ನಿವೇದಿತಾ ಜೈನ್.. ಈ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರು ಹೇಳೋದು ಒಂದೇ "ಛೇ ಆಕೆ ಸಾಯಬಾರದಿತ್ತು".. ಆಕೆಗೆ ಏನಾಗಿತ್ತು..? ಇದು ಆತ್ಮಹತ್ಯೆಯೋ ಅಥವಾ ಇನ್ನೇನೋ..? ಇವತ್ತಿಗೂ ಇದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಹಾಗಾದ್ರೆ ಈಕೆಯ ಸಾವಿನ ಸುತ್ತ ಹುಟ್ಟಿಕೊಂಡಿರೋ ಒಂದಷ್ಟು ವಿಚಾರದ ಇನಸೈಡ್ ಸ್ಟೋರಿ (Inside Story) ಇಲ್ಲಿದೆ.
ಇದನ್ನೂ ಓದಿ: Women's day special: ಬಾಲಿವುಡ್ ತಾರೆಯಾಗಲು ಬಂದವಳು ಮಾಫಿಯಾ ಕ್ವೀನ್ ಆದ ನೈಜ ಕಹಾನಿ
ಸೂತ್ರಧಾರ, ಪ್ರೇಮ ರಾಗ ಹಾಡು ಗೆಳತಿ, ಬಾಳಿನ ದಾರಿ, ಬಾಳಿದ ಮನೆ, ಅಮೃತವರ್ಷಿಣಿ, ನೀ ಮುಡಿದಾ ಮಲ್ಲಿಗೆ.. ಈ ಸಿನಿಮಾಗಳನ್ನ ಯಾರು ನೋಡಿಲ್ಲ ಹೇಳಿ. ಪ್ರತಿಯೊಬ್ಬ ಸಿನಿ ಪ್ರೇಮಿ ಇದನ್ನ ನೋಡಿಯೇ ಇರ್ತಾನೆ. ಸಿನಿಮಾದಲ್ಲಿರೋ ಮುದ್ದಾದ ನಟಿ ನಿವೇದಿತಾ ಜೈನ್ ನ (Nivedita Jain) ಮರೆಯೋದಕ್ಕೆ ಹೇಗೆ ಸಾಧ್ಯ ಹೇಳಿ.
17 ಮೇ 1979ರಂದು ಜನಿಸಿದ ನಿವೇದಿತಾ ಜೈನ್ ಮಾಡೆಲಿಂಗ್‍ನಿಂದ (Modeling) ಚಿತ್ರರಂಗಕ್ಕೆ ಪ್ರವೇಶ ಪಡೆದ ಬೆಂಗಳೂರಿನ ಹುಡುಗಿ. 1996 ರಲ್ಲಿ ಶಿವಮಣಿ ನಿರ್ದೇಶನದ, ಶಿವರಾಜ್‍ಕುಮಾರ್ (Shivarajkumar) ನಾಯಕತ್ವದ "ಶಿವಸೈನ್ಯ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಿವೇದಿತಾ ಅಂದಿನ ಪಡ್ಡೆ ಹೈಕಳ ನಿದ್ದೆ ಕದ್ದಾಕೆ. ಅಷ್ಟೇ ಅಲ್ಲ ಆ ಕಾಲದಲ್ಲೇ ಮಿಸ್ ಬೆಂಗಳೂರು ಪಟ್ಟ ಪಡೆದ ಅದ್ಭುತ ನಟಿ . ಶಿವಸೈನ್ಯ ನಂತರ ಬಣ್ಣದ ಜಗತ್ತಿನಲ್ಲಿ ಸಾಕಷ್ಟು ಅವಕಾಶಗಳು ಹುಡುಕಿ ಬಂದವು. ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾ ಕನ್ನಡವಷ್ಟೇ ಅಲ್ಲದೇ ಪರಭಾಷೆಯಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಪ್ರಾರಂಭಿಸಿದರು .
ನಟಿ ನಿವೇದಿತಾ ಜೈನ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಹಾಗೂ ದೊಡ್ಡ ಮಟ್ಟದ ಭರವಸೆ ಮೂಡಿಸಿದ್ದ ನಟಿ. ಕೇವಲ 17 ವರ್ಷಕ್ಕೆ ನಟನಾ ವೃತ್ತಿಗೆ ಬಂದ ನಿವೇದಿತ ಸಿನಿಮಾ ರಂಗದಲ್ಲಿ ಇದ್ದಿದ್ದು ಎರಡೇ ವರ್ಷವಾದರು ನೆನಪುಳಿವ ಸಿನಿಮಾಗಳಲ್ಲಿ ನಟಿಸಿದರು.
ಹತ್ತನ್ನೆರಡು ಚಿತ್ರಗಳಲ್ಲಿ ಅಭಿನಯಿಸಿದ್ದ ನಿವೇದಿತಾ ಮಿಸ್ಟರ್ ಪುಟ್ಟಸ್ವಾಮಿ ಮತ್ತು ಸ್ಕೆಚ್ ಅನ್ನೋ ಪ್ರಾಜೆಕ್ಟ್ ಗಳಿಗೆ ಒಪ್ಪಿಕೊಂಡಿದ್ದರು. ಆದ್ರೆ ಆಮೇಲೆ ಆಗಿದ್ದೇ ಉಲ್ಟಾ. ಸಾಲು ಸಾಲು ಸಿನಿಮಾಗಳು ಇವರನ್ನ ಹುಡುಕಿ ಬಂದವು. ಇವೆಲ್ಲಾವನ್ನೂ ಮಾಡಲು ನಟಿ ನಿವೇದಿತಾ ಜೈನ್ ಕೂಡ ರೆಡುಯಿದ್ದರು.ನಿಮಗೆ ಗೊತ್ತಾ ನಿವೇದಿತಾ ಜೈನ್ ಆಗ ಎಸ್ಟು ಟಾಪ್ಗೆ ಏರಿದ್ದರೂ ಅಂದ್ರೆ ಇವರ ಹೆಸ್ರು ಎಲ್ಲಾ ಸ್ಟಾರ್ ನಟರು ಮತ್ತು ಅಂದಿನ ರಾಜಕಾರಣಿಗಳ ಜೊತೆಯೂ ತಳುಕು ಹಾಕಿಕೊಂಡಿತ್ತು.
ಆದ್ರೆ ನಿವೇದಿತಾ ಜೈನ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾವಾಯಿತು ತಮ್ಮ ಸಿನಿಮಾ ಆಯಿತು ಅನ್ನೋ ಥರಾನೇ ಇದ್ರು. ಆಗಿನ ಮುಖ್ಯಮಂತ್ರಿಗಳ ಜೊತೆಯೂ ನಿವೇದಿತಾ ಜೈನ್ ಹೆಸ್ರು ಸೇರಿಕೊಂಡು ಪ್ರತಿಯೊಬ್ಬರ ಬಾಯಿಗೂ ಆಹಾರವಾಗಿತ್ತು. ಹಾಗಾದ್ರೆ ಆಗ ಯಾರು ಮುಖ್ಯಂಂತ್ರಿಗಳು ಅನ್ನೋದನ್ನ ನೀವೇ ಲೆಕ್ಕಚಾರ ಮಾಡಬಹುದು.
ನಿವೇದಿತಾ ಜೈನ್ ಸಾವಿನ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿಗಳ ಹೆಸರೂ ಸಹ ಕೇಳಿಬಂತು. ನಿವೇದಿತಾ ಜೈನ್ ಮಹಡಿಯಿಂದ ಬಿದ್ದ ದಿನ ಐಶಾರಾಮಿ ಬಿಳಿ ಕಾರೊಂದು ವೇಗವಾಗಿ ನಿವೇದಿತಾ ಮನೆ ಮುಂದಿನಿಂದ ಹೋಯಿತು. ಅದು ಆಗಿನ ಸಿಎಂ ಅವರಿಗೆ ಸೇರಿದ್ದ ಕಾರು ಎಂದು ಗಾಳಿ ಸುದ್ದಿ ಹರಿದಾಡಿತು. ಇದು ಈಗ ಗಾಳಿ ಸುದ್ದಿಯಾಗಿಯೇ ಉಳಿದಿದೆ.
ಇಷ್ಟೆಲ್ಲಾ ಇದ್ರೂ ನಿವೇದಿತಾ ಜೈನ್ ಯಾಕೆ ದುಡುಕಿನ ನಿರ್ಧಾರ ತೆಗೆದುಕೊಂಡರು ಅನ್ನೋ ಚರ್ಚೆ ಇಂದಿಗೂ ನಡೆಯುತ್ತಿದೆ. ಇಂದಿಗೂ ಛೇ ನೀವೇದಿತಾ ಜೈನ್ ಇರಬೇಕಿತ್ತು. ಹೀಗಾಗಬಾರದಿತ್ತು.ಮಿಸ್ ಇಂಡಿಯಾ ಸ್ಪರ್ಧೆಗೆ ಪ್ರಿಪೇರ್ ಮಾಡಿಕೊಳ್ಳುವಾಗಲೇ ತಮ್ಮ ಮನೆಯ ಮೂರನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ನಿವೇದಿತಾ ಜೈನ್ ಸಾವನ್ನಪ್ಪಿದರು ಅನ್ನೋ ಮಾತು ಈಗಲೂ ಚಾಲ್ತಿಯಲ್ಲಿವೆ. ಆದ್ರೆ ಇದು ಸುಸೈಡ್ ಅಲ್ಲ ಬೇರೇನೇ ಇದೆ ಅನ್ನೋ ವಾದ ಕೂಡ ಇದ್ದೇ ಇದೆ. ಮೇ 17, 1998 ರಂದು ಅದೇ ಮನೆಯ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ನಿವೇದಿತಾ ಜೈನ್ ಅನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ 24 ದಿನಗಳ ಕಾಲ ಬೆಂಗಳೂರಿನ ಮಲ್ಯ ಆಸ್ಪತ್ರೆಯ ಐಸಿಯು ಬೆಡ್‌ನಲ್ಲಿ ಕೋಮಾದಲ್ಲಿದ್ದರು.
ಆಸ್ಪತ್ರೆ ಕಡೆಯಿಂದ ಪ್ರತಿನಿತ್ಯವೂ ವಿವೇದಿತಾ ಸುಧಾರಿಸಿಕೊಳ್ಳುತ್ತಿದ್ದಾರೆ ಅನ್ನೋ ಸಂದೇಶ ಬರುತ್ತಲೇ ಇತ್ತು.ಅಭಿಮಾನಿಗಳು ಕೂಡ ಬಿಡು ಆರೋಗ್ಯವಾಗಿಯೇ ಬರುತ್ತಾರೆ. ಮತ್ತೇ ಸಿನಿಮಾಗಳಲ್ಲಿ ತೊಡಗಿಸಿಕೊಂಡು ಒಳ್ಳೋಳ್ಳೆ ಸಿನಿಮಾಗಳನ್ನ ಕೊಡುತ್ತಾರೆಂದೇ ನಂಬಲಾಗಿತ್ತು. ಆದ್ರೆ ದೈವಿಚ್ಚೆಯೇ ಬೇರೆಯಾಗಿತ್ತು. ನಟಿ ನಿವೇದಿತಾ ಜೈನ್ ಇನ್ನಿಲ್ಲ ಅನ್ನೋ ಸುದ್ದಿ ಅಭಿಮಾನಿಗಳಿಗೂ ನುಂಗಲಾರದ ತುತ್ತಾಗಿಯೇ ಉಳಿದಿದೆ.ಜೂನ್ 10 ೧೯೯೮ ರಂದು ನಿವೇಋದಿತಾ ಇನ್ನು ನೆನಪು ಮಾತ್ರ ಅನ್ನೋದನ್ನ ಅನೌನ್ಸ್ ಮಾಡಿಯೇಬಿಟ್ಟರು.. ಸುಂದರ ಮುಖದ ನಿವೇದಿತ ಸಾಯುವ ವೇಳೆಗೆ ಮುಖ ವಿಕಾರಗೊಂಡು ಕೈ, ಕಾಲುಗಳು ಮುರಿದುಕೊಂಡು ಯಮಯಾತನೆ ಅನುಭವಿಸಿದ್ದರು.
ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್ ಅಭಿನಯದ ಕೊನೆಯ ಸಿನಿಮಾಗೆ ಕೋಟಿ ಕೋಟಿ ಆಫರ್..!
ನಿವೇದಿತಾ ಸಾಯುವ ಮುನ್ನ ದಿನವೂ ಅವರು ಗುಣಮುಖರಾಗುತ್ತಾರೆ ಅಂತನೇ ಕುಟುಂಬದವರು ಹೇಳಿದ್ದರು. ಆದರೆ ಅದಾದ ಮಾರನೇ ದಿನವೇ ನಿವೇದಿತ ಮೃತರಾದರು ಅನ್ನೋ ಸುದ್ದಿ ಅನುಮಾನಕ್ಕೆ ಕಾರಣ ಮಾಡಿಕೊಟ್ಟಿದೆ. ಆದರೆ ಅವರ ಸಾವಿನ ಸುತ್ತ ಎದ್ದಿದ್ದ ಅನುಮಾನಗಳ ಹುತ್ತ ಇಂದಿಗೂ ಕರಗಿಲ್ಲ. ಈಗಲೂ ಕನ್ನಡದ ನಟಿಯರ ಅಕಾಲಿಕ ಸಾವಿನ ವಿಷಯಗಳು ಚರ್ಚೆಗೆ ಬಂದಾಗ ನಿವೇದಿತಾ ಸಾವು ಚರ್ಚೆ ಆಗದೇ ಇರುವುದಿಲ್ಲ.
ನಿವೇದಿತಾ ಆತ್ಮಹತ್ಯೆ ಮಾಡಿಕೊಂಡರು ಎಂದೇ ಇಂದಿಗೂ ಹಲವಾರು ಮಂದಿ ನಂಬಿದ್ದಾರೆ. ಧಾರವಾಹಿಯ ನಿರಮಾಪಕರೊಬ್ಬರು ಈ ಘಟನೆಯಾಗೋ ಒಂದಷ್ಟು ದಿನಗಳ ಹಿಂದೆ ನಿವೇದಿತಾರನ್ನ ಅವರ ಮನೆಯಲ್ಲಿ ಮೀಟ್ ಮಾಡಲು ಹೋದಾಗಲೂ ಅವರ ಮುಖದಲ್ಲಿ ಸಂತಸ ಇರದೆ ಇದ್ದದ್ದನ್ನ ಗಮನಿಸಿದ್ದರಂತೆ. ಇಷ್ಟೆಲ್ಲಾ ಐಶಾರಾಮಿ ಜೀವನ ಸಾಗಿಸುತ್ತಿದ್ದ ನಟಿ ನಿವೇದಿತಾ ಜೈನ್‌ಗೆ ಹಾಗಾದ್ರೆ ಏನಾಗಿತ್ತು.? ಆಕೆಗೆ ಯಾರಾದ್ರೂ ಮಾನಸಿಕವಾಗಿ ಕಿರುಕುಳ ನೀಡಿದ್ದರೇ..? ಅಥವಾ ಪ್ರೀತಿಪ್ರೇಮ ಅಂತ ಮೋಸ ಹೋಗಿದ್ದರೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು ಹೇಗೆ ಅನ್ನೋದೆ ಯಕ್ಷ ಪ್ರಶ್ನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.