ಸೌತ್‌ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್‌ ಸಹ ನಿಬ್ಬೆರಗಾಗುತ್ತಿದೆ. ಇದಕ್ಕೆ ಕಾರಣ ಅಂತಹ ಸಿನಿಮಾಗಳನ್ನು ದಕ್ಷಿಣ ಭಾರತದ ಸಿನಿರಂಗದವರು ತಯಾರಿಸುತ್ತಿರುವುದು. ಆರ್​ಆರ್​ಆರ್, ಬಾಹುಬಲಿ, ಕೆಜಿಎಫ್‌ 2 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಾವಿರಾರು ಕೋಟಿ ಬಾಚಿಕೊಂಡಿವೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಲರ್ ಫುಲ್ 'ಡ್ಯಾನ್ಸಿಂಗ್ ಚಾಂಪಿಯನ್' ಫಿನಾಲೆಗೆ' ಅದ್ಧೂರಿ ತೆರೆ


ರಾಮ್ ಚರಣ್ ಹಾಗೂ ಜ್ಯೂನಿಯರ್‌ ಎನ್​ಟಿಆರ್ ನಟನೆಯ ಆರ್‌ಆರ್‌ಆರ್‌ ಚಿತ್ರ ಸಿನಿರಸಿಕರ ಮನಗೆದ್ದಿದೆ. ಈ ಚಿತ್ರದಲ್ಲಿ ಹಲವು ಮೈನವಿರೇಳಿಸುವ ದೃಶ್ಯಗಳಿವೆ. ಇದನ್ನು ಹೇಗೆ ಶೂಟ್ ಮಾಡಿರಬಹುದು ಎಂಬ ಪ್ರಶ್ನೆ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಕಾಡುತ್ತದೆ. ಇದಕ್ಕೆ ಉತ್ತರವಾಗಿಯೇ ಆರ್‌ಆರ್‌ಆರ್‌ ಚಿತ್ರತಂಡ ಇದೀಗ ಮೇಕಿಂಗ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.


ಡಿವಿವಿ ದಾನಯ್ಯ ಅವರ ಆರ್​ಆರ್​ಆರ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಅವರು ಈ ಚಿತ್ರಕ್ಕಾಗಿ 500 ಕೋಟಿ ರೂ. ಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿದ್ದು, ಅತ್ಯದ್ಭುತವಾಗಿ ಚಿತ್ರ ಮೂಡಿಬಂದಿದೆ. ಅಷ್ಟೇ ಅಲ್ಲದೇ ನೋಡುಗರ ಮನ ಕೂಡ ಗೆದ್ದಿದೆ. ಈ ಸಿನಿಮಾದಲ್ಲಿ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮರಾಜುಭೇಟಿ ಆಗುವ ದೃಶ್ಯ ಸಿನಿಮಾದ ಆರಂಭದಲ್ಲಿಯೇ ಬರುತ್ತದೆ. ಈ ದೃಶ್ಯ ನಡೆಯೋದು ಒಂದು ಸೇತುವೆ ಮೇಲೆ. ಒಂದು ಕಡೆ ಸೇತುವೆ ಮೇಲೆ ಚಲಿಸುತ್ತಿರುವ ಟ್ರೇನ್​ಗೆ ಬೆಂಕಿ ಬಿದ್ದಿರುತ್ತದೆ. ಮತ್ತೊಂದೆಡೆ ಅದೇ ಸೇತುವೆ ಕೆಳ ಭಾಗದಲ್ಲಿ ಓರ್ವ ಬಾಲಕ  ತೆಪ್ಪದ ಮೇಲೆ ಹೋಗುತ್ತಿರುತ್ತಾನೆ. ಬಾಲಕನ ರಕ್ಷಣೆಗೆ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮರಾಜು ಒಂದಾಗುತ್ತಾರೆ. ಈ ದೃಶ್ಯ ತೆರೆ ಮೇಲೆ ನೋಡುಗರಿಗೆ ಮೈನವಿರೇಲಿಸುವಂತೆ ಮೂಡಿಬಂದಿದೆ. ಆದರೆ ಇದರ ಮೇಕಿಂಗ್‌ ನೋಡಿದವರು ಅವಾಕ್ಕಾಗುವುದು ಗ್ಯಾರಂಟಿ. 


ಇದನ್ನೂ ಓದಿ: ರಾ ರಾ ರಕ್ಕಮ್ಮ ಸಾಂಗ್‌ಗೆ ಭರ್ಜರಿ ಸ್ಟೆಪ್ ಹಾಕಿದ ನಟಿ ಆಶಿಕಾ ರಂಗನಾಥ್


ಈ ದೃಶ್ಯವನ್ನು ಸಂಪೂರ್ಣವಾಗಿ ಒಂದು ಸೆಟ್​ನಲ್ಲಿ ಶೂಟ್ ಮಾಡಿದ್ದಾರೆ. ಆದರೆ, ಇದಕ್ಕೆ ಬಳಸಿದ ಗ್ರಾಫಿಕ್ಸ್ ಮಾತ್ರ ಮನಮೋಹಕವಾಗಿದೆ. ವಿದೇಶದ ಗ್ರಾಫಿಕ್ಸ್​ ಸಂಸ್ಥೆಗಳು ಇದಕ್ಕಾಗಿ ಕೆಲಸ ಮಾಡಿವೆ. ಈಗ ಹಂಚಿಕೊಂಡಿರುವ ಮೇಕಿಂಗ್ ವಿಡಿಯೋದಲ್ಲಿ ಆ ಬಗ್ಗೆ ಮಾಹಿತಿ ನೀಡಲಾಗಿದೆ. ಒಟ್ಟಾರೆ ಆರ್‌ಆರ್‌ಆರ್‌ ಸಿನಿಮಾದ ಮೇಕಿಂಗ್‌ ನೋಡಿದ ಜನ ನಿಬ್ಬೆರಗಾಗುತ್ತಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.