ಬೆಂಗಳೂರು: ಚಂದನವನದ ಖ್ಯಾತ ಜೋಡಿ ಯಶ್-ರಾಧಿಕಾ ಪಂಡಿತ್ ಎರಡನೇ ಮಗುವಿಗೆ ತಂದೆ-ತಾಯಿ ಆಗಿದ್ದಾರೆ. ಹೌದು, 2018 ಡಿಸಂಬರ್ 2 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನಟಿ ರಾಧಿಕಾ ಪಂಡಿತ್, ಬುಧವಾರ(ಅಕ್ಟೋಬರ್ 30, 2019) ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಸಂದೇಶ ಶೇರ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್, ಐರಾ(ಯಶ್ ಮಗಳು) ಧ್ವನಿ.... ಅವಳು ಏನನ್ನು ಹೇಳಲು ಬಯಸುತ್ತಿದ್ದಾಳೆ ಅಂದರೆ, ಆಕೆಗೆ ಇಂದು(ಅಕ್ಟೋಬರ್ 30) ತಮ್ಮ ಸಿಕ್ಕಿದ್ದಾನೆ. ಸಂತೋಷ ದ್ವಿಗುಣವಾಗಿದೆ. ಇನ್ನು ಕಾಯಲು ಸಾಧ್ಯವಿಲ್ಲ. ನಿಮ್ಮ ಎಲ್ಲ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು ... 


ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆಗೆ ಸದಾ ಚಿರಋಣಿ, ನಿಮ್ಮ ಆಶೀರ್ವಾದ ಹೀಗೆ ನಮ್ಮ ಮೇಲಿರಲಿ. ನಿಮ್ಮ ಪ್ರೀತಿಯ ಯಶ್ ಮತ್ತು ರಾಧಿಕಾ... ಸ್ವಲ್ಪ ಬ್ಯುಸಿ ಕಣ್ರಪ್ಪ ನನ್ನ ಮಕ್ಕಳ ಜೊತೆ, ಸದ್ಯಕ್ಕೆ ಅಡ್ಜಸ್ಟ್ ಮಾಡ್ಕೊಳಿ... ಎಂದಿದ್ದಾರೆ.


ಅವರ ಧ್ವನಿಯನ್ನೊಮ್ಮೆ ಕೇಳಿ...