ಮದುವೆಯಿಲ್ಲದೆ 45ನೇ ವಯಸ್ಸಿನಲ್ಲಿ ತಾಯಿಯಾದ ʼದಂಗಲ್ʼ ಸಿನಿಮಾ ನಟಿ..! ಫ್ಯಾನ್ಸ್ ಶಾಕ್
ಅಮೀರ್ ಖಾನ್ ಅಭಿನಯದ ʼದಂಗಲ್ʼ ಚಿತ್ರ ಹಲವಾರು ದಾಖಲೆಗಳನ್ನು ಬರೆದಿದೆ. ಇದುವರೆಗಿನ ಬಾಲಿವುಡ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೆಸರು ಮಾಡಿದೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದ ಸಾಕ್ಷಿ ಮದುವೆಯಾಗದೇ ತಾಯಿಯಾಗಿರುವ ವಿಚಾರ ಸಖತ್ ಸದ್ದು ಮಾಡುತ್ತಿದೆ.
Sakshi Tanwar : 2016ರಲ್ಲಿ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಿತ್ತು. ಈ ಚಿತ್ರ ಕೆಲವೇ ದಿನಗಳಲ್ಲಿ 1000 ಕೋಟಿ ದಾಟುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಈ ಚಿತ್ರವು ಚೀನಾದಲ್ಲಿ ಅದ್ಭುತ ಪ್ರದರ್ಶನ ಕಂಡಿತ್ತು. ದಂಗಲ್ ಇದುವರೆಗಿನ ಬಾಲಿವುಡ್ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಚಿತ್ರದಲ್ಲಿ ಅಮೀರ್ ಖಾನ್‌ಗೆ ನಾಯಕಿಯಾಗಿ ನಟಿಸಿದ್ದ ನಟಿ ಸಾಕ್ಷಿ ತನ್ವರ್ ತಮ್ಮ ಅಭಿನಯದಿಂದ ಮೆಚ್ಚುಗೆಗೆ ಪಾತ್ರವಾಗಿದ್ದರು.
ಹೌದು.. ದಂಗಲ್ ಚಿತ್ರದಲ್ಲಿ ಅಮೀರ್ ಖಾನ್‌ಗೆ ನಾಯಕಿಯಾಗಿ ನಟಿಸಿದ್ದ ನಟಿ ಸಾಕ್ಷಿ ತನ್ವರ್ ತಮ್ಮ ಅಭಿನಯದಿಂದ ಎಲ್ಲರನ್ನೂ ಮೆಚ್ಚುಗೆ ಗಳಿಸಿದ್ದರು. ಅಮೀರ್ ಖಾನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸತ್ಯಗಳು ತಿಳಿದರೆ ಆಶ್ಚರ್ಯವಾಗುತ್ತದೆ.
ಇದನ್ನೂ ಓದಿ:ಕಾಟೇರ ಚಿತ್ರದ ʻಯಾವ ಜನ್ಮದ ಗೆಳತಿʼ ಸಾಂಗ್ ಔಟ್!
ಟಿವಿ ಲೋಕದ ರಾಕ್‌ಸ್ಟಾರ್ ಸಾಕ್ಷಿಗೆ ಇನ್ನೂ ಮದುವೆಯಾಗಿಲ್ಲ. 50ರ ಹರೆಯದಲ್ಲೂ ಒಂಟಿ ಜೀವನ ನಡೆಸುತ್ತಿದ್ದಾರೆ. ಸುಮಾರು 5 ವರ್ಷಗಳ ಹಿಂದೆ ಒರ್ವ ಹೆಣ್ಣು ಮಗಳನ್ನು ದತ್ತು ಪಡೆದರು. ಅಂದಿನಿಂದ ಆ ಮಗುವಿನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಾಕ್ಷಿ ಅನೇಕ ಧಾರಾವಾಹಿಗಳಲ್ಲಿ ತಮ್ಮ ಪಾತ್ರಗಳ ಮೂಲಕ ಮಿಂಚಿದ್ದರು.
ಸಾಕ್ಷಿ ತನ್ವಾರ್ ಅವರು ತಮ್ಮ ವೃತ್ತಿಜೀವನದಲ್ಲಿ 37 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2011 ರಲ್ಲಿ ಕರಮ್ ಎಂಬ ಧಾರಾವಾಹಿಯ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಕಹಾನಿ ಘರ್ ಘರ್ ಕಿ, ಸಂಸಾರ್, ಕುಟುಂಬ, ವಿರಾಸತ್ ಮತ್ತು ಕಾವ್ಯಾಂಜಲಿಯಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಲ್ಲದೆ, ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಫೇರ್ ಆಗಲು ಹೋಗಿದ್ದೇ ಬ್ಯಾಕ್‌ಫೈರ್ ಆಯ್ತು! 64 ದಿನಗಳ ಸುಧೀರ್ಘ ಪ್ರಯಣದ ಬಗ್ಗೆ ಸ್ನೇಹಿತ್ ಮಾತು
ಟಿವಿ ಲೋಕದಲ್ಲಿ ಸಾಕ್ಷಿ ತನ್ವರ್ ಅವರದ್ದು ವಿಭಿನ್ನ ಸ್ಥಾನ. ಟಿವಿ ಜಗತ್ತಿನ ಅತ್ಯಂತ ದುಬಾರಿ ನಟಿಯರಲ್ಲಿ ಇವರು ಒಬ್ಬರು. ಮಾಧ್ಯಮ ವರದಿಗಳನ್ನು ನಂಬುವುದಾದರೆ, ಸಾಕ್ಷಿ ಪ್ರತಿ ಸಂಚಿಕೆಗೆ 1.5 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಕಳೆದ ವರ್ಷ ತೆರೆಕಂಡ ಸಾಮ್ರಾಟ್ ಪೃಥ್ವಿರಾಜ್ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.