Watch: ಬ್ರಾಲೆಸ್ ಡ್ರೆಸ್ ಧರಿಸಿ ಮುಜುಗರ ಅನುಭವಿಸಿದ ಪ್ರಿಯಾಂಕಾ ಚೋಪ್ರಾ

Priyanka Chopra: ಬಾಲಿವುಡ್‌ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ, ಬ್ರಾಲೆಸ್ ಉಡುಪನ್ನು ಧರಿಸಿ ಸಂದರ್ಶನ ನೀಡುವಾಗ ಮುಜುಗರ ಅನುಭವಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

Written by - Chetana Devarmani | Last Updated : Dec 19, 2022, 04:55 PM IST
  • ಬಾಲಿವುಡ್‌ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ
  • ಬ್ರಾಲೆಸ್ ಡ್ರೆಸ್ ಧರಿಸಿ ಮುಜುಗರ ಅನುಭವಿಸಿದ ನಟಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದ ವಿಡಿಯೋ
Watch: ಬ್ರಾಲೆಸ್ ಡ್ರೆಸ್ ಧರಿಸಿ ಮುಜುಗರ ಅನುಭವಿಸಿದ ಪ್ರಿಯಾಂಕಾ ಚೋಪ್ರಾ  title=
ಪ್ರಿಯಾಂಕಾ ಚೋಪ್ರಾ

Priyanka Chopra Oops Moment: ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಖ್ಯಾತಿ ಪಡೆದ ನಟಿ ಪ್ರಿಯಾಂಕಾ ಚೋಪ್ರಾ, ತಮ್ಮ ಲುಕ್‌ನಿಂದ ಆಗಾಗ್ಗೆ ಸುದ್ದಿಯಲ್ಲಿತ್ತಾರೆ. ಆದಾಗ್ಯೂ, ಬೋಲ್ಡ್ ಲುಕ್‌ನಿಂದಾಗಿ ಅನೇಕ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗಿದ್ದಾರೆ. ಕಳೆದ ವರ್ಷದ BAFTA ಅವಾರ್ಡ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ಡಿಸೈನರ್ ಡ್ರೆಸ್‌ಗಳನ್ನು ಧರಿಸಿ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರು. ಆ ಸಂದರ್ಭದಲ್ಲೂ ಟ್ರೋಲ್‌ ಆಗಿದ್ದರು. ಇದೀಗ ಮತ್ತೊಮ್ಮೆ ಪ್ರಿಯಾಂಕಾ ಟ್ರೋಲ್‌ ಆಗಿದ್ದಾರೆ. 

ಇದನ್ನೂ ಓದಿ : ShivaRajkumar: ದರ್ಶನ್‌ಗೆ ಚಪ್ಪಲಿ ಎಸೆತ: ಫ್ಯಾನ್ಸ್ ಒತ್ತಾಯದ ಬೆನ್ನಲ್ಲೇ ಶಿವಣ್ಣ ಪ್ರತಿಕ್ರಿಯೆ

ವಾಸ್ತವವಾಗಿ, ಈ ವೀಡಿಯೊ ಏಪ್ರಿಲ್ 2021 ರ BAFTA ಪ್ರಶಸ್ತಿಯದ್ದಾಗಿದೆ. ಈ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ವಿಪರೀತ ಬೋಲ್ಡ್ ಡ್ರೆಸ್ ಧರಿಸಿದ್ದರು. ಆ ಸಮಯದಲ್ಲಿ ಅವರ ಅನೇಕ ಹಾಟ್ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಸಂದರ್ಶನದ ವೇಳೆ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಡ್ರೆಸ್‌ನಿಂದಾಗಿ ತುಂಬಾ ಮುಜುಗರಕ್ಕೀಡಾಗುವುದನ್ನು ವೀಡಿಯೊದಲ್ಲಿ ನೋಡಬಹುದು. ಸಂಭಾಷಣೆಯ ಸಮಯದಲ್ಲಿ, ಅವರು ತಮ್ಮ ಎರಡೂ ಕೈಗಳಿಂದ ಜಾಕೆಟ್ ಅನ್ನು ನಿಭಾಯಿಸಿದರು.

ಪ್ರಿಯಾಂಕಾ ಚೋಪ್ರಾ ಅವರ ಲುಕ್‌ ಬಗ್ಗೆ ಮಾತನಾಡುತ್ತಾ, ಅವರು ಬಿಳಿ ಬಣ್ಣದ ಧೋತಿ ಪ್ಯಾಂಟ್‌ ಜೊತೆ ಗುಲಾಬಿ ಬಣ್ಣದ ಕಸೂತಿ ಮಾಡಿದ ಜಾಕೆಟ್‌ನ್ನು ಧರಿಸಿದ್ದಾರೆ. ಇದರ ಜೊತೆ ಪ್ರಿಯಾಂಕಾ ಚೋಪ್ರಾ ಕಪ್ಪು ಪಾದರಕ್ಷೆಗಳು, ಪರಿಪೂರ್ಣ ಮೇಕ್ಅಪ್ ನೊಂದಿಗೆ ನೋಟವನ್ನು ಪೂರ್ಣಗೊಳಿಸಿದರು. ಆದರೆ ಅವರ ಜಾಕೆಟ್‌ನ ಮುಂಭಾಗವು ಸಂಪೂರ್ಣವಾಗಿ ತೆರೆದಿತ್ತು. ಈ ಲುಕ್‌ನಲ್ಲಿ ಪ್ರಿಯಾಂಕಾ ಬೆರಗಾಗಿದ್ದರೂ, ಆಕೆಯ ಬಟ್ಟೆಗಾಗಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ : IMDb Top 10 Indian Movies: ಐಎಂಡಿಬಿ ಟಾಪ್​ 10 ಚಿತ್ರಗಳಲ್ಲಿ ಕನ್ನಡ ಸಿನಿಮಾಗಳದ್ದೇ ಮೇಲುಗೈ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News