Yash Father : ಆ ಘಟನೆ ನಡೆದಾಗ ಯಶ್ ತಂದೆ ಗಳಗಳನೆ ಅತ್ತುಬಿಟ್ರಂತೆ!
ಯಶ್‌ಗೆ ಈ ಯಶಸ್ಸು ಅನ್ನೋದು ಅಷ್ಟೊಂದು ಸುಲಭವಾಗಿ ಸಿಕ್ಕಿಲ್ಲ. ಬದಲಾಗಿ ತಾವು ನಡೆದು ಬಂದ ಹಾದಿ ತುಂಬಾ ಕಠಿಣವಾಗಿತ್ತು ಅನ್ನೋದನ್ನ ಸಾಕಷ್ಟು ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು : ಆ ಘಟನೆ ನಡೆದಾಗ ರಾಕಿಂಗ್ ಸ್ಟಾರ್ ಯಶ್ ಅವರ ತಂದೆ ಮೂರು ದಿನ ಊಟ ಮಾಡಿಲ್ವಂತೆ. ಅವರನ್ನ ನೆನೆದು ಯಶ್ ತಂದೆ ಗಳಗಳನೆ ಅತ್ತಿದ್ದಾರೆ. ಯಾರನ್ನು ನೆನೆದರು, ಯಾಕೆ ಅತ್ತರು ಅನ್ನೋ ಮಾಹಿತಿ ಕೊಡ್ತೀವಿ ಮುಂದೆ ಓದಿ.
ರಾಕಿಂಗ್ ಸ್ಟಾರ್ ಯಶ್(Rocking Star Yash) ಅಂದ್ರೆ ಸಾಕು ಹುಚ್ಚೆದ್ದು ಕುಣಿಯೋ ಫ್ಯಾನ್ಸ್ ಇದ್ದಾರೆ. ಜೀವಕ್ಕೆ ಜೀವ ಬೇಕಾದ್ರೂ ಕೊಡ್ತೀವಿ ಅನ್ನೋ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ರಾಕಿ ಭಾಯ್. ಯಶ್‌ಗೆ ಈ ಯಶಸ್ಸು ಅನ್ನೋದು ಅಷ್ಟೊಂದು ಸುಲಭವಾಗಿ ಸಿಕ್ಕಿಲ್ಲ. ಬದಲಾಗಿ ತಾವು ನಡೆದು ಬಂದ ಹಾದಿ ತುಂಬಾ ಕಠಿಣವಾಗಿತ್ತು ಅನ್ನೋದನ್ನ ಸಾಕಷ್ಟು ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಶೀಘ್ರದಲ್ಲೇ ಚಿರಂಜೀವಿ ಸರ್ಜಾ ಅಭಿನಯದ "ರಾಜಮಾರ್ತಾಂಡ" ಚಿತ್ರ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತದಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. 1986 ಜನವರಿ 8ರಂದು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಯ ಮಗನಾಗಿ ಯಶ್ ಜನಿಸಿದರು. ಇವರ ಬಾಲ್ಯದ ಹೆಸರು ನವೀನ್ ಕುಮಾರ್ ಗೌಡ. ಇವರ ತಂದೆ ಬೆಂಗಳೂರು `ಬಿ.ಎಂ.ಟಿ.ಸಿ'ಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಈ ಚಿತ್ರದಲ್ಲಿನ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದರು. ತಾವು ಮೊದಲ ಬಾರಿ ನಾಯಕನಾಗಿ ನಟಿಸಿದ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದು ರಾಧಿಕಾ ಪಂಡಿತ್(Radhika Pandit). 2011ರಲ್ಲಿ ತೆರೆಗೆ ಬಂದ 'ಕಿರಾತಕ' ಚಿತ್ರ ಯಶ್‌ಗೆ ಬಿಗ್ ಬ್ರೇಕ್ ನೀಡಿತು. ಲಕ್ಕಿ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜಕೇಸರಿ ಚಿತ್ರಗಳು ಸಖತ್ ಆಗೇ ಮಿಂಚಿವೆ.
2014ರಲ್ಲಿ ತೆರೆಗೆ ಬಂದ 'Mr & Mrs ರಾಮಾಚಾರಿ' ಬಾಕ್ಸ್ ಆಫೀಸ್‌ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ಬರೆಯಿತು. ಕೆಜಿಎಫ್ ಭಾಗ ಒಂದು ಮಾಡೋದ್ರ ಮೂಲಕ ತಮ್ಮ ಖದರನ್ನೇ ಬದಲಿಸಿಕೊಂಡ್ರು ನಟ ಯಶ್. ಕೇವಲ ಸ್ಯಾಂಡಲ್‌ವುಡನಲ್ಲಿ ಮಿಂಚಿದ್ದ ಯಶ್, ನ್ಯಾಷನಲ್ ಸ್ಟಾರ್ ಆಗುವ ಮೂಲಕ ಇಡೀ ವಿಶ್ವವೇ ಹೋಗಳೋ ರೇಂಜ್‌ನಲ್ಲಿ ಹವಾ ಎಬ್ಬಿಸಿದ್ದಾರೆ.
ಈಗ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದು, ಪ್ರಚಾರ ಕಾರ್ಯದಲ್ಲಿ ಸಿನಿತಂಡ ಬ್ಯೂಸಿಯಾಗಿದೆ. ಈ ಸಿನಿಮಾ ರಿಲೀಸ್‌ಗೂ ಮದಲೇ ಕೋಟಿ ಕೋಟಿ ಹಣ ತನ್ನದಾಗಿಸಿಕೊಂಡು ಭಾರೀ ಸದ್ದು ಮಾಡುತ್ತಿದೆ.
ಯಶ್ ಅವರ ತಂದೆ ಅರುಣ್ ಕುಮಾರ್, ಬಿಎಂಟಿಸಿ(BMTC) ಬಸ್ ಚಾಲಕರಾಗಿ ಕೆಲಸ ಮಾಡಿದವರು. ಈವರು ಮೂಲತಃ ಮೈಸೂರಿನವರು. ತಾಯಿ ಹಾಸನದವರು. ಬದುಕು ಕಟ್ಟಿಕೊಳ್ಳಲು ಯಶ್ ತಂದೆ-ತಾಯಿ ಕಠಿಣಾದ ಪರಿಸ್ಥಿತಿಗಳನ್ನೇ ಎದುರಿಸಿದ್ದಾರೆ. ತಮ್ಮ ಮಕ್ಕಳ ಬದುಕು ಸದಾ ಹಸಿರಾಗಬೇಕೆಂದು ಬಡತನದ ನಡುವೆಯೂ ಕುಂದುಕೊರತೆಗಳಿಲ್ಲದೆ ಮಕ್ಕಳನ್ನ ರಾಜರಾಣಿಯಂತೆ ಬೆಳೆಸಿದ್ದೇವೆ ಎಂದು ಸ್ವತಃ ಯಶ್ ತಂದೆ ಮತ್ತು ತಾಯಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರಂತೆ.
ಇದನ್ನೂ ಓದಿ : "ದುಡ್ಡು ಹಾಳಾದ್ರೆ ಹೇಗೋ ಸಂಪಾದಿಸಬಹುದು, ಆದರೆ ವ್ಯಕ್ತಿತ್ವವನ್ನು ಹೇಗೆ ಸಂಪಾದಿಸೋದು?" ಅದಿತಿ ಹೀಗೆ ಹೇಳಿದ್ದೇಕೆ?
ಯಶ್ ಬಾಲ್ಯದಲ್ಲಿರುವಾಗ ಮೈಸೂರಿನಲ್ಲಿ ಯಶ್ ಕುಟುಂಬವಿದ್ದ ಆ ಸಣ್ಣ ಬಾಡಿಗೆ ಮನೆಯಲ್ಲಿ ಚೇಳುಗಳ ಕಾಟವಿತ್ತು. ಅಂತಹ ಪರಿಸ್ಥಿತಿಯಲ್ಲಿ ನಾವು ಮಕ್ಕಳಿಗಾಗಿ ಸರ್ವವನ್ನೂ ತ್ಯಾಗ ಮಾಡಿದ್ದೇವೆ ಅಂತ ಯಶ್ ತಾಯಿ ತಮ್ಮ ಹಿಂದಿನ ಜೀವನದ ಬಗ್ಗೆ ಹೇಳಿಕೊಂಡು ಸಂದರ್ಶನವೊಂದರಲ್ಲಿ ಕಣ್ಣೀರು ಹಾಕಿದ್ದಾರೆ.
ಪುನೀತ್(Puneeth Rajkumar) ಅಂದ್ರೆ ನಮಗೆ ಮಗುವಿನಂತೆ. ನನ್ನ ಮಗ ಸಿನಿಮಾಗೆ ಎಂಟ್ರಿ ಕೊಡೋ ಮೊದಲೇ ನಾವು ಅಣ್ಣಾವ್ರು ಮತ್ತು ಪುನೀತ್ ಸಿನಿಮಾಗಳನ್ನ ನೋಡಿಕೊಂಡೇ ಬಂದವರು. ಪುನೀತ್ ಇನ್ನಿಲ್ಲ ಅನ್ನೋ ಸುದ್ದಿ ಕೇಳಿ ಯಶ್ ತಂದೆ ಅರುಣ್ ಕುಮಾರ್ ಮೂರು ದಿನ ಊಟ ಮಾಡಿಲ್ಲವಂತೆ. ಈ ವಿಚಾರವನ್ನು ತಾವೇ ಸಂದರ್ಶನವೊಂದರಲ್ಲಿ ಹೇಳಿಕೊಂಡು ಯಶ್ ತಂದೆ ಮತ್ತು ತಾಯಿ ಗಳಗಳನೇ ಅತ್ತುಬಿಟ್ಟಿದ್ದಾರೆ. ಪುನೀತ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ನಿಷ್ಕಲ್ಮಶವಾಗಿ ಪ್ರಾಣಕ್ಕೆ ಪ್ರಾಣ ಕೊಡಲು ಸಿದ್ಧ ಅಂದ್ರೆ ಅದು ಪುನೀತ್‌ಗೆ ಮಾತ್ರ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.