Sri Murali: ‘ಬಘೀರ’ ಚಿತ್ರದ ಶೂಟಿಂಗ್​ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು

Bagheera Movie: ಬಿಗ್​ ಬಜೆಟ್‌ ಸಿನಿಮಾ ಬಘೀರ ಚಿತ್ರೀಕರಣದ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರಂತೆ. 

Written by - Chetana Devarmani | Last Updated : Jan 13, 2023, 11:42 AM IST
  • ಬಿಗ್​ ಬಜೆಟ್‌ ಸಿನಿಮಾ ಬಘೀರ
  • ಚಿತ್ರದ ಶೂಟಿಂಗ್​ ವೇಳೆ ಅವಘಡ
  • ನಟ ಶ್ರೀಮುರಳಿ ಕಾಲಿಗೆ ಪೆಟ್ಟು
Sri Murali: ‘ಬಘೀರ’ ಚಿತ್ರದ ಶೂಟಿಂಗ್​ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು title=
ನಟ ಶ್ರೀಮುರಳಿ

Actor Srimurali injured : ಸ್ಯಾಂಡಲ್‌ವುಡ್‌ನ ರೋರಿಂಗ್ ಸ್ಟಾರ್ ಶ್ರೀಮುರಳಿ ಬಘೀರ ಸಿನಿಮಾ ಶೂಟಿಂಗ್‌ ವೇಳೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಬಘೀರ ಚಿತ್ರದ ಶೂಟಿಂಗ್‌ ವೇಳೆ ಅವಘಡ ಸಂಭವಿಸಿದೆ. ಬೆಂಗಳೂರಿನ ರಾಕ್‌ಲೈನ್ ಸ್ಟೂಡಿಯೋದಲ್ಲಿ ಬಘೀರ ಸಿನಿಮಾದ ಫೈಟಿಂಗ್ ಸೀಕ್ವೆನ್ಸ್ ಚಿತ್ರೀಕರಿಸಲಾಗುತ್ತಿತ್ತು. ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಶ್ರೀಮುರಳಿ ಅವರ ಮೊಣಕಾಲಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.  

ಇದನ್ನೂ ಓದಿ : ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೀರಸಿಂಹ ರೆಡ್ಡಿ HD ಪ್ರಿಂಟ್ ಲೀಕ್..!

ಸದ್ಯ ವೈರ್ಯರ ನಿಗಾದಲ್ಲಿ ಶ್ರೀಮುರಳಿ ಇದ್ದು, ಎರಡು ದಿನಗಳ ನಂತರ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಹೆಚ್ಚಿನ ಮಾಹಿತಿ ದೊರೆಯಬೇಕಿದೆ. ಬಘೀರಾ ಅತ್ಯಂತ ಯಶಸ್ವಿ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್‌ ನಿರ್ಮಿಸುತ್ತಿರುವ ಚಲನಚಿತ್ರವಾಗಿದೆ. ಪ್ರೊಡಕ್ಷನ್ ಹೌಸ್ ಮತ್ತೊಮ್ಮೆ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಕೈಜೋಡಿಸಿದೆ. ಹೊಂಬಾಳೆ ಫಿಲಂಸ್‌ ನಿರ್ಮಿಸಿರುವ ಕೆಜಿಎಫ್ ಸರಣಿಯನ್ನು ಪ್ರಶಾಂತ್ ನಿರ್ದೇಶಿಸಿದ್ದರು. ಇದೀಗ ಬಘೀರ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಡಾ ಸೂರಿ ನಿರ್ದೇಶನವಿದೆ.  

ಬಘೀರ ಸಿನಿಮಾ ಈಗಾಗಲೇ ರಿಲೀಸ್‌ ಆಗಿರುವ ಪೋಸ್ಟರ್‌ಗಳ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ಶ್ರೀಮುರಳಿ ಮಾಸ್​ ಲುಕ್‌ ಅಂತೂ ಸಿನಿಪ್ರಿಯರಲ್ಲಿ ಕಾತುರ ಮೂಡಿಸಿದೆ. ಶೀರ್ಷಿಕೆ ಕೂಡ ಡಿಫರೆಂಟ್​ ಆಗಿರುವ ಕಾರಣ ಈ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. 

ಇದನ್ನೂ ಓದಿ :  23 ದಿನದಲ್ಲಿ ಧ್ರುವ ಸರ್ಜಾ ಕಳೆದುಕೊಂಡ ತೂಕ ಕೇಳಿದ್ರೆ ಶಾಕ್‌ ಆಗ್ತೀರಾ!

&

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News