Roopesh Rajanna : ನೇರ, ನಿಷ್ಠುರ ಮಾತಿನಿಂದಲೇ ಗುರುತಿಸಿಕೊಂಡ ರೂಪೇಶ್ ರಾಜಣ್ಣಗೆ ಒಲಿಯುತ್ತಾ ವಿನ್ನರ್‌ ಪಟ್ಟ?

Roopesh Rajanna : ಎಲ್ಲಾ ಹಿರಿಯ ಅಭ್ಯರ್ಥಿಗಳ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೆ ಬಂದ ಏಕೈಕ ನವೀನ ಅಂದ್ರೆ ಅದು ರೂಪೇಶ್ ರಾಜಣ್ಣ. ಹೋರಾಟದ ಮನೋಭಾವದಿಂದಲೇ ಎಲ್ಲರ ಗಮನಸೆಳೆದಿದ್ದಾರೆ ರೂಪೇಶ್‌ ರಾಜಣ್ಣ.   

Written by - Chetana Devarmani | Last Updated : Dec 30, 2022, 06:01 PM IST
  • ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್‌ ಫಿನಾಲೆ
  • ನೇರ, ನಿಷ್ಠುರ ಮಾತಿನಿಂದಲೇ ಗುರುತಿಸಿಕೊಂಡ ರೂಪೇಶ್ ರಾಜಣ್ಣ
  • ಬಿಗ್ ಬಾಸ್ ವಿನ್ನರ್ ಆಗ್ತಾರಾ ರೂಪೇಶ್ ರಾಜಣ್ಣ?
Roopesh Rajanna : ನೇರ, ನಿಷ್ಠುರ ಮಾತಿನಿಂದಲೇ ಗುರುತಿಸಿಕೊಂಡ ರೂಪೇಶ್ ರಾಜಣ್ಣಗೆ ಒಲಿಯುತ್ತಾ ವಿನ್ನರ್‌ ಪಟ್ಟ?  title=
ರೂಪೇಶ್ ರಾಜಣ್ಣ

Bigg Boss Kannada Season 9 : ಎಲ್ಲಾ ಹಿರಿಯ ಅಭ್ಯರ್ಥಿಗಳ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೆ ಬಂದ ಏಕೈಕ ನವೀನ ಅಂದ್ರೆ ಅದು ರೂಪೇಶ್ ರಾಜಣ್ಣ. ಹೋರಾಟದ ಮನೋಭಾವದಿಂದಲೇ ಎಲ್ಲರ ಗಮನಸೆಳೆದಿದ್ದಾರೆ ರೂಪೇಶ್‌ ರಾಜಣ್ಣ. ಬಿಗ್ ಬಾಸ್ ಮನೆಯೊಳಗೆ ವಿವಾದಗಳು ಮತ್ತು ಜಗಳಗಳ ಪಾಲಿಗೆ ಹೆಸರುವಾಸಿಯಾಗಿದ್ದಾರೆ. ಗಾಜಿನಮನೆಯೊಳಗಿನ ಅನೇಕ ಘಟನೆಗಳ ಬಗ್ಗೆ ಅವರು ಯಾವಾಗಲೂ ದನಿಯಾಗಿದ್ದಾರೆ ಮತ್ತು ಮನೆಯವರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಶಾಂತ್ ಸಂಬರಗಿ ಅವರೊಂದಿಗಿನ ಅವರ ಭಿನ್ನಾಭಿಪ್ರಾಯವನ್ನು ಎಂದಿಗೂ ಮರೆಯಲು ಅಸಾಧ್ಯ. ಟಾಸ್ಕ್‌ ವಿಚಾರದಲ್ಲೂ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಆಕ್ರೋಶ ಭರಿತ ರೂಪೇಶ್‌ ರಾಜಣ್ಣ ಅವರಿಗಿಂತ ಮುಗ್ಧ ಮನಸ್ಸಿನ ಅವರ ವ್ಯಕ್ತಿತ್ವ ಎಲ್ಲರಿಗೂ ಬಲು ಇಷ್ಟವಾಗಿದೆ. 

ಇದನ್ನೂ ಓದಿ : ಕ್ಯಾಪ್ಟನ್, ಉತ್ತಮ, ಕಳಪೆ ಏನೂ ಇಲ್ಲದೇ ಜನರ ಮನಗೆದ್ದ ದಿವ್ಯಾ ವಿನ್ನರ್ ಆಗ್ತಾರಾ?

ಮೊದ ಮೊದಲಿಗೆ ಜಗದಿಂದಲೇ ಹೈಲೈಟ್‌ ಆಗುತ್ತಿದ್ದ ರೂಪೇಶ್‌ ರಾಜಣ್ಣ, ನಂತರ ಆಟದ ವರಸೆ ಬದಲಿಸಿಕೊಂಡರು. ಎವರ್‌ಗ್ರೀನ್ ಸಾಂಗ್‌ಗಳನ್ನ ಸೊಗಸಾಗಿ ಹಾಡುವ ಮೂಲಕ ಜನರ ಹೃದಯ ಕದ್ದರು. ಇವರ ಕಂಠ ಸಿರಿಗೆ ಇತರ ಸ್ಪರ್ಧಿಗಳು ಸಹ ಫಿದಾ ಆದರು. ಕನ್ನಡ ನಟರುಗಳ ಮಿಮಿಕ್ರಿ ಮಾಡುವ ಮೂಲಕ ಮನರಂಜನೆಯಲ್ಲೂ ರೂಪೇಶ್‌ ರಾಜಣ್ಣ ಎಲ್ಲರ ಮನಸೆಳೆದರು. 

ತಪ್ಪು ಎನಿಸಿದ ಸಂದರ್ಭದಲ್ಲಿ ಅದನ್ನು ವಾದ ಮಾಡೋದ್ರಲ್ಲಿ ರೂಪೇಶ್ ರಾಜಣ್ಣ ನಂಬರ್ 1. ಪ್ರಶಾಂತ್ ಸಂಬರಗಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅನುಪಮಾ ಗೌಡ ಸೇರಿದಂರೆ ಬಿಗ್‌ ಬಾಸ್‌ ಮನೆಯಲ್ಲಿದ್ದ ಬಹುತೇಕ ಎಲ್ಲರ ಜೊತೆ ರೂಪೇಶ್ ರಾಜಣ್ಣ ಒಂದಲ್ಲ ಒಂದು ಸಂದರ್ಭದಲ್ಲಿ ವಾಗ್ವಾದಕ್ಕೆ ಇಳಿದಿದ್ದಾರೆ. ಇದೇ ಕಾರಣಕ್ಕೆ ಮೂರು ಬಾರಿ ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿದ್ದರು. ಕ್ಯಾಪ್ಟನ್ ಆಗಿದ್ದರು. ಅತ್ಯುತ್ತಮ ಕೂಡ ಪಡೆದಿದ್ದಾರೆ. ಇದೀಗ ಟಾಪ್‌ 5 ಕಂಟೆಸ್ಟಂಟ್‌ಗಳಲ್ಲಿ ಒಬ್ಬರಾಗಿದ್ದಾರೆ. ತಮ್ಮ ಆಟದಿಂದ ಜನರ ಮನಸ್ಸನ್ನು ಗೆದ್ದ ರೂಪೇಶ್‌ ರಾಜಣ್ಣ ಬಿಗ್‌ಬಾಸ್‌ ಗೆಲ್ಲುತ್ತಾರಾ ಕಾದು ನೋಡಬೇಕಿದೆ. 

ಇದನ್ನೂ ಓದಿ : BBK 9: ಟಾಸ್ಕ್‌ಗೂ ಸೈ, ಮನರಂಜನೆಯಲ್ಲೂ ಮೇಲುಗೈ.. ‘ಬಿಗ್ ಬಾಸ್’ ಗೆಲ್ತಾರಾ ದೀಪಿಕಾ ದಾಸ್?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News