹಾವಳಿ ಕೂಡ ಹೆಚ್ಚಾಗಿದೆ. ಇತ್ತೀಚೆಗೆ ಮಾತನಾಡಿದ ರಿಷಬ್‌ ಶೆಟ್ಟಿ ತಮ್ಮ ರಾಜಕೀಯ ಎಂಟ್ರಿ ಕುರಿತು ಸ್ಪಷ್ಟನೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ರಾಜಕೀಯ ಪ್ರವೇಶ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಷಬ್‌ ಶೆಟ್ಟಿ, ರಾಜಕೀಯಕ್ಕೆ ಬಂದೇ ಸಮಾಜದಲ್ಲಿ ಬದಲಾವಣೆ ತರಬೇಕು ಅಂತೇನಿಲ್ಲ. ಸದ್ಯಕ್ಕೆ ನಾನು ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ನಗೆಚಟಾಕಿ ಹಾರಿಸಿದ ಶೆಟ್ರು, ಕೆಲವರು ನನಗೆ ಈಗಾಗಲೇ ಮೂರು ಪಕ್ಷಗಳಿಂದಲೂ ಟಿಕೆಟ್ ಕೊಡಿಸಿದ್ದಾರೆ ಎಂದು ಹೇಳುತ್ತಾ ಜೋರಾಗಿ ನಕ್ಕಿದ್ದಾರೆ. ರಾಜಕೀಯ ಪ್ರವೇಶದ ಆಸೆ ಸದ್ಯಕ್ಕೆ ನನಗೆ ಇಲ್ಲ ಎಂದು ಹೇಳಿದ್ದಾರೆ. 


ಇದನ್ನೂ ಓದಿ : Rakhi Sawant: "ನನ್ನ ಬೆತ್ತಲೆ ವಿಡಿಯೋ ಮಾರಾಟ ಮಾಡಿದ್ದಾನೆ" ರಾಖಿ ಸಾವಂತ್​ ಶಾಕಿಂಗ್​ ಹೇಳಿಕೆ


ಸದ್ಯ ಕಾಂತಾರ 2 ಸಿನಿಮಾದಲ್ಲಿ ನಿರತರಾಗಿರುವ ರಿಷಬ್‌ ಶೆಟ್ಟಿ, ಕುನೆಗೂ ತಮ್ಮ ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾಂತಾರ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆದವರು ರಿಷಬ್‌. ಈ ಸಿನಿಮಾವನ್ನು ಅವರೇ ನಿರ್ದೇಶಿಸಿ, ನಟಿಸಿದ್ದಾರೆ. ಕರಾವಳಿಯ ಸಂಸ್ಕೃತಿ ತುಳುನಾಡ ಜನರ ಆಚರಣೆಗಳ ಬಗ್ಗೆ ತಿಳಿಸುವ ಕಾಂತಾರ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ರಿಷಬ್‌ ಶೆಟ್ಟಿ ಅಭಿನಯವಂತೂ ನೋಡುಗರನ್ನ ಮಂತ್ರಮುಗ್ಧರನ್ನಾಗಿಸುತ್ತದೆ. 


ಇದನ್ನೂ ಓದಿ : ಪಾಕ್‌ ಕ್ರಿಕೆಟಿಗನೊಂದಿಗೆ ತಮನ್ನಾ ಭಾಟಿಯಾ ಸಂಬಂಧ? ಲೀಕ್ ಆಯ್ತು ಹಳೆಯ ಫೋಟೋ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.