ತನ್ನ ಸಹಜ ಅಭಿನಯಕ್ಕಾಗಿ ಜನಪ್ರಿಯವಾಗಿರುವ ನಟಿ ಸಾಯಿ ಪಲ್ಲವಿ ಕೊನೆಯದಾಗಿ ನಾನಿ ಅಭಿನಯದ ಸೂಪರ್ ಹಿಟ್ ಚಲನಚಿತ್ರ ಶ್ಯಾಮ್ ಸಿಂಘ ರಾಯ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು, ಇದರಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದರು. ಚಿತ್ರರಂಗದ ಇತ್ತೀಚಿನ ಸುದ್ದಿಯ ಪ್ರಕಾರ, ಸಾಯಿ ಪಲ್ಲವಿ ತಮ್ಮ ಚಿತ್ರ ವಿರಾಟ ಪರ್ವಂ ಬಿಡುಗಡೆಯಾದ ನಂತರ ಶೀಘ್ರದಲ್ಲೇ ಮದುವೆಯಾಗಲು ಸಿದ್ಧರಾಗಿದ್ದಾರಂತೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ರಿಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪ್ರದಾನ


ನಟಿ ಸಾಯಿ ಪಲ್ಲವಿ ಈ ಹಿಂದೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ತಾವಿನ್ನು ಯಾಕೆ ಮದುವೆಯಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ನಟಿ ಸಾಯಿ ಪಲ್ಲವಿ ಬಹಿರಂಗ ಪಡಿಸಿದ್ದರು. ಅವರು ಈಗ ಮದುವೆಯ ಬಗ್ಗೆ ಯೋಚಿಸುತ್ತಿಲ್ಲ. ಮದುವೆಯಾಗುವುದೆಂದರೆ ತನ್ನ ಗಂಡನೊಂದಿಗೆ ಬಾಳಬೇಕೆನ್ನುವ ಅರ್ಥ ಮತ್ತು ತಾನು ತನ್ನ ತಂದೆ-ತಾಯಿಯನ್ನು ಬಿಡಲು ಸಿದ್ಧವಿಲ್ಲ ಎಂದು ಹೇಳಿದ್ದರು. ಆದರೆ ಈಗ ಸಾಯಿ ಪಲ್ಲವಿ ಮದುವೆಗೆ ರೆಡಿಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. 


ನಟಿ ಸಾಯಿ ಪಲ್ಲವಿಗೆ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರಂತೆ. ಮದುವೆಯಾಗಲು ಸಾಯಿ ಪಲ್ಲವಿ ನಿರ್ಧರಿಸಿದ್ದಾರಂತೆ. ಹಾಗಂತ ಈ ಬ್ಯೂಟಿ ಯಾರನ್ನೋ ಲವ್ ಮಾಡಿಲ್ಲ. ಈಕೆಯದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಹೀಗಾಗಿ ವರ ಬೇಟೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೋಷಕರು ತಮ್ಮ ಮಗಳಿಗೆ ಸರಿಯಾದ ವರನ ಹುಡುಕಾಟದಲ್ಲಿದ್ದಾರಂತೆ.


ಇದನ್ನೂ ಓದಿ: 109 ವರ್ಷಗಳ ಹಿಂದೆ ತಯಾರಾದ ಬಾಲಿವುಡ್ ಮೊದಲ ಚಲನಚಿತ್ರದ ಬಜೆಟ್ ಎಷ್ಟಿತ್ತು ಗೊತ್ತಾ?


ಶ್ಯಾಮ್ ಸಿಂಘ ರಾಯ್‌ ಬಿಡುಗಡೆಯಾದ ನಂತರ, ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಘೋಷಣೆ ಮಾಡಲಿಲ್ಲ ಎಂದು ತಿಳಿದಿದೆ. ಪೋಷಕರಿಗೆ ಮದುವೆಗೆ ಒಪ್ಪಿಗೆ ನೀಡಿರುವುದರಿಂದ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುತ್ತಿಲ್ಲ ಎಂಬ ವರದಿಗಳು ಬರುತ್ತಿವೆ. ಆದರೆ ಈ ಬಗ್ಗೆ ನಟಿ ಸಾಯಿಪಲ್ಲವಿ ಯಾವುದೇ ಸ್ಪಷ್ಟನೆ ನೀಡಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.