Rocking Star Yash: ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಯಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ರಾಕಿ ಭಾಯ್ ಮಾಡಿರುವ ಕೆಲಸ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ನಂತರ ಬಹುಮಟ್ಟಿಗೆ ಖ್ಯಾತಿ ಪಡೆದ ಕನ್ನಡದ ಸೂಪರ್ ಸ್ಟಾರ್ ಯಶ್, ಅತ್ಯಂತ ಜನಪ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಶ್ 700ಕ್ಕೂ ಹೆಚ್ಚು ಅಭಿಮಾನಿಗಳೊಂದಿಗೆ ಸೆಲ್ಫಿ ಹಾಗೂ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಈವೆಂಟ್ ಆಯೋಜಕರು ಗ್ರೂಪ್‌ ಫೋಟೋವನ್ನು ಕ್ಲಿಕ್ ಮಾಡಿಕೊಂಡರು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Watch: ಬ್ರಾಲೆಸ್ ಡ್ರೆಸ್ ಧರಿಸಿ ಮುಜುಗರ ಅನುಭವಿಸಿದ ಪ್ರಿಯಾಂಕಾ ಚೋಪ್ರಾ


ಯಶ್ ತಮ್ಮ ವೃತ್ತಿಜೀವನದಲ್ಲಿ ಮತ್ತು ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ 2 ರೊಂದಿಗೆ ಅತಿದೊಡ್ಡ ಹಿಟ್ ನೀಡಿದರು. ನಟ ಯಶ್ ಈಗ ತಮ್ಮ ಮುಂದಿನ ಚಿತ್ರವನ್ನು ಇನ್ನೂ ಘೋಷಿಸಿಲ್ಲ. ನಟ ಯಶ್ ಅವರ ಲುಕ್‌ ಕಂಡು ಫ್ಯಾನ್ಸ್‌ ಫಿದಾ ಆದರು. ಸ್ಟಾರ್ ಹೀರೋ, ಹೀರೋಯಿನ್, ಸೆಲೆಬ್ರಿಟಿಗಳು ಕಾಣಿಸಿಕೊಂಡ ತಕ್ಷಣ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ತನ್ನ ಸ್ಟಾರ್‌ಡಮ್ ಅನ್ನು ಬದಿಗಿಟ್ಟು 1 ಗಂಟೆ ನಿಂತು 700 ಕ್ಕೂ ಹೆಚ್ಚು ಜನರ ಜೊತೆ ನಟ ಯಶ್‌ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. 


ಯಶ್ ತಮ್ಮ ವೃತ್ತಿಜೀವನದ ಸುಮಾರು ಎಂಟು ವರ್ಷಗಳನ್ನು ಕೆಜಿಎಫ್ ಸಿನಿಮಾಗಾಗಿಯೇ ಮೀಸಲಿಟ್ಟಿದ್ದಾರೆ. KGF 3 ಸಾಧ್ಯತೆಯ ಬಗ್ಗೆ ಮಾತನಾಡಿದ ಯಶ್, "ನಮ್ಮಲ್ಲಿ ಯೋಜನೆ ಇದೆ. ಆದರೆ ಶೀಘ್ರದಲ್ಲೇ ಅಲ್ಲ. ನಾನು ಬೇರೆ ಏನಾದರೂ ಮಾಡಬೇಕೆಂದು ಬಯಸುತ್ತೇನೆ. 6-7 ವರ್ಷಗಳಿಂದ ನಾನು ಕೆಜಿಎಫ್ ಮಾಡುತ್ತಿದ್ದೇನೆ" ಎಂದರು. 


ಇದನ್ನೂ ಓದಿ : ShivaRajkumar: ದರ್ಶನ್‌ಗೆ ಚಪ್ಪಲಿ ಎಸೆತ: ಫ್ಯಾನ್ಸ್ ಒತ್ತಾಯದ ಬೆನ್ನಲ್ಲೇ ಶಿವಣ್ಣ ಪ್ರತಿಕ್ರಿಯೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.