Ram Chandra Raju : ಒಂದು ಕಾಲದಲ್ಲಿ `ಯಶ್ ಬಾಡಿಗಾರ್ಡ್` ಆಗಿದ್ದ ಕೆಜಿಎಫ್ ವಿಲನ್ ಗರುಡ!
ಈ ಚಿತ್ರದ ಮೆನ್ ವಿಲನ್ ಗರುಡ ಅಲಿಯಾಸ್ ರಾಮ್ ಚಂದ್ರ ರಾಜು ತನ್ನ ಭಯಂಕರ ನೋಟದಿಂದಲೆ ಎಲ್ಲರ ಹೃದಯವನ್ನು ಗೆದ್ದನು. ಆದರೆ ಗರುಡ ಪಾತ್ರದಲ್ಲಿ ನಟಿಸಿದ್ದ ರಾಜು ನಿಜ ಜೀವನದಲ್ಲಿ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದರೆ ನಂಬುತ್ತೀರಾ? ಹೌದು ನಂಬಲೇಬೇಕು! ಯಾಕೆ ಈ ಕೆಳೆಗೆ ಓದಿ..
ಬೆಂಗಳೂರು : ಕನ್ನಡದ ಸೂಪರ್ ಸಿನಿಮಾ ಹಿಟ್‌ಗಳ ಮಾತು ಬಂದಾಗಲೆಲ್ಲ ಕೆಜಿಎಫ್ ಹೆಸರು ಕೇಳಿ ಬರುವುದು ಖಂಡಿತ. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್(Rocking star yash) ರಾಕಿ ಭಾಯ್ ಪಾತ್ರದಲ್ಲಿ ನಟಿಸುವ ಮೂಲಕ ಹಲವು ಸಿನಿ ಇಂಡಸ್ಟ್ರಿಯಲ್ಲಿ ದೂಳೆಬ್ಬಿಸಿದರು. ಆದರೆ ಈ ಚಿತ್ರದಲ್ಲಿ ಯಶ್ ಬಿಟ್ಟರೆ ಹೆಚ್ಚು ಸುದ್ದಿ ಮಾಡಿದ್ದು ಈ ಸಿನಿಮಾದ ವಿಲನ್ ಪಾತ್ರದಾರಿಗಳು. ಈ ಚಿತ್ರದ ಮೆನ್ ವಿಲನ್ ಗರುಡ ಅಲಿಯಾಸ್ ರಾಮ್ ಚಂದ್ರ ರಾಜು ತನ್ನ ಭಯಂಕರ ನೋಟದಿಂದಲೆ ಎಲ್ಲರ ಹೃದಯವನ್ನು ಗೆದ್ದನು. ಆದರೆ ಗರುಡ ಪಾತ್ರದಲ್ಲಿ ನಟಿಸಿದ್ದ ರಾಜು ನಿಜ ಜೀವನದಲ್ಲಿ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದರೆ ನಂಬುತ್ತೀರಾ? ಹೌದು ನಂಬಲೇಬೇಕು! ಯಾಕೆ ಈ ಕೆಳೆಗೆ ಓದಿ..
ಕೆಜಿಎಫ್ ವಿಲನ್ ಗರುಡ ಅಲಿಯಾಸ್ ರಾಮ್ ಚಂದ್ರ ರಾಜು
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್-2' (KGF Chapter 2) ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಸಿನಿಮಾದ ಬಗ್ಗೆ ಮೊದಲಿನಿಂದಲೂ ಸಾಕಷ್ಟು ನಿರೀಕ್ಷಗಳಿವೆ, ಸಿನಿಮಾದ ಮೊದಲ ಭಾಗದಲ್ಲಿ ವಿಲನ್ ಆಗಿದ್ದ ಗರುಡನನ್ನು ಈಗ ಎಲ್ಲರ ಮನದಲ್ಲೂ ಅಚ್ಚಳಿಯದ ಹಾಗೆ ಉಳಿದಿದ್ದಾನೆ. ಗರುಡ ಅಲಿಯಾಸ್ ರಾಮಚಂದ್ರರಾಜು ಅವರು 2018 ರಲ್ಲಿ 'ಕೆಜಿಎಫ್ ಚಾಪ್ಟರ್-1' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು.
ಇದನ್ನೂ ಓದಿ : ಒಂದಾಗ್ತಾರಾ ಸುದೀಪ್, ಯಶ್, ದರ್ಶನ್..? 'ಕೆಜಿಎಫ್-2' & 'ವಿಕ್ರಾಂತ್ ರೋಣ' ಒಟ್ಟಿಗೆ ರಿಲೀಸ್..?
ಮೊದಲ ಸಿನಿಮಾದಲ್ಲೇ ಸಖತ್ ಅಭಿನಯ
ರಾಮ್ ಚಂದ್ರು(Ram Chandra Raju) ನಟನಾ ಜಗತ್ತಿಗೆ ಬರುವ ಮೊದಲು ಬಾಡಿಗಾರ್ಡ್(Bodyguard) ಕೆಲಸ ಮಾಡುತ್ತಿದ್ದರು ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ರಾಮ್ ಚಂದ್ರರಾಜು ಅವರ ಮೊದಲ ಸಿನಿಮಾದಲ್ಲೇ ಯಶಸ್ವಿ ವಿಲನ್, ಈ ಸಿನಿಮಾಗೆ ಬರುವ ಮೊದಲು ಅಂದರೆ ಯಶ್ ಅವರಿಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಸಿನಿಮಾದಲ್ಲಿ ರಾಮಚಂದ್ರ ಅವರ ಅಭಿನಯ ನೋಡಿ ಇದು ಅವರ ಮೊದಲ ಸಿನಿಮಾ ಎಂದರೆ ಯಾರು ನಂಬುವುದಿಲ್ಲ, ಚಿತ್ರಲೋಕಕ್ಕೂ ಅವರಿಗೂ ಸಂಬಂಧವಿಲ್ಲ. ಅವರ ಅಭಿನಯ ಎಷ್ಟು ಗಟ್ಟಿಯಾಗಿತ್ತು ಎಂದರೆ ಜನಗಳ ಮನದಲ್ಲಿ ಅಚ್ಚಳಿಯದ ಹಾಗೆ ಉಳಿದು ಬಿಟ್ಟಿದ್ದಾರೆ.
ಯಶ್ ಜೊತೆಗೆ ರಾಜು ಕೂಡ ಆಯ್ಕೆಯಾಗಿದ್ದರು!
ರಾಮ್ ಚಂದ್ರರಾಜು ಅವರು ನಟನಾಗುತ್ತೇನೆ ಎಂದು ಕನಸು ಕಂಡವರಲ್ಲ, ಆದರೆ ವಾಸ್ತವವು ಕೆಲವೊಮ್ಮೆ ಕನಸುಗಳಿಗಿಂತ ಹೆಚ್ಚು ಸುಂದರವಾಗಿರುತ್ತದೆ. ಚಿತ್ರರಂಗಕ್ಕೆ ಬರುವುದು ಕೂಡ ಅವರಿಗೆ ಕಾಕತಾಳೀಯವಾಗಿತ್ತು. ವಾಸ್ತವವಾಗಿ ಕೆಜಿಎಫ್ ಚಿತ್ರದ ಬರಹಗಾರರು ಸ್ಕ್ರಿಪ್ಟ್ ಬಗ್ಗೆ ಚರ್ಚಿಸಲು ಯಶ್(Rocking star Yash) ಬಳಿ ಬಂದಿದ್ದರು. ಇಲ್ಲಿ ಅವರು ರಾಮಚಂದ್ರನನ್ನು ನೋಡಿ ಇವರು ಗರುಡನ ಪಾತ್ರಕ್ಕೆ ಹೊಂದಿಕೊಳ್ಳುತ್ತಾನೆ ಎಂದು ಒಮ್ಮೆ ಆಡಿಷನ್ ಗೆ ಬರಲು ಕೇಳಿದರು ಮತ್ತು ನಂತರ ಅವರ ಪಾತ್ರವನ್ನು ಖಚಿತಪಡಿಸಲಾಯಿತು.
ಇದನ್ನೂ ಓದಿ : Katrina Kaif: ಅತ್ತೆಯೊಂದಿಗೆ ನಟಿ ಕತ್ರಿನಾ ಕೈಫ್ ಬಾಂಧವ್ಯ ಹೇಗಿದೆ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.