ಬೆಂಗಳೂರು: ಹಾಲಿವುಡ್ ಚಿತ್ರ ರೀತಿಯ ಮೇಕಿಂಗ್ ನಂತೆ ದೇಶದ ಗಮನ ಸೆಳೆದಿರುವ  ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಈಗ ಎಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದೆ ಎಂದರೆ ಬಾಲಿವುಡ್ ನ ಬಾದಾಷಾ ಎನಿಸಿಕೊಂಡಿರುವ ಶಾರುಖ್ ಖಾನ್ ಚಿತ್ರವನ್ನು ಕೂಡ ಹಿಂದಿಕ್ಕುವಂತೆ ಮಾಡಿದೆ. 



COMMERCIAL BREAK
SCROLL TO CONTINUE READING

ಕೇವಲ ಇದಷ್ಟೇ ಅಲ್ಲ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ  ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ 2.0 ಬಿಟ್ಟರೆ ಈಗ ಎರಡನೇ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿರುವ ಚಿತ್ರವೆಂದರೆ ಎಂದು ಕೆಜಿಎಫ್ ಅಷ್ಟಕ್ಕೂ ಇದು ಹೇಗಪ್ಪಾ ಅಂತಿರಾ ಈಗಾಗಲೇ ಸಿನಿಮಾ ರೇಟಿಂಗ್ ವೆಬ್ ಸೈಟ್ ಐಎಂಡಿಬಿಯ ಮೋಸ್ಟ್‌ ಆ್ಯಂಟಿಸಿಪೇಟೆಡ್‌ ಗ್ಲೋಬಲ್‌ ಮೂವಿಸ್ ಹಾಗೂ ಟಿವಿ ಟ್ರೆಂಡಿಂಗ್‌ ಪಟ್ಟಿಯ ಪ್ರಕಾರ ಮೊದಲನೇ ಸ್ಥಾನದಲ್ಲಿರುವ  ರಜನಿಕಾಂತ್ ಅಭಿನಯದ ರೋಬೋ 2.0  ಚಿತ್ರವು 37.1% ರಷ್ಟಿದ್ದರೆ  ಎರಡನೇ ಸ್ಥಾನದಲ್ಲಿ ಯಶ ಅಭಿನಯದ ಕೆಜಿಎಫ್  22.0% ರಷ್ಟು ರೇಟಿಂಗ್ ಹೊಂದಿದೆ.ಆ ಮೂಲಕ ಬಾಲಿವುಡ್ ನ ಬಾದಷಾ ಶಾರುಖ್ ಅಭಿನಯದ ಜೀರೋ ಚಿತ್ರ 17.5 ರಷ್ಟು ರೇಟಿಂಗ್ ಮೂಲಕ  ಮೂರನೇ ಸ್ಥಾನದಲ್ಲಿದೆ. 



ಆ ಮೂಲಕ  ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ನಟನ ಚಿತ್ರವೊಂದು ಈಗ ಬಾಲಿವುಡ್ ದಿಗ್ಗಜ ನಟರನ್ನೇ ಹಿಂದಿಕ್ಕುವ ಮೂಲಕ  ಟಾಪ್ 2 ಸ್ಥಾನವನ್ನು ಪಡೆದುಕೊಂಡಿದೆ.