Vijay Devarakonda Ravi kiran movie : "ರಾಜಾವಾರು ರಾಣಿಗಾರು" ಖ್ಯಾತಿಯ ನಿರ್ದೇಶಕ ರವಿಕಿರಣ್ ಕೋಲಾ ಅವರೊಂದಿಗೆ ವಿಜಯ್ ತಮ್ಮ ಹೊಸ ಚಿತ್ರವನ್ನು ಮಾಡಲಿದ್ದಾರೆ. ದಿಲ್ ರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ʼಫ್ಯಾಮಿಲಿ ಸ್ಟಾರ್ʼ ದೊಡ್ಡ ಫ್ಲಾಪ್ ಕೊಟ್ಟರೂ ದಿಲ್ ರಾಜು ಮತ್ತೊಮ್ಮೆ ವಿಜಯ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾದ ಪೋಸ್ಟರ್ ರಿಲೀಸ್ ಆದ ಬೆನ್ನಲ್ಲೇ ಸಿನಿಮಾಗೆ ಸಂಬಂಧಿಸಿದ ಬಿಸಿ ಬಿಸಿ ಸುದ್ದಿಯೊಂದು ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ರವಿಕಿರಣ್‌ ಮತ್ತು ರೌಡಿ ಹೀರೋ ವಿಜಯ್ ಮುಂಬರುವ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ನಿರ್ದೇಶಕ ರವಿಕಿರಣ್ ಕೂಡ ಸಾಯಿ ಪಲ್ಲವಿಯನ್ನು ಕಲ್ಪಿಸಿಕೊಂಡು ಕಥೆಯಲ್ಲಿ ಒಂದು ಪಾತ್ರ ಬರೆದಿದ್ದಾರಂತೆ. ಹೀಗಾಗಿ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಗ್ರಾಮೀಣ ಆ್ಯಕ್ಷನ್ ಡ್ರಾಮಾ ಇರುವ ಈ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೂ ಹೆಚ್ಚಿನ ಆದ್ಯತೆ ಇದೆ ಎನ್ನಲಾಗಿದೆ.


ಇದನ್ನೂ ಓದಿ:ಆ ಖ್ಯಾತ ನಟನಿಂದಲೇ ಕುಡಿತದ ಚಟಕ್ಕೆ ಬಿದ್ದಿದ್ದೆ....! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ ಊರ್ವಶಿ


ಸಾಯಿ ಪಲ್ಲವಿ ಈಗಾಗಲೇ ದಿಲ್ ರಾಜು ಅವರ ಬ್ಯಾನರ್‌ನಲ್ಲಿ ಫಿದಾ ಮತ್ತು ಎಂಸಿಎ ಚಿತ್ರಗಳನ್ನು ಮಾಡಿರುವುದರಿಂದ ಅವರನ್ನು ಈ ಚಿತ್ರಕ್ಕೆ ಒಪ್ಪಿಸುವುದು ದೊಡ್ಡ ವಿಷಯವಲ್ಲ. ಸಾಯಿ ಪಲ್ಲವಿ ಇದುವರೆಗೂ ವಿಜಯ್ ದೇವರಕೊಂಡ ಜೊತೆ ತೆರೆ ಹಂಚಿಕೊಂಡಿರಲಿಲ್ಲ. ಈ ಜೋಡಿ ತೆರೆಗೆ ಫ್ರೆಶ್ ನೆಸ್ ತರಲಿದೆ ಎಂಬುದು ಸಿನಿರಸಿಕರ ನಂಬಿಕೆ.


ಇತ್ತೀಚಿಗೆ ರೌಡಿ ಬಾಯ್‌ ಸಿನಿಮಾಗಳಲ್ಲಿ ಲಿಪ್ ಲಾಕ್ ದೃಶ್ಯ ಕಾಮನ್‌ ಆಗಿದೆ. ಸಾಯಿ ಪಲ್ಲವಿ ಈ ಹಿಂದೆ ಅನೇಕ ಬಾರಿ ಇಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಅಂತ ಬಹಿರಂಗಪಡಿಸಿದ್ದಾರೆ. ಲಿಪ್ ಲಾಕ್ ದೃಶ್ಯಗಳಿಲ್ಲದೆ ಸಾಯಿ ಪಲ್ಲವಿಯನ್ನು ಗಮನದಲ್ಲಿಟ್ಟುಕೊಂಡು ರವಿಕಿರಣ್‌ ಕಥೆಯಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಬಹುದೇ ಎಂದು ಕಾಯ್ದು ನೋಡಬೇಕು. 


ಇದನ್ನೂ ಓದಿ:ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನಮಂಟಪ’ ಚಿತ್ರದ ಚಿತ್ರೀಕರಣ ಮುಕ್ತಾಯ!


ಈ ಚಿತ್ರಕ್ಕೆ ರೌಡಿ ಜನಾರ್ದನ್ ಎಂಬ ಶೀರ್ಷಿಕೆಯನ್ನು ಚಿತ್ರತಂಡ ನೀಡಲಿದೆ ಎಂದು ವರದಿಯಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಸದ್ಯ ವಿಜಯ್‌ ದೇವರಕೊಂಡ ಗೌತಮ್ ತಿನ್ನನೂರಿ ನಿರ್ದೇಶನ ಸಿನಿಮಾದಲ್ಲಿ ಪವರ್ ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.