ಶೀಘ್ರದಲ್ಲೇ ಚಿರಂಜೀವಿ ಸರ್ಜಾ ಅಭಿನಯದ "ರಾಜಮಾರ್ತಾಂಡ" ಚಿತ್ರ ಬಿಡುಗಡೆ

ಬಹುಬೇಗ ನಮ್ಮನೆಲ್ಲಾ ಅಗಲಿದ ನಟ ಚಿರಂಜೀವಿ ಸರ್ಜಾ ಅಭಿನಯದ "ರಾಜಮಾರ್ತಾಂಡ" ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

Written by - Zee Kannada News Desk | Last Updated : Apr 6, 2022, 05:33 PM IST
  • ಚಿರಂಜೀವಿ ಸರ್ಜಾ (Chiranjeevi sarja) ಅವರ ಸಾವಿನ ಮುಂಚೆಯೇ ಚಿತ್ರೀಕರಣ ಪೂರ್ತಿಯಾಗಿತ್ತು.
  • ಹಾಗಾಗಿ ಅವರು ಚಿತ್ರೀಕರಣ ಮುಗಿಸಿದ್ದ ಕೊನೆಯ ಚಿತ್ರ ಎನ್ನಬಹುದು.‌
ಶೀಘ್ರದಲ್ಲೇ ಚಿರಂಜೀವಿ ಸರ್ಜಾ ಅಭಿನಯದ "ರಾಜಮಾರ್ತಾಂಡ" ಚಿತ್ರ ಬಿಡುಗಡೆ  title=

ಬೆಂಗಳೂರು: ಬಹುಬೇಗ ನಮ್ಮನೆಲ್ಲಾ ಅಗಲಿದ ನಟ ಚಿರಂಜೀವಿ ಸರ್ಜಾ ಅಭಿನಯದ "ರಾಜಮಾರ್ತಾಂಡ" ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

ಯುಗಾದಿ ಹಬ್ಬದ ಶುಭದಿನದಂದು ಈ ಚಿತ್ರದ ಪೋಸ್ಟರನ್ನು ಅರ್ಜುನ್ ಗುರೂಜಿ ಮೈಸೂರಿನ ಡಿ ಆರ್ ಸಿಯಲ್ಲಿ ಬಿಡುಗಡೆ ಮಾಡಿದರು.ಡಿ.ಸಿ.ಪಿ ಪ್ರಕಾಶ್ ಗೌಡ್ರು ಹಾಗೂ ಡಿ ಆರ್ ಸಿಯ ಎಂ.ಡಿ ಶ್ಯಾಮಲ ಅವರು ಈ ಸಂದರ್ಭದಲ್ಲಿ ‌ಉಪಸ್ಥಿತರಿದ್ದರು.ಚಿರಂಜೀವಿ ಸರ್ಜಾ (Chiranjeevi sarja) ಅವರ ಸಾವಿನ ಮುಂಚೆಯೇ ಚಿತ್ರೀಕರಣ ಪೂರ್ತಿಯಾಗಿತ್ತು. ಹಾಗಾಗಿ ಅವರು ಚಿತ್ರೀಕರಣ ಮುಗಿಸಿದ್ದ ಕೊನೆಯ ಚಿತ್ರ ಎನ್ನಬಹುದು.‌

ಇದನ್ನೂ ಓದಿ: "ದುಡ್ಡು ಹಾಳಾದ್ರೆ ಹೇಗೋ ಸಂಪಾದಿಸಬಹುದು, ಆದರೆ ವ್ಯಕ್ತಿತ್ವವನ್ನು ಹೇಗೆ ಸಂಪಾದಿಸೋದು?" ಅದಿತಿ ಹೀಗೆ ಹೇಳಿದ್ದೇಕೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ಧ್ವನಿ ನೀಡಿರುವುದು ಸಹ ಕೇಳಬಹುದು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರೆ.ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು  ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: Sandalwood: ‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರದ ಟ್ರೈಲರ್ ಬಿಡುಗಡೆ

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚತ್ರಕ್ಕಿದೆ.ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News