ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ಚಿತ್ರಮಂದಿರಗಳಲ್ಲಿ ದೊಡ್ಡಮಟ್ಟದ ಸೂಪರ್ ಹಿಟ್ ಆಗಿತ್ತು. ಕೋಲ, ದೈವ, ಕರಾವಳಿ ಸಂಸ್ಕೃತಿಯನ್ನು ಆಧರಿಸಿ ನಿರ್ಮಿಸಿದ ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಈಗಲೂ ಪ್ರದರ್ಶನ ಕಾಣುತ್ತಿರುವ ‘ಕಾಂತಾರ’ ಸಿನಿಮಾ ಇದೀಗ ಟಿವಿಯಲ್ಲಿ ಪ್ರಸಾರವಾಗಲಿದೆ.


COMMERCIAL BREAK
SCROLL TO CONTINUE READING

ಹೌದು, ಕೇವಲ 18 ಕೋಟಿ ರೂ.ನಲ್ಲಿ ನಿರ್ಮಿಸಿದ ಕನ್ನಡ ಸಿನಿಮಾ ‘ಕಾಂತಾರ’ ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿತ್ತು. ವರದಿಗಳ ಪ್ರಕಾರ ಈ ಸಿನಿಮಾ ಗಳಿಸಿದ್ದು 400 ಕೋಟಿ ರೂ.ಗೂ ಹೆಚ್ಚು. ಥಿಯೇಟರ್ ಮತ್ತು ಒಟಿಟಿಯಲ್ಲಿ ಸೂಪರ್ ಹಿಟ್ ಆದ ‘ಕಾಂತಾರ’ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇದೇ ಜನವರಿ 15ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.  


ಇದನ್ನೂ ಓದಿ: Orchestra Mysore: ಸಂಕ್ರಾಂತಿ ಹಬ್ಬಕ್ಕೆ ಸೌಂಡ್ ಮಾಡಲಿರುವ ಡಾಲಿ ಬಳಗದ ‘ಆರ್ಕೇಸ್ಟ್ರಾ ಮೈಸೂರು’


ಕನ್ನಡದ ಹೆಮ್ಮೆಯ ಸಿನಿಮಾ ‘ಕಾಂತಾರ’ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ''ನಾಡಿಗೆ ನಾಡೇ ಭಕ್ತಿಯಿಂದ ಕೈಮುಗಿದು ಎದೆಗೊತ್ತಿಕೊಂಡ ಕನ್ನಡದ ಹೆಮ್ಮೆಯ ಕಳಶ "ಕಾಂತಾರ". ನಿಮ್ಮ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ'' ಎಂದು ಸುವರ್ಣ ವಾಹಿನಿಯು ತನ್ನ ಫೇಸ್‌ಬುಕ್‌ ಪುಟದಲ್ಲಿ 'ಕಾಂತಾರ'ದ ವಿಡಿಯೋದೊಂದಿಗೆ ಪ್ರಕಟಿಸಿದೆ. ಸಂಕ್ರಾಂತಿ ಹಬ್ಬದ ವಿಶೇಷ ಸಂದರ್ಭದಲ್ಲಿ 'ಕಾಂತಾರ'ವನ್ನು ಸ್ಟಾರ್ ಸುವರ್ಣ ವಾಹಿನಿ ಪ್ರಸಾರ ಮಾಡುತ್ತಿದೆ.


ಗೋಲ್ಡನ್ ಸ್ಟಾರ್ ಗಣೇಶ್ ‘ಬಾನ ದಾರಿಯಲ್ಲಿ’ ಬಂತು ಇಂಪಾದ ಹಾಡು..


ಈ ಸಿನಿಮಾವನ್ನು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್‌ನವರು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ರಿಷಬ್ ಜೊತೆಗೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಇನ್ನೂ ಮುಂತಾದವರು ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.