Roopesh Shetty : ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆ ಇನ್ನೇನು ಕೆಲವೇ ಗಂಟೆಗಳಲ್ಲಿ ಶುರುವಾಗಲಿದೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ಮೊದಲ ಐದು ಫೈನಲಿಸ್ಟ್‌ಗಳಾಗಿದ್ದು, ಅಂತಿಮ ವಾರಕ್ಕೆ ಕಾಲಿಟ್ಟಿದ್ದಾರೆ. ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯಲಿದೆ ಇಂದು ಸಂಜೆ ನಡೆಯಲಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : BBK 9: ಟಾಸ್ಕ್‌ಗೂ ಸೈ, ಮನರಂಜನೆಯಲ್ಲೂ ಮೇಲುಗೈ.. ‘ಬಿಗ್ ಬಾಸ್’ ಗೆಲ್ತಾರಾ ದೀಪಿಕಾ ದಾಸ್?


ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ಗ್ರ್ಯಾಂಡ್‌ ಫಿನಾಲೆ ಇಂದು ಸಂಜೆ ನಡೆಯಲಿದೆ. ಇಂದು ಅಗ್ರ ಐದು ಫೈನಲಿಸ್ಟ್‌ಗಳಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್‌ ಆಗುತ್ತಾರೆ. ಅಂತಿಮವಾಗಿ, ಬಿಗ್ ಬಾಸ್ ಕನ್ನಡ 9 ರ ಅಗ್ರ ಮೂರು ಫೈನಲಿಸ್ಟ್‌ಗಳು ಉಳಿದುಕೊಳ್ಳುತ್ತಾರೆ.  


ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ 1 ಕಾರ್ಯಕ್ರಮದ ವಿನ್ನರ್‌ ಆಗಿದ್ದರು. ವೀಕ್ಷಕರಿಂದ ಅತೀ ಹೆಚ್ಚು ಮತಗಳನ್ನು ಪಡೆದಿದ್ದರು. ಅತೀ ಹೆಚ್ಚು ವೋಟ್ ಪಡೆದ ರೂಪೇಶ್ ಶೆಟ್ಟಿ ಅವರಿಗೆ 5 ಲಕ್ಷ ರೂಪಾಯಿಯನ್ನು ಬಹುಮಾನ ನೀಡಲಾಗಿತ್ತು. ಸದಾ ನಗು ಮೊಗದಿಂದ ಇರುತ್ತಿದ್ದ ರೂಪೇಶ್‌ ಶೆಟ್ಟಿ ಟಾಸ್ಕ್‌ಗಳಲ್ಲಿ ರೂಪೇಶ್ ಶೆಟ್ಟಿ ಉತ್ತಮ ಪರ್ಫಾಮೆನ್ಸ್ ನೀಡಿದ್ದಾರೆ. ಕ್ಯಾಪ್ಟನ್ ಆಗಿ, ಅತ್ಯುತ್ತಮ ಮೆಡೆಲ್ ಪಡೆದಿದ್ದಾರೆ. ಕಿಚ್ಚನಿಂದ ಮೆಚ್ಚುಗೆಯ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಆದರೆ ಕಳಪೆ ಪಡೆದು ಜೈಲಿಗೆ ಮಾತ್ರ ಹೋಗಿಲ್ಲ. ಎಂಟರ್‌ಟೇನ್ಮೆಂಟ್ ವಿಷಯದಲ್ಲೂ ರೂಪೇಶ್ ಶೆಟ್ಟಿ ಎಲ್ಲರ ಮನಗೆದ್ದಿದ್ದಾರೆ. ಇದೀಗ ಅತಿ ಹೆಚ್ಚು ವೋಟ್‌ ಪಡೆದು, ಬಿಗ್‌ಬಾಸ್‌ ಗೆಲ್ಲುತ್ತಾರಾ ಕಾದು ನೋಡಬೇಕಿದೆ. 


ಇದನ್ನೂ ಓದಿ : ನೇರ, ನಿಷ್ಠುರ ಮಾತಿನಿಂದಲೇ ಗುರುತಿಸಿಕೊಂಡ ರೂಪೇಶ್ ರಾಜಣ್ಣಗೆ ಒಲಿಯುತ್ತಾ ವಿನ್ನರ್‌ ಪಟ್ಟ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.