Pushpa 2 ಸಿನಿಮಾದಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ? ಕೊನೆಗೂ ಮೌನ ಮುರಿದ ಕಿರಿಕ್ ಬೆಡಗಿ!
Pushpa The Rule : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತೀಯ ಚಿತ್ರರಂಗದಲ್ಲಿ ಭಾರಿ ಬಜ್ ಅನ್ನು ಸೃಷ್ಟಿಸಿತು. ಭಾಗ ಒಂದರ ಯಶಸ್ಸಿನ ನಂತರ ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯಡಿ ಚಿತ್ರದ ಮುಂದುವರಿದ ಭಾಗವು ಬರಲಿದೆ.
Pushpa The Rule : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಭಾರತೀಯ ಚಿತ್ರರಂಗದಲ್ಲಿ ಭಾರಿ ಬಜ್ ಅನ್ನು ಸೃಷ್ಟಿಸಿತು. ಭಾಗ ಒಂದರ ಯಶಸ್ಸಿನ ನಂತರ ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯಡಿ ಚಿತ್ರದ ಮುಂದುವರಿದ ಭಾಗವು ಬರಲಿದೆ. ಆದರೆ ಪುಷ್ಪ 2 ರಲ್ಲಿ ರಶ್ಮಿಕಾ ಮಂದಣ್ಣ ಬದಲಿಗೆ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ವದಂತಿಗಳಿವೆ. ಇದೀಗ ಈ ಬಗ್ಗೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೀರಸಿಂಹ ರೆಡ್ಡಿ HD ಪ್ರಿಂಟ್ ಲೀಕ್..!
ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಮಾಧ್ಯಮಗಳ ಗಮನ ಸೆಳೆದಿದ್ದಾರೆ. ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ವದಂತಿಗಳನ್ನು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಗಳ ಮೂಲಕ ತನ್ನ ಅಭಿಮಾನಿಗಳೊಂದಿಗೆ ಕ್ಯಾಂಡಿಡ್ ಸಂವಾದದ ಸಮಯದಲ್ಲಿ, ಅವರ ಅಭಿಮಾನಿಯೊಬ್ಬರು ಮುಂದಿನ ಚಿತ್ರದ ಅಪ್‌ಡೇಟ್ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮಂದಣ್ಣ, 4 ಸಿನಿಮಾಗಳ ಜತೆಗೆ ಇನ್ನೂ ಹಲವು ಅಚ್ಚರಿಗಳು ಬರಲಿವೆ. ಪೈಪ್‌ಲೈನ್‌ನಲ್ಲಿರುವ ನಾಲ್ಕು ಚಲನಚಿತ್ರ ಶೀರ್ಷಿಕೆಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ವಾರಿಸು, ಮಿಷನ್ ಮಜ್ನು, ಪುಷ್ಪಾ: ದಿ ರೂಲ್ ಮತ್ತು ಅನಿಮಲ್ ಸದ್ಯ ತಮ್ಮ ಕೈಯಲ್ಲಿರುವ ಸಿನಿಮಾಗಳು ಎಂದು ರಶ್ಮಿಕಾ ಉತ್ತರಿಸಿದ್ದಾರೆ.
ಇದು ಎಲ್ಲಾ ಪುಷ್ಪಾ ಅಭಿಮಾನಿಗಳಿಗೆ, ಶ್ರೀವಲ್ಲಿಯನ್ನು ಬದಲಾಯಿಸಲಾಗುತ್ತಿಲ್ಲ ಎಂಬ ಸಮಾಧಾನವನ್ನು ನೀಡಿದೆ. ಪುಷ್ಪ: ದಿ ರೂಲ್ ಎಂಬುದು ವರ್ಷದ ಬಹು ನಿರೀಕ್ಷಿತ ಚಿತ್ರವಾಗಿದ್ದು, ಪುಷ್ಪ: ದಿ ರೈಸ್‌ನ ಅದೇ ಪಾತ್ರವನ್ನು ಹಿಡಿದಿಟ್ಟುಕೊಂಡು ಕಥೆಯನ್ನು ಮುಂದುವರೆಸಲಾಗುತ್ತದೆ. 2021 ರಲ್ಲಿ ಪುಷ್ಪಾ 1 ಬಿಡುಗಡೆಯಾಯಿತು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಇತರರು ನಟಿಸಿದ್ದಾರೆ. ಪುಷ್ಪ 2 ಈ ವರ್ಷ ಬಿಡುಗಡೆಯಾಗಲಿದೆ ಆದರೆ ಅಂತಿಮ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
ಇದನ್ನೂ ಓದಿ : Sri Murali: ‘ಬಘೀರ’ ಚಿತ್ರದ ಶೂಟಿಂಗ್ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.