ಕರೀನಾ ಕಪೂರ್ ಹೆಸರಿನ ಹಚ್ಚೆ ತೆಗೆಸಿದ ಸೈಫ್ ಅಲಿ ಖಾನ್.. ಡಿವೋರ್ಸ್ ಚರ್ಚೆಗೆ ಕಾರಣವಾಯ್ತು ಈ ಫೋಟೋ!
Saif Ali Khan Kareena Kapoor : ಮದುವೆಯಾದ ಹೊಸತರಲ್ಲಿ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಹೆಸರನ್ನು ತಮ್ಮ ಆರ್ಮ್ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು.
Saif Ali Khan covers tattoo of Kareena Kapoor: ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಭಾರತದ ಅತ್ಯಂತ ಜನಪ್ರಿಯ ಬಿ-ಟೌನ್ ಜೋಡಿಗಳಲ್ಲಿ ಒಬ್ಬರು. ಅಕ್ಟೋಬರ್ 16, 2012 ರಂದು ಮದುವೆಯಾದ ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್.
ಮದುವೆಯಾದ ಹೊಸತರಲ್ಲಿ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಹೆಸರನ್ನು ತಮ್ಮ ಆರ್ಮ್ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ಹಿಂದಿಯಲ್ಲಿ ಕರೀನಾ ಎಂದು ಹಚ್ಚೆ ಹಾಕಿಸಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು.
ಇದನ್ನೂ ಓದಿ: 69 ವರ್ಷ.. 6 ಸಂಬಂಧ.. ಆದರೂ ಜೀವನದಲ್ಲಿ ಒಬ್ಬಂಟಿ! ಸಿನಿಮಾ ಜಗತ್ತನ್ನು ಆಳಿದ ಈ ತಾರೆ ಯಾರು ಗೊತ್ತೇ?
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಸೈಫ್ ಅಲಿ ಖಾನ್ ಕಂಡಾಗ ಅವರ ಕೈ ಮೇಲೆ ಕರೀನಾ ಹೆಸರಿನ ಹಳೆಯ ಟ್ಯಾಟೂವನ್ನು ಕವರ್ ಮಾಡಿದ ಹೊಸ ಟ್ಯಾಟೂ ಕಾಣಿಸಿತು. ಸೈಫ್ ಮೂಲ ಟ್ಯಾಟೂವನ್ನು ತೆಗೆದುಹಾಕಿ ಅದನ್ನು ಹೊಸ ಹಚ್ಚೆಯಿಂದ ಮುಚ್ಚಿದ್ದಾರೋ ಅಥವಾ ಮುಂಬರುವ ಚಲನಚಿತ್ರದಲ್ಲಿ ಪಾತ್ರದ ಚಿತ್ರಣಕ್ಕಾಗಿ ಹೊಸ ಶಾಯಿಯನ್ನು ಹಾಕಲಾಗಿದೆಯೋ ಎಂಬುದು ಸ್ಪಷ್ಟವಾಗಿಲ್ಲ.
[[{"fid":"406595","view_mode":"default","fields":{"format":"default","field_file_image_alt_text[und][0][value]":"Kareena Kapoor name on forearm ","field_file_image_title_text[und][0][value]":"ಕರೀನಾ ಕಪೂರ್ ಹೆಸರಿನ ಹಚ್ಚೆ"},"type":"media","field_deltas":{"1":{"format":"default","field_file_image_alt_text[und][0][value]":"Kareena Kapoor name on forearm ","field_file_image_title_text[und][0][value]":"ಕರೀನಾ ಕಪೂರ್ ಹೆಸರಿನ ಹಚ್ಚೆ"}},"link_text":false,"attributes":{"alt":"Kareena Kapoor name on forearm ","title":"ಕರೀನಾ ಕಪೂರ್ ಹೆಸರಿನ ಹಚ್ಚೆ","class":"media-element file-default","data-delta":"1"}}]]
ಇದನ್ನು ನೋಡಿದ ಅಭಿಮಾನಿಗಳು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ರಂಬ ಚರ್ಚೆಯನ್ನು ಶುರು ಮಾಡಿದ್ದರೆ. ಇವರಿಬ್ಬರೂ ವಿಚ್ಛೇದನ ಪಡೆಯಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸೈಫ್ ಅಲಿ ಖಾನ್ ಮೂರನೇ ಮದುವೆ ಆಗಬಹುದೆಂಬಂತೆ ಕಾಮೆಂಟ್ಸ್ ಹಾಕುತ್ತಿದ್ದಾರೆ.
ಇದನ್ನೂ ಓದಿ: ರಾಖಿ ಸಾವಂತ್ʼಗೆ ಇದ್ದಕ್ಕಿದ್ದಂತೆ ಆಗಿದ್ದೇನು? ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲಾದ್ರಾ!!
ಒಟ್ಟಾರೆ ಸೈಫ್ ಅಲಿ ಖಾನ್ ಅವರ ಈ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬೇಬೋ ಡಿವೋರ್ಸ್ ಚರ್ಚೆಗೆ ಕಾರಣವಾಗಿದೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮುಂಬೈನಲ್ಲಿ 4 ಅಂತಸ್ತಿನ ಮನೆಯಲ್ಲಿ ವಾಸಿಸುತ್ತಾರೆ. ಈ ಮನೆಯ ಬೆಲೆ ಸುಮಾರು 25 ರಿಂದ 30 ಕೋಟಿ ರೂಪಾಯಿ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.