ಬೆಂಗಳೂರು :  ಆಂಧ್ರ ಪ್ರದೇಶ ಪ್ರವಾಸೋದ್ಯಮ ಮತ್ತು ಕ್ರೀಡಾ ಸಚಿವ ಆರ್‌ಕೆ ರೋಜಾ ಅವರ ಪುತ್ರಿ ಅಂಶುಮಾಲಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿಗೆ ಆರ್ ಕೆ ರೋಜಾ ಪ್ರತಿಕ್ರಿಯಿಸಿದ್ದಾರೆ. ನಟನಾ ವೃತ್ತಿಯನ್ನು ಆರಿಸಿಕೊಳ್ಳುವುದು ತಪ್ಪು ಎಂದು ನಾನು ಎಂದಿಗೂ ಹೇಳಲಿಲ್ಲ ಎಂದು ಅವರು ಹೇಳಿದರು. ಮಗಳು ಮತ್ತು ಮಗ ಚಿತ್ರರಂಗಕ್ಕೆ ನಟಿಸಲು ಬಂದರೆ ತುಂಬಾ ಖುಷಿಯಾಗುತ್ತೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಅಂಶುಮಾಲಿಕಾ ಚೆನ್ನಾಗಿ ಓದಿ ವಿಜ್ಞಾನಿಯಾಗಬೇಕೆಂಬ ಆಸೆಯಿದೆ . ಚೆನ್ನಾಗಿ ಓದುತ್ತಿದ್ದಾಳೆ, ಇದುವರೆಗೂ ಸಿನಿಮಾ ರಂಗಕ್ಕೆ ಬರುವ ಯೋಚನೆ ಮಾಡಿಲ್ಲ. ಸಿನಿಮಾ ರಂಗಕ್ಕೆ ಬಂದರೆ ತಾಯಿಯಾಗಿ ಆಶೀರ್ವಾದ ಮಾಡಿ ಬೆಂಬಲವಾಗಿ ನಿಲ್ಲುತ್ತೇನೆ ಎಂದಿದ್ದಾರೆ. ಇಲ್ಲವಾದರೆ.. ವ್ಯಾಸಂಗದಲ್ಲಿ ಮುಂದಿರುವ ಅಂಶುಮಾಲಿಕಾ ಚಿಕ್ಕ ವಯಸ್ಸಿನಲ್ಲೇ ಸಮಾಜ ಸೇವೆಯತ್ತ ಆಕರ್ಷಿತರಾಗಿ ದತ್ತಿ ಸಂಸ್ಥೆಗೆ ನೆರವು ನೀಡುತ್ತಿದ್ದಾರೆ ಅದಕ್ಕೂ ನನ್ನ ಬೆಂಬಲ ಇದೆ ಎಂದು ರೋಜಾ ಹೇಳಿದ್ದಾರೆ.


ಇದನ್ನೂ ಓದಿ: ಕತ್ತಿ ಹಿಡಿದ ಶಿವಣ್ಣನ ಮುಂದೆ ಕಲ್ಲು ಹಿಡಿದು ನಿಂತ ಅದಿತಿ : ರಕ್ತಸಿಕ್ತ ಕಥೆಯಲ್ಲಿ ಅರುಣ್‌ ಸಾಗರ್‌ ಪುತ್ರಿ


ಇನ್ನು ರೋಜಾ ಅವರ ಮಗಳು ಅಂಶು ಮಲಿಕಾ ಚಿಕ್ಕ ವಯಸ್ಸಿನಲ್ಲಿ ತುಂಬಾ ಎತ್ತರಕ್ಕೆ ಬೆಳೆದ ಹುಡುಗಿ. ಪುಸ್ತಕಗಳನ್ನು ಬರೆಯುವುದು ಸೇರಿದಂತೆ ವಿಶ್ವ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಮಾಜ ಸೇವೆ ಮಾಡುವಲ್ಲಿಯೂ ಮುಂದಿದ್ದಾರೆ. ಅಲ್ಲದೆ ಬಾಲ್ಯದಿಂದಲೇ ಸಮಾಜ ಸೇವೆಯತ್ತ ಆಕರ್ಷಿತರಾಗಿರುವ ಅಂಶು ಸ್ವಯಂ ಸೇವಾ ಸಂಸ್ಥೆಗೆ ನೆರವು ನೀಡುತ್ತಿದ್ದಾರೆ.


ಒಟ್ಟಿನಲ್ಲಿ ಅಮ್ಮನಂತೆ ಸೌಂದರ್ಯವತಿಯಾಗಿರುವ ಅಂಶುಮಾಲಿಕಾ ಎಲ್ಲಾ ಸ್ಟಾರ್‌ ನಟರ ಮಕ್ಕಳಿಗಿಂತ ಕೊಂಚ ವಿಭಿನ್ನವಾಗಿದ್ದಾರೆ. ನಟರ ಮಕ್ಕಳು ಎತ್ತರಕ್ಕೆ ಬೆಳೆಯುತ್ತಲ್ಲೇ ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ. ಆದ್ರೆ ಅಂಶುಮಾಲಿಕಾ ಮಾತ್ರ ಸಮಾಜ ಸೇವೆಯಂತಹ ಕಾರ್ಯಕ್ಕೆ ಮುಂದಾಗಿರುವುದು ಖುಷಿ ವಿಚಾರ. ಅದರೂ ರೋಜ ಅವರ ಅಭಿಮಾನಿಗಳು ಸಿನಿರಂಗದಲ್ಲಿ ಅಮ್ಮನ ಸ್ಥಾನವನ್ನು ಮಗಳಾದರೂ ತಂಬುತ್ತಾರಾ ಅಂತ ಕಾಯ್ದು ನೋಡುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.