Rishab Shetty Before Becoming Star: ಚಂದನವನದ ಈ ಹೆಸರಾಂತ ನಟ ಸಿನಿಮಾರಂಗಕ್ಕೆ ಬರುವ ಮುನ್ನ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು. ಈ ನಟ ತನ್ನ ಕಾಲೇಜು ದಿನಗಳಲ್ಲಿ  ವಿದ್ಯಾಭ್ಯಾಸ ಜೊತೆಗೆ ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ರು. ಹಾಗೆಯೇ ಈ ನಟ ಹೋಟೆಲ್‌ಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇಂದು ಇವರು ಪ್ಯಾನ್‌ ಇಂಡಿಯಾ ಸ್ಟಾರ್.‌ ಈ ನಟ ಬೇರೆ ಯಾರು ಅಲ್ಲ. ಇವರೇ ಸ್ಯಾಂಡಲ್‌ವುಡ್‌ನ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ. ಈ ನಟ ಇಷ್ಟೆಲ್ಲ ಕೆಲಸ ಮಾಡುವುದರ ಜೊತೆಗೆ  ಸಿನಿಮಾದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೂ.


COMMERCIAL BREAK
SCROLL TO CONTINUE READING

ನಟ ರಿಷಬ್‌ ಶೆಟ್ಟಿ ತಾವು 6ನೇ ತರಗತಿಯಲ್ಲಿ ಓದುತ್ತಿರುವಾಗಲೇ ಕಲಾವಿದನಾಗಿ ನನ್ನ ಪಯಣವನ್ನು ಆರಂಭಿಸಿದರು. ತದನಂತಯರ ಚಿತ್ರರಂಗಕ್ಕೆ ಬಂದಾಗ ನಟ ರಿಷಬ್‌ಗೆ ಮೊದಲು ಒಳ್ಳೆಯ ಪಾತ್ರ ಸಿಕ್ಕಿರಲಿಲ್ಲಿ. ಹಾಗಂದ ಮಾತ್ರಕ್ಕೆ ಈ ನಟ ಸುಮ್ಮನೆ ಕೂರದೆ ಸಿನಿಮಾಗಳ ಬಗ್ಗೆ ಕಲಿಯಲು ತೆರೆಮರೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಈ ನಟ ಅನೇಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿ,  2019 ರಲ್ಲಿ ನಾಯಕನಾಗಿ ಹೆಜ್ಜೆ ಇಟ್ಟರು. ನಟ ರಿಷಬ್‌ ಶೆಟ್ಟಿ ಬೆಲ್ ಬಾಟಮ್ ಸಿನಿಮಾ ಮೂಲಕ ಹೀರೋ ಆದರು.


ಇದನ್ನೂ ಓದಿ: ಈ ಖ್ಯಾತ ನಟಿ ಬಳಿ ಅಂದು ಬಾಡಿಗೆ ಕಟ್ಟಲು ದುಡ್ಡಿರಲಿಲ್ಲ, ಇಂದು ಸಿನಿರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ !


ಡಿವೈನ್‌ ಸ್ಟಾರ್‌ ರಿಷಬ್ ಶೆಟ್ಟಿ ಇಂದು ಕನ್ನಡದ ಪ್ರತಿಭಾವಂತ ಕಲಾವಿದ ಮಾತ್ರವಲ್ಲದೇ ಬರಹಗಾರ, ನಿರ್ದೇಶಕ ಹಾಗೂ ನಟರಾಗಿ ಮಿಂಚುತ್ತಿದ್ದಾರೆ. ತಮ್ಮದೇ ಆದ ಶೈಲಿಯ ಸಿನಿಮಾಗಳನ್ನು ಮಾಡುತ್ತಾ ರಿಷಬ್ ಶೆಟ್ಟಿ ಚಂದನವನದಲ್ಲಿ ತನ್ನದೇ ಇತಿಹಾಸ ಬರೆಯುತ್ತಿದ್ದಾರೆ.ಈ ನಟನಿಗೆ ಬಾಲ್ಯದಲ್ಲಿ ಇರುವಾಗಲೇ ಯಕ್ಷಗಾನದ ಬಗ್ಗೆ ಆಸಕ್ತಿ ಇರುವುದರಿಂದ ಬಣ್ಣ ಹಚ್ಚಿ ವೇದಿಕೆ ಮೇಲೆ ಯಕ್ಷಗಾನದ ಪ್ರದರ್ಶನಗಳನ್ನು ಸಹ ನೀಡಿ ಸೈ ಎನಿಸಿಕೊಂಡಿದ್ದಾರೆ. ಚಂದನವನದ ನಟ-ನಿರ್ದೇಶಕ ರಿಷಬ್‌ ಶೆಟ್ಟಿ ನಾಯಕ ನಟರಾಗುವ ಮುಂಚೆ ನಿರ್ದೇಶಕರಾಗಿ ಕಿರಿಕ್‌ ಪಾರ್ಟಿ, ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡ ಚಿತ್ರಗಳಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. 


ರಿಷಬ್‌ ಶೆಟ್ಟಿ ಅಭಿನಯ ಹಾಗೂ ಸಾರಥ್ಯದ ‘ಕಾಂತಾರ’ ಸಿನಿಮಾ ಅದ್ಭುತ ನಟನೆಯಿಂದ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿತು. ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೇ  ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ತರೆಕಂಡು ಅದ್ಬುತ ಯಶಸ್ಸನ್ನು ಗಳಿಸಿತು. ಇಂದು ಈ ನಟ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಸಕ್ಸಸ್‌ ಬಳಿಕ ಹೊಂಬಳೆ ಫಿಲ್ಸ್ಮ್ ಜೊತೆ ರಿಷಬ್ ಶೆಟ್ಟಿ ‘ಕಾಂತಾರ: ದಿ ಲೆಜೆಂಡ್’ ಸಿನಿಮಾ ಮಾಡ್ತಿದ್ದು, ಸದ್ಯ ಇದಕ್ಕಾಗಿ ಇಡೀ ದೇಶವೇ ಕಾಯ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.