RRR Collection: ತೆಲುಗು ರಾಜ್ಯಗಳಲ್ಲಿ RRR 2ನೇ ದಿನದ ಕಲೆಕ್ಷನ್ ಎಷ್ಟು?

ರಾಜಮೌಳಿ ನಿರ್ದೇಶನದ RRR ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಒಂದೊಂದೇ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ಮೊದಲ ದಿನ ಹುಬ್ಬೇರಿಸುವಂತೆ ಬಾಕ್ಸಾಫೀಸ್ ಲೂಟಿ ಮಾಡಿದ್ದ  RRR ಎರಡನೇ ದಿನವೂ ಚಿಂದಿ ಉಡಾಯಿಸಿದೆ..

Written by - Chetana Devarmani | Last Updated : Mar 27, 2022, 03:44 PM IST
  • ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ರಾಜಮೌಳಿ ನಿರ್ದೇಶನದ RRR
  • ಮೊದಲ ದಿನವೇ ಬಾಕ್ಸಾಫೀಸ್ ಲೂಟಿ ಮಾಡಿದ್ದ RRR
  • ಎರಡನೇ ದಿನವೂ ಚಿಂದಿ ಉಡಾಯಿಸಿದೆ RRR ಚಿತ್ರ
  • ತೆಲುಗು ರಾಜ್ಯಗಳಲ್ಲಿ RRR 2ನೇ ದಿನದ ಕಲೆಕ್ಷನ್ ಎಷ್ಟು?
RRR Collection: ತೆಲುಗು ರಾಜ್ಯಗಳಲ್ಲಿ RRR 2ನೇ ದಿನದ ಕಲೆಕ್ಷನ್ ಎಷ್ಟು? title=
ಆರ್‌ ಆರ್‌ ಆರ್‌

ರಾಜಮೌಳಿ ನಿರ್ದೇಶನದ RRR ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಒಂದೊಂದೇ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ಮೊದಲ ದಿನ ಹುಬ್ಬೇರಿಸುವಂತೆ ಬಾಕ್ಸಾಫೀಸ್ ಲೂಟಿ ಮಾಡಿದ್ದ  RRR ಎರಡನೇ ದಿನವೂ ಚಿಂದಿ ಉಡಾಯಿಸಿದೆ..

ಇದನ್ನೂ ಓದಿ: BeastvsKGF2: 'ಕೆಜಿಎಫ್ 2' ಚಿತ್ರಕ್ಕೆ ಸವಾಲೆಸೆಯಲು ಸಜ್ಜಾದ 'ಬೀಸ್ಟ್'.. ರೇಸ್‌ನಲ್ಲಿ ಗೆಲ್ಲೋರು ಯಾರು?

ರಿಲೀಸ್ ಗೂ ಮುಂಚೆಯೇ ಕುತೂಹಲ ಹುಟ್ಟುಹಾಕಿದ್ದ RRR ಮೊದಲ ದಿನವೇ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ರಿಲೀಸ್ ಆದ 24 ಗಂಟೆಯಲ್ಲೇ ಕೋಟಿ ಕೋಟಿ ಬಾಚಿಕೊಂಡಿದೆ. ಅಲ್ಲದೇ ಎರಡನೇ ದಿನವೂ ಚಿಂದಿ ರಾಜಮೌಳಿ ನಿರ್ದೇಶನದ ಈ ಚಿತ್ರ.

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ರಾಜಮೌಳಿ ಅಂದ್ರೆನೆ ಬಿಗ್ ಬಜೆಟ್ ಸಿನಿಮಾ ಅನ್ನೋ ಅಷ್ಟು ಟ್ರೆಂಡ್ ಕ್ರಿಯೇಟ್ ಆಗಿದೆ. ರಾಜಮೌಳಿ ಸಿನಿಮಾ ಸೆಟ್ ಏರಿದಾಗಲೇ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸೋದು ಪಕ್ಕಾ ಆಗಿರುತ್ತೆ. 

ರಿಲೀಸ್ ಗೂ ಮುಂಚೆಯೇ ಕುತೂಹಲ ಹುಟ್ಟುಹಾಕಿದ್ದ RRR ಮೊದಲ ದಿನವೇ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಆಂಧ್ರ ಪ್ರದೇಶ, ತೆಲಂಗಾಣದಲ್ಲಿ RRR ಬಾಕ್ಸಾಫೀಸ್ ಕಲೆಕ್ಷನ್ ಜೋರಾಗಿದೆ. 

RRR ಇಡಿ ವಿಶ್ವದದ್ಯಾಂತ ಬಿಡುಗಡೆಯಾಗಿದೆ. ಎರಡನೇ ದಿನ ಕೇವಲ ಆಂಧ್ರ, ತೆಲಂಗಾಣದಲ್ಲಿ ಮಾತ್ರ ಅದ್ಭುತ ಕೆಲಕ್ಷನ್ ಮಾಡಿದೆ.  

ಮೊದಲ ದಿನ ಈ ಸಿನಿಮಾ ಯಾರೂ ಊಹಿಸದಷ್ಟು ಗಳಿಕೆ ಮಾಡಿತ್ತು. ಎರಡನೇ ದಿನ ಆ ಕಲೆಕ್ಷನ್‌ನಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಆದರೂ ಆಂಧ್ರ, ತೆಲಂಗಾಣದಲ್ಲಿ ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಕೆಜಿಎಫ್‌-2' ಜೊತೆ 'ಕೆಜಿಎಫ್‌-1' ರೀ ರಿಲೀಸ್..!‌ ಕೇರಳದಲ್ಲಿ ಹೇಗಿದೆ ಗೊತ್ತಾ ಯಶ್‌ ಹವಾ..?

ಎರಡನೇ ದಿನ  RRR ಬರೋಬ್ಬರಿ 30 ಕೋಟಿಯಷ್ಟು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ 100 ಕೋಟಿ ಗಳಿಸಿದೆ. ಒಟ್ಟಿನಲ್ಲಿ ಇದೀಗ RRR ಚಿತ್ರ ಬಾಕ್ಸಾಫೀಸ್ ನಲ್ಲಿ ದಾಖಲೆಯನ್ನೇ ಬರೆದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News