ಆ ಖ್ಯಾತ ನಟನಿಂದಲೇ ಕುಡಿತದ ಚಟಕ್ಕೆ ಬಿದ್ದಿದ್ದೆ....! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ ಊರ್ವಶಿ

Actress Urvashi Addicted to alcohol : ಬಹುಭಾಷಾ ನಟಿ ಊರ್ವಶಿಯವರ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ತಮ್ಮ ಅದ್ಬುತ ನಟನೆ ಮತ್ತು ಸೌಂದರ್ಯದ ಮೂಲಕ ಸೌತ್‌ ಸಿನಿ ರಸಿಕರ ಮನಗೆದ್ದ ಚೆಲುವೆ ಈಕೆ. ಇತ್ತೀಚಿಗೆ ನಟಿ ತಮ್ಮ ಮೊದಲ ಡಿವೋರ್ಸ್‌ ಪ್ರಕರಣ ಕುರಿತು ಮಾತನಾಡುವಾಗ ಶಾಕಿಂಗ್‌ ವಿಚಾರವೊಂದನ್ನು ಬಿಚ್ಚಿಟ್ಟಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..
 

1 /6

ಕೇರಳದ ಕೊಲ್ಲಂನಲ್ಲಿ ಕವಿತಾ ರಂಜಿನಿಯಾಗಿ ಜನಿಸಿದ ನಟಿ ಊರ್ವಶಿ ದಕ್ಷಿಣದ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರು. 700 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಕೇರಳ ಮತ್ತು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.  

2 /6

10ನೇ ವಯಸ್ಸಿನಲ್ಲಿ ನಟನಾ ವೃತ್ತಿ ಪ್ರಾರಂಭಿಸಿದ ಊರ್ವಶಿ, ಸಿನಿಮಾ ಜೀವನದಷ್ಟು ಅವರ ವಯಕ್ತಿಕ ಜೀವನ ಅಷ್ಟು ವೈಭವಯುತವಾಗಿಲ್ಲ. ಕೌಟುಂಬಿಕ ಸಮಸ್ಯೆಯಿಂದ ಊರ್ವಶಿಯ ಕಿರಿಯ ಸಹೋದರ ರಾಜಕುಮಾರ 26ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರೇ, ಅದೇ ರೀತಿ ಅವರ ಸಹೋದರಿ ಕಲ್ಪನಾ ಕೆಲ ವರ್ಷಗಳ ಹಿಂದೆ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡರು.  

3 /6

ನಾಯಕ ನಟಿಯಾಗಿರುವಾಗಲೇ ಜನಪ್ರಿಯ ನಟ ಮನೋಜ್ ಕೆ ಜಯನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಊರ್ವಶಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಾರಣಾಂತರದಿಂದ ಮನೋಜ್‌ ಅವರಿಂದ ಡಿವೋರ್ಸ್‌ ಪಡೆದ ನಟಿ, 2013 ರಲ್ಲಿ ಚೆನ್ನೈ ಮೂಲದ ಕನ್ಸ್ಟ್ರಕ್ಷನ್ ಉದ್ಯಮದ ಮಾಲೀಕ ಶಿವಪ್ರಸಾದ್ ಅವರನ್ನು ವಿವಾಹವಾದರು. ಈ ದಂಪತಿಗೆ ಇಶಾನ್ ಪ್ರಜಾಪತಿ ಎಂಬ ಮಗನಿದ್ದಾನೆ.   

4 /6

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಊರ್ವಶಿ, ಮನೋಜ್ ಕೆ ಜಯನ್ ಜೊತೆಗಿನ ವಿಚ್ಛೇದನದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದರು. "ನಮ್ಮ ವಿಚ್ಛೇದನಕ್ಕೆ ಒಂದೇ ಕಾರಣವೆಂದರೆ ಮದ್ಯದ ಚಟ. ಅವರ ಕುಟುಂಬದ ಎಲ್ಲರೂ ಸೇರಿ ಒಟ್ಟಾಗಿ ಕುಡಿಯುತ್ತಿದ್ದರು.   

5 /6

ಆರಂಭದಲ್ಲಿ ಅವರು ನನಗೆ ಮದ್ಯಪಾನ ಮಾಡಲು ಒತ್ತಾಯಿಸಿದರು. ಪ್ರತಿದಿನ ಕುಡಿಸಿ ನನ್ನನ್ನು ಮದ್ಯ ವ್ಯಸನಿಯಾಗಿಸಿದರು. ವಿಷಯಗಳು ಅಂತಿಮವಾಗಿ ಡಿವೋರ್ಸ್‌ಗೆ ಕಾರಣವಾದವು. ಅಲ್ಲದೆ, ನನ್ನ ಮಗಳನ್ನು ನನ್ನಿಂದ ದೂರ ಮಾಡಿದ್ದು ಇದೇ ಕಾರಣಕ್ಕೆ ಅಂತ ನಟಿ ಆಘಾತಕಾರಿ ವಿಚಾರ ಬಿಚ್ಚಿಟ್ಟರು.  

6 /6

ಊರ್ವಶಿ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಚಲನಚಿತ್ರೋದ್ಯಮದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರು ಅವರ ನಟನೆಯ ರಾಮ ಶ್ಯಾಮ ಭಾಮ ಕನ್ನಡದ ಹಿಟ್‌ ಸಿನಿಮಾಗಳಲ್ಲಿ ಒಂದು.. ಊವರ್ಶಿ ಸಹೋದರಿಯರಾದ ಕಲಾರಂಜಿನಿ ಮತ್ತು ಕಲ್ಪನಾ ಕೂಡ ಜನಪ್ರಿಯ ನಟಿಯರು..